ಕೊಪ್ಪಳ: ವಿದ್ಯಾರ್ಥಿಗಳು ಅಧ್ಯಯನದ ಅವಧಿಯಲ್ಲಿ ನೈತಿಕತೆ ಅಳವಡಿಸಿಕೊಂಡು ಕ್ರೀಯಾಶೀಲ ಚಿಂತನೆಯ ಮೂಲಕ ಅವಕಾಶ ಸದುಪಯೊಗಪಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿ ಹೇಳಿದರು.
ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಇದರ ಮೂಲಕ ಭಾಷಾ ಜ್ಞಾನ, ಸಾಮಾನ್ಯಜ್ಞಾನ ವೃದ್ದಿಸಿಕೊಂಡು ನಿರಂತರ ಪರಿಶ್ರಮದ ಮೂಲಕ ಸಮಾಜದಲ್ಲಿ ಉನ್ನತ ಉದ್ಯೋಗಾವಕಾಶ ಪಡೆದುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಈ ವೇಳೆ ವಿವಿಯ ಸಫಾಯಿ ಕರ್ಮಚಾರಿ ಮಂಜಮ್ಮ, ಅಬ್ದುಲ್ ಅಜೀಜಸಾಬ ಸಸಿಗೆ ನೀರುಣಿಸುವ ಮೂಲಕ ವಿನೂತನವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಪತ್ರಿಕೋದ್ಯಮ ವಿಭಾಗದ ಡಾ.ಬಸವರಾಜ ಎಸ್. ಗಡಾದ,ಇಂಗ್ಲೀಷ ಪ್ರಾಧ್ಯಾಪಕ ಶಂಕರಪ್ಪ ಕೆ ಬೆಳಗಲ್, ರೋಹಿತ್ ಕುಮಾರ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಹಲವು ಸಲಹೆ ನೀಡಿದರು.
ಕೆ.ಸೆಟ್ ಪರೀಕ್ಷೆಯಲ್ಲಿ ಪಾಸಾದ ಇಂಗ್ಲಿಷ ವಿಭಾಗದ ವೀಣಾ,ಸಿದ್ದಮ್ಮ, ಕುಬೇರ, ಹನುಮೇಶ, ವಿವೇಕಾನಂದ ಹಾಗೂ ವಿಶ್ವನಾಥ ಇತರ ವಿದ್ಯಾರ್ಥಿಗಳಿಗೆ ಈ ವೇಳೆ ಸನ್ಮಾನಿಸಲಾಯಿತು.ಈ ವೇಳೆ ಪೂಜಾ, ಮಂಜುನಾಥ ಸೇರಿ ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಉಷಾ ಪ್ರಾರ್ಥಿಸಿದರು, ಹುಲುಗಪ್ಪ ಸ್ವಾಗತಿಸಿದರು, ವಿವೇಕ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಜಯಲಕ್ಷ್ಮಿ, ಕುಬೇರ ಜಂಟಿಯಾಗಿ ನಿರೂಪಿಸಿದರು. ಪ್ರಮೋದ ವಂದಿಸಿದರು.