ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ 79ನೇ ವಾರ್ಷಿಕ ಮಹಾಸಭೆ ವಿರಾಜಪೇಟೆಯ ಚಿಕ್ಕಪೇಟೆಯ ಶ್ರೀ ಆಂಜನೇಯ ದೇವಸ್ಥಾನದ ಪಕ್ಕದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪಿ. ಎನ್. ಹರಿಶಂಕರ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನೆರವೇರಿತು.
ನಾಪೋಕ್ಲು: ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ 79ನೇ ವಾರ್ಷಿಕ ಮಹಾಸಭೆ ವಿರಾಜಪೇಟೆಯ ಚಿಕ್ಕಪೇಟೆಯ ಶ್ರೀ ಆಂಜನೇಯ ದೇವಸ್ಥಾನದ ಪಕ್ಕದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪಿ. ಎನ್. ಹರಿಶಂಕರ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ಸದಸ್ಯರಾದ ಡಾ ಸುಲೋಚನ, ನಾರಾಯಣಮೂರ್ತಿ, ರಾಜಾರಾಮ್, ಮತ್ತಿತರರು ಸೂಚನೆಗಳನ್ನು ನೀಡಿದರು. ಸಾಧಕ ಹವ್ಯಕ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಯಿತು. ಎರಡು ಎಕರೆ ಸ್ಥಳದಲ್ಲಿ 240 ದೇಶಿಯ ಹಾಗೂ ವಿದೇಶಿಯ ತಳಿಗಳ ಹಣ್ಣುಗಳನ್ನು ಬೆಳೆದು ಸಾಧನೆ ಮಾಡಿದ ಕೃಷಿ ಸಾಧಕ ಚೆಯ್ಯಂಡಾಣೆಯ ಎಂ.ಎಸ್.ಸುಧೀರ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧೀರ್ 2004 ರಲ್ಲಿ ಹವ್ಯಾಸವಾಗಿ ಪ್ರಾರಂಭಿಸಿದ ಹಣ್ಣಿನ ಬೆಳೆಗಳ ಕೃಷಿ ಇಂದು ತನಗೆ ಗೌರವ ತಂದುಕೊಟ್ಟಿದೆ. ಸಂಘ ಸಂಸ್ಥೆಗಳ ಸನ್ಮಾನ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದರು.
ಗೌರವ ಕಾರ್ಯದರ್ಶಿ ಕೆ ಆರ್ ನಾರಾಯಣ ಮೂರ್ತಿ, ನಿರ್ದೇಶಕರಾದ ಪಿಎಸ್ ನರೇಂದ್ರ, ಕೆ.ಎಸ್. ಮಂಜುನಾಥ್, ಕೆ.ಆರ್. ರಂಜಿತ್ ಪಿ ಎನ್ ನಾಗರಾಜ್, ಎನ್.ಎಸ್ ಉದಯಶಂಕರ್ ಉಪಸ್ಥಿತರಿದ್ದರು. ಸಾವಿತ್ರಿ ಪ್ರಾರ್ಥಿಸಿದರು. ನಿರ್ದೇಶಕಿ ಗೀತಾ ಗಿರೀಶ್ ಕಳೆದ ಸಾಲಿನ ಮಹಾಸಭೆ ವರದಿ ವಾಚಿಸಿದರು. ಎ. ವಿ. ಮಂಜುನಾಥ್ ನಿರೂಪಿಸಿದರು. ಸಿ.ಎಸ್.ಸುರೇಶ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.