ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಪಂಚಮಸಾಲಿ ಸಮಾಜದ ಕಚೇರಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಯುವ ಘಟಕ, ನಗರ ಯುವ ಘಟಕಗಳಿಂದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಕಿತ್ತೂರು ರಾಣೆ ಚನ್ನಮ್ಮ 247ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬ್ರಿಟಿಷರ ಬಹು ದೊಡ್ಡ ಸೈನ್ಯದ ವಿರುದ್ಧ ಹೋರಾಡಿದ ಆ ಮಹಿಳೆ ಇಡೀ ಜಗತ್ತಿನಾದ್ಯಂತ ವೀರ ರಾಣಿ ಎನಿಸಿದ್ದಾರೆ. ಚೆನ್ನಮ್ಮ ತನ್ನ ಸ್ವತಂತ್ರ ರಾಜ್ಯದ ರಕ್ಷಣೆಗಾಗಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಟ ನಡೆಸಿದ್ದರು. ದೇಶಭಕ್ತಿ, ಶೌರ್ಯ, ಸಾಹಸಕ್ಕೆ ಹೆಸರಾಗಿದ್ದರು. ಅವರ ಹೋರಾಟದಿಂದಾಗಿಯೇ ಕಿತ್ತೂರು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.ಎರಡು ಸಾವಿರ ಇತಿಹಾಸ ಹೊಂದಿ ಎಂಟು ಜ್ಞಾನ ಪೀಠ ಪಡೆದ ಏಕೈಕ ಭಾಷೆ ಕನ್ನಡ ಭಾಷೆಯಾಗಿದೆ. ನಾವೆಲ್ಲರೂ ಕನ್ನಡ ಉಳಿಸಿ- ಕನ್ನಡ ಬೆಳೆಸಿ ಎನ್ನುವುದನ್ನು ನಿಲ್ಲಿಸಿ ಕನ್ನಡವನ್ನು ಬಳಸಿ ಬೆಳಸುವ ಕೆಲಸವಾಗಬೇಕಿದೆ ಎಂದರು.
ಸಂತೇಬೆನ್ನೂರು ವಿಜಯ ಕರ್ನಾಟಕ ವರದಿಗಾರ ಎಸ್.ಜೆ.ಕಿರಣ್ ಮಾತನಾಡಿ, ಗ್ರಾಮೀಣ ಪ್ರದೇಶದ ನನ್ನನ್ನು ಗುರುತಿಸಿ ಇಂದು ಪಂಚಮಸಾಲಿ ಸಮಾಜ ಸನ್ಮಾನ ಮಾಡಿದ್ದು ನನಗೆ ಹರ್ಷ ತಂದಿದೆ. ಇದೇ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸಿದರೆ, ಅವರೂ ಕೂಡ ಸಮಾಜದ ಸಂಘಟನೆಗೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದರು.
ಮಕ್ಕಳ ದಿನಾಚರಣೆ ಅಂಗವಾಗಿ ಸಮಾಜದ ಆರು ವರ್ಷದೊಳಗಿನ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಬಹುಮಾನ ವಿತರಿಸಿದರು.