ವಿಶ್ವಭಾರತಿ ಸೌ. ಕ್ರೆ. ಸ. ಸಂಘದ ದಶಮಾನೋತ್ಸವ, ವಾರ್ಷಿಕ ಸಾಮಾನ್ಯ ಸಭೆ

KannadaprabhaNewsNetwork |  
Published : Oct 05, 2026, 02:45 AM IST
ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ದಶಮಾನೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಇಲ್ಲಿನ ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ದಶಮಾನೋತ್ಸವ ಹಾಗೂ 2025 - 26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಒಳಕಾಡು ಪದ್ಮಾವತಿ ಸಭಾಸದನದಲ್ಲಿ ನಡೆಯಿತು.

ಉಡುಪಿ: ಇಲ್ಲಿನ ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ದಶಮಾನೋತ್ಸವ ಹಾಗೂ 2025 - 26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಒಳಕಾಡು ಪದ್ಮಾವತಿ ಸಭಾಸದನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್. ಕೆ. ಉದ್ಘಾಟಿಸಿ, ಸಂಘವು ಹತ್ತು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪ್ರತೀಕ್ ಕಾಮತ್, ನಿತ್ಯಾನಂದ ವಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ವೀಣಾ ಮುರಳೀಧರ ಸಾಮಗ, ಕೆ. ಗಣಪತಿ ನಾಯಕ್, ಕುಂಜಿಬೆಟ್ಟು ನಾರಾಯಣ ಕಾಮತ್, ಅಜಿತ್ ಕುಮಾರ್, ಸುಭಾಸ್ ಕೊರಂಗ್ರಪಾಡಿ, ಡಾ. ಕೆ. ಉಷಾ ಎಸ್. ಪೈ ಹಾಗೂ ಕೆ. ಗಣೇಶ್ ಪೈ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಪಿ. ಜಗನ್ನಾಥ್ ಶೆಟ್ಟಿ ಅಂಪಾರು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಲೋಹಿತ್ ಜಿ. ಸಾಲಿಯಾನ್, ಲೆಕ್ಕಪರಿಶೋಧಕ ಕೆ. ಗಣೇಶ್ ಎಂ. ಕಾಮತ್ ಸಿ.ಎ., ಮುದ್ರಕರ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಬಿ. ಜಿ. ಸುಬ್ಬರಾವ್ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್. ಮಹೇಶ್ ಶೆಣೈ, ಸಂಘವು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 15.22 ಕೋಟಿ ರು. ವ್ಯವಹಾರ ನಡೆಸಿ, 1.08 ಕೋಟಿ ರು. ಆದಾಯ ಹಾಗೂ 19,68,397.68 ರು. ಲಾಭ ಗಳಿಸಿದೆ ಎಂದರು ಮತ್ತು ವರದಿ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ 9 ಡಿವಿಡೆಂಡ್ ಘೋಷಿಸಿದರು.

ಸಂಘದ ನಿರ್ದೇಶಕ ರವಿನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ. ಎಸ್. ವಿಶೇಷ ಉಪನ್ಯಾಸ ನೀಡಿದರು.

ಉಪಾಧ್ಯಕ್ಷ ಎಂ. ಸದಾಶಿವ ರಾವ್, ನಿರ್ದೇಶಕರಾದ ಉಮೇಶ್ ಜೋಗಿ, ಹೆಚ್. ಸುರೇಶ್ ಶೆಣೈ, ಎಂ. ಗಣೇಶ್ ಪೈ, ಅನಂತಕೃಷ್ಣ ಪ್ರಭು, ಪಿ. ಶ್ಯಾಮ್‌ಪ್ರಸಾದ್ ಕುಡ್ವ, ರೊನಾಲ್ಡ್ ಬ್ರೆಯಾನ್ ಬರ್ನಾರ್ಡ್, ಸೀಮಾ ಹೆಚ್. ಶೆಣೈ, ರಾಘು, ಹಾಗೂ ವೃತ್ತಿಪರ ನಿರ್ದೇಶಕರಾದ ಆನಂದ ಕೆ. ಪೂಜಾರಿ, ಸುಮತಿ ಪಿ ಮತ್ತು ಸಿಬ್ಬಂದಿಗಳಾದ ನಿತ್ಯಾನಂದ ಪೈ, ಕೆ. ವಿಜಯ್ ನಾಯಕ್ ಹಾಗೂ ವೈಷ್ಣವಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಮಾರುತಿ ಎನ್. ಪ್ರಭು ಮತ್ತು ರಾಮಚಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಿರಣ ಉಳಿತ್ತಾಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಆಕ್ಷೇಪಣೆಯಲ್ಲಿ ನಕಲಿ ಮರಣ ಪ್ರಮಾಣಪತ್ರ ಸಲ್ಲಿಕೆ
ಯುವಕರಲ್ಲಿ ನಾಯಕತ್ವ ಬೆಳೆಸಲು ಯುವ ಸಂಘ ಯೋಜನೆ