ಉತ್ತಮ ಸಂವಹನ ಕಲೆಯೇ ಯಶಸ್ಸಿನ ಮೆಟ್ಟಿಲು: ಸಂಗಮೇಶ ಬಬಲೇಶ್ವರ

KannadaprabhaNewsNetwork |  
Published : Dec 05, 2025, 01:15 AM IST
ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಕ್ಕಳ ದಿನಾಚರಣೆಯ ಅಂಗವಾಗಿ ಆಯೋಜಿಸಿದ  ರಾಜ್ಯಮಟ್ಟದ ಭಾಷಣ ಸ್ಪರ್ಧೆಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸಿದರು | Kannada Prabha

ಸಾರಾಂಶ

ಮಾತು ಬಲ್ಲವನಿಗೆ ರೋಗವಿಲ್ಲ, ಊಟ ಬಲ್ಲವನಿಗೆ ಜಗಳವಿಲ್ಲವೆಂಬ ನಾನುಡಿಯಂತೆ ಭಾಷಣ ಕಲೆಯನ್ನು ಕರಗತ ಮಾಡಿಕೊಳ್ಳಬೇಕು.

ಧಾರವಾಡ:

ವಾಕ್ ಚಾರ್ತುರತೆ ಯಶಸ್ಸಿನ ಮೊದಲ ಮೆಟ್ಟಿಲಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಸಂವಹನ ಕೌಶಲ್ಯ ಕಲಿಸಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಇಲ್ಲಿನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗಗಳ ರಾಜ್ಯಮಟ್ಟದ ಭಾಷಣ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾತು ಬಲ್ಲವನಿಗೆ ರೋಗವಿಲ್ಲ, ಊಟ ಬಲ್ಲವನಿಗೆ ಜಗಳವಿಲ್ಲವೆಂಬ ನಾನುಡಿಯಂತೆ ಭಾಷಣ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದರು.ಯೋಜನಾಧಿಕಾರಿ ಅಕ್ಕಮಹಾದೇವಿ ಕೆ.ಹೆಚ್ ಮಾತನಾಡಿ, ರಾಜ್ಯದ ಸಮಸ್ತ ಮಕ್ಕಳ ಹಿತ ಕಾಪಾಡುವಲ್ಲಿ, ಮಕ್ಕಳ ಹಕ್ಕು ರಕ್ಷಿಸುವಲ್ಲಿ, ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಾಲವಿಕಾಸ ಅಕಾಡೆಮಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಗಜಾನನ ಮನ್ನಿಕೇರಿ, ಶ್ರೀನಿವಾಸ ಸೊರಟೂರ, ಸುಜಾತಾ ಬಂಡಾರಿ, ಅರ್ಜುನ ಲಮಾಣಿ, ಗಂಗಾಧರ ಕೊರವರ, ಮಂಜುನಾಥ ಕುರಕುರಿ, ಡಾ. ಶ್ರೀಧರ ಹೆಗಡೆ, ಈರಯ್ಯ ಹಿರೇಮಠ.ವಿಜೇತರು:ನವ ಭಾರತದ ನಿರ್ಮಾಣದಲ್ಲಿ ಪಂಡಿತ ಜವಾಹರಲಾಲ ನೆಹರು ಕೊಡುಗೆ ಕುರಿತು ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಮಹತಿ ಭಟ್ -ಪ್ರಥಮ (ಶಿರಸಿ), ಹಿತೈಷಿಣಿ ಡಿ.ಎಸ್. ದ್ವಿತೀಯ (ಬೆಂಗಳೂರು. ಗ್ರಾ), ತನು - ತೃತೀಯ (ಉಡುಪಿ), ಪ್ರೌಢ ವಿಭಾಗದಲ್ಲಿ

ಆಶ್ರಿತ ಜಿ. ಪ್ರಥಮ(ಶಿರಸಿ), ತಪಸ್ಯ ಆರ್. ಶೆಟ್ಟಿ-ದ್ವಿತೀಯ (ಚಿಕ್ಕಮಗಳೂರ), ಧನುಶ್ರೀ ಎಸ್. ಕುಲಾಲ್-ತೃತೀಯ (ಮಂಗಳೂರು), ಪದವಿ ಪೂರ್ವವಿಭಾಗದಲ್ಲಿ

ಐಮನ್‌ ಫಾತಿಮಾ ಗೋಡಿಹಾಳ-ಪ್ರಥಮ(ಧಾರವಾಡ), ಶೀತಲ ಕಮ್ಮಾರ-ದ್ವಿತೀಯ(ಬೆಳಗಾವಿ), ಚೈತ್ರಾ ಸಲುಡಿ-ತೃತೀಯ ಸ್ಥಾನ(ಕೊಪ್ಪಳ) ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

6 ತಿಂಗಳ ಸಂಬಳ ಬಾಕಿ- ವಿಶೇಷ ಶಿಕ್ಷಕರಿಂದ ಪ್ರತಿಭಟನೆ
ಅನಿಷ್ಟ ಪದ್ಧತಿಗಳು ಇನ್ನೂ ಜೀವಂತ