ಕನ್ನಡಪ್ರಭ ವಾರ್ತೆ ಕೆಜಿಎಫ್
ಹಿಂದು ಸಮಾಜವು ಭವ್ಯ ಸಂಸ್ಕೃತಿ, ಸಂಸ್ಕಾರ ಹೊಂದಿದೆ. ನಮ್ಮ ಭವ್ಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸುವ ಕಾರ್ಯದಲ್ಲಿ ತೊಡಗಬೇಕಿದೆ ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.ನಗರದ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ೮೯ನೇ ಬ್ರಹ್ಮ ಮಹೋತ್ಸವದ ಪ್ರಯುಕ್ತವಾಗಿ ಒಕ್ಕಲಿಗ ಸಮುದಾಯದಿಂದ ಹನುಮಂತ ವಾಹನೋತ್ಸವದಲ್ಲಿ ಆಶೀರ್ವಚನ ನೀಡಿದರು.
ಸಂಸ್ಕೃತಿ, ಆಚಾರ ಮರೆಯಬಾರದುನಾವು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮರೆತರೆ ಜೀವನದಲ್ಲಿ ನೆಮ್ಮದಿ ಕಾಣುವುದಿಲ್ಲ, ಆದ್ದರಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ನೆಮ್ಮದಿ ಕಾಣಲಿದ್ದೇವೆ ಜೀವನದ ಪ್ರತಿ ಕ್ಷಣ ಪರಮತ್ಮನ ಚಿಂತನೆ ಮಾಡಬೇಕು, ಆದರೆ ಇಂದು ನಮ್ಮ ಸಂಸ್ಕೃತಿಗೆ ಧಕ್ಕೆ ಬರುವಂತೆ ನಡೆವಳಿಕೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.
ನೀವು ರಸ್ತೆಯಲ್ಲಿ ತೆಗೆದುಕೊಂಡು ತಂದ ಜ್ಯೋತಿ ಕೇವಲ ಎಣ್ಣೆ ಮತ್ತು ಬತ್ತಿಯಲ್ಲ, ಆದು ಜ್ಞಾನ ಜ್ಯೋತಿ. ನಿಮ್ಮ ಕುಟುಂಬ ಮತ್ತು ಅಂತರರಂಗ ಶುದ್ಧೀಕರಣಗೊಳಿಸುವ ಸಾಮರ್ಥ್ಯ ಹೊಂದಿದೆ ಹಾಗೂ ಪ್ರತಿಯೊಬ್ಬರು ದೀಪವನ್ನು ಹಚ್ಚುವುದರಿಂದ ನಿಮ್ಮ ಜೀವನದ ಅಂಧಕಾರ ತೊಲಗಿಸಿ ನಿಮ್ಮ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ. ಹಿರಿಯರು ಹುಟ್ಟು ಹಾಕಿರುವ ಸಂಸ್ಕೃತಿ ಇಂದಿನ ಪೀಳಿಗೆ ಮುಂದುವೆರೆಸಬೇಕು ಎಂದು ಹೇಳಿದರು.ಜಾತ್ರೆಗೆ ಸಹರಿಸುವ ಭರವಸೆಜಾತ್ರೆ ಎಂಬುದು ಒಂದು ಸಂಭ್ರಮದ ಹಬ್ಬ ಅದರಲ್ಲಿ ಎಲ್ಲರು ಭಾಗಿಯಾಗಿ ಅದ್ಧೂರಿಯಾಗಿ ಆಚರಿಸಿ, ವರ್ಷದಿಂದ ವರ್ಷಕ್ಕೆ ಜ್ಯೋತಿಗಳ ಸಂಖ್ಯೆಗಳು ಕಡಿಮೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಲ್ಲ ಜಾತ್ರೆ ಸಂಭ್ರಮದಲ್ಲಿ ಎಲ್ಲರು ಭಾಗವಹಿಸಬೇಕು. ನಮ್ಮ ಸಮುದಾಯ ನಡೆಸಿಕೊಡುವ ಜಾತ್ರಾ ಮಹೋತ್ಸವಕ್ಕೆ ಮಠದಿಂದ ಎಲ್ಲಾ ರೀತಿಯ ಸಹಕಾರ ನೀಡಲಿದ್ದೆವೆ ಎಂದು ಹೇಳಿದರು.ಶ್ರೀ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ಸುಪ್ರಭಾತದೊಂದಿಗೆ ಪ್ರಾರಂಭವಾಯಿತು. ದೇವಿಗೆ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರಾತಿ ಮಾಡಲಾಯಿತು. ಅನ್ನಮಯ್ಯ ಕೀರ್ತನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಸಮಂಜರಿ, ಚಂಡೆ ನೃತ್ಯನಗರದ ಪ್ರಮುಖ ರಸ್ತೆಯಲ್ಲಿ ರಸಮಂಜರಿ ಹಾಗೂ ಚಂಡೆ ನೃತ್ಯ ಜನರ ಆಕರ್ಷಣೆ ಸೆಳೆಯಿತು, ಸಮುದಾಯದ ಸಾವಿರಾರು ಭಕ್ತರು ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೆಜಿಎಫ್ ಒಕ್ಕಲಿಗ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಒಕ್ಕಲಿಗ ಸಂಘದ ಗೌರವ ಅಧ್ಯಕ್ಷ ಚಂದ್ರಶೇಖರ್‌ರೆಡ್ಡಿ (ಸುನೀಲ್), ಪ್ರದೀಪ್‌ಗೌಡ, ನಗರಸಭೆ ಸದಸ್ಯ ಮಾಣಿಕ್ಯ, ಅ.ಮು.ಲಕ್ಷ್ಮೀ ನಾರಾಯಣ್, ಆಂಜನೇಯಗೌಡ,ನರಸಿಂಹಯ್ಯ, ಅಶ್ವಥ್‌ನಾರಾಯಗೌಡ ಸುರೇಶ್ ಇದ್ದರು.