ಗಾಂಧೀಜಿ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸುಂಕಪ್ಪ ಗದಗ

KannadaprabhaNewsNetwork |  
Published : Oct 04, 2026, 02:45 AM IST
ಕೊಪ್ಪಳ ನಗರದ ಗಾಂಧಿನಗರದಲ್ಲಿ ಕರ್ನಾಟಕ ಕೃಷಿ ಕೂಲಿಕಾರರ ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಗಾಂಧೀಜಿ ಜಯಂತಿ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. | Kannada Prabha

ಸಾರಾಂಶ

ಕೊಪ್ಪಳ ನಗರದ ಗಾಂಧಿನಗರದಲ್ಲಿ ಕರ್ನಾಟಕ ಕೃಷಿ ಕೂಲಿಕಾರರ ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿ ವತಿಯಿಂದ ಗಾಂಧೀಜಿ ಜಯಂತಿ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ಕೊಪ್ಪಳ: ಮಹಾತ್ಮ ಗಾಂಧೀಜಿ ಅವರ ಅಹಿಂಸಾ, ಸತ್ಯ, ಸ್ವಾವಲಂಬನೆ ಹಾಗೂ ಗ್ರಾಮ ಸ್ವರಾಜ್ಯದ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಕೃಷಿ ಕೂಲಿಕಾರರ ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಕಾರ್ಯದರ್ಶಿ ಸುಂಕಪ್ಪ ಗದಗ ಹೇಳಿದರು.

ನಗರದ ಗಾಂಧಿನಗರದಲ್ಲಿ ಕರ್ನಾಟಕ ಕೃಷಿ ಕೂಲಿಕಾರರ ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿ ಅಸಹಕಾರ ಚಳವಳಿ, ದಂಡಿ ಉಪ್ಪಿನ ಸತ್ಯಾಗ್ರಹ ಹಾಗೂ ಕ್ವಿಟ್ ಇಂಡಿಯಾ ಚಳವಳಿಗಳ ಮೂಲಕ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ ಸ್ವಾತಂತ್ರ್ಯ ಚಳವಳಿಗೆ ಬಲ ನೀಡಿದರು ಎಂದರು.

ಬಡವರಿಗೆ ಮನೆ ಹಾಗೂ ನಿವೇಶನ, ಮೂಲಭೂತ ಸೌಕರ್ಯ ಮತ್ತು ಮಹಿಳಾ ಶೌಚಾಲಯ ಕಲ್ಪಿಸಬೇಕು. ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಬರ ಪರಿಹಾರ ನೀಡಬೇಕು. ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ತಡೆದು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಕನಿಷ್ಠ ₹2 ಲಕ್ಷದ ವರೆಗೆ ಕಡಿಮೆ ಬಡ್ಡಿ ಅಥವಾ ಬಡ್ಡಿರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಫೆ. 14ರಿಂದ 17ರ ವರೆಗೆ 11ನೇ ಅಖಿಲ ಭಾರತ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಪೂರ್ವಸಿದ್ಧತಾ ಕಾರ್ಯಗಳಿಗೆ ರಾಜ್ಯಾದ್ಯಂತ ಅ. 2ರಿಂದ ಚಾಲನೆ ನೀಡಲಾಗಿದೆ ಎಂದರು.

ನಾಗರಾಜ ಉತ್ತನೂರು, ಫಕೀರಮ್ಮ ಮಿರಗನತಂಡಿ, ಅಮರವ್ವ ಗದಗ, ಗಂಗಾಧರ ಕೊರವರ, ರೇಣುಕಮ್ಮ ಭೀಮನೂರು, ಹನುಮವ್ವ ಗೌಡರ, ಕಾಲೇಸಾಬ ಕರಡಿ, ರಾಮಣ್ಣ ದೊಡ್ಮನೆ, ಹುಸೇನ್‌ಸಾಬ್ ನದಾಫ್, ಶಾಂತಮ್ಮ ಬೆಂಗಳೂರಮನಿ, ಸುಂಕಮ್ಮ ಕುಕನೂರು, ಪೂಜಾ ಕುಕನೂರು, ರತ್ನಮ್ಮ ಕುಕನೂರು ಪಾಲ್ಗೊಂಡಿದ್ದರು. ಯಲ್ಲಮ್ಮ ಡೊಳ್ಳಿನ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ಉತ್ತನೂರು ಕಾರ್ಯಕ್ರಮ ನಿರೂಪಿಸಿದರು. ಫಕೀರಮ್ಮ ಮಿರಗನತಂಡಿ ಸ್ವಾಗತಿಸಿದರು. ಗಂಗಾಧರ ಕೊರವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಭವಿಷ್ಯಕ್ಕೆ ಪ್ರಕೃತಿ ಸಂರಕ್ಷಣೆ ಅಗತ್ಯ: ಬಾಗಡೆ
ಬೆಳೆ ವಿಮೆ ಪರಿಹಾರ ಪರಿಶೀಲಿಸಿ ಪರಿಷ್ಕರಣೆಗೆ ಪ್ರಭು ಒತ್ತಾಯ