ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Jun 25, 2025, 01:18 AM IST
50 | Kannada Prabha

ಸಾರಾಂಶ

ಸಮಾಜದ ಪರಿವರ್ತನೆಗಾಗಿ ಹೋರಾಡಿದ ಕಾಯಕಯೋಗಿ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕನ್ನಡಪ್ರಭ ವಾರ್ತೆ ಸರಗೂರು

ಸಮಾಜದ ಪರಿವರ್ತನೆಗಾಗಿ ಹೋರಾಡಿದ ಕಾಯಕಯೋಗಿ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಪಟ್ಟಣದ ವಿವೇಕಾನಂದ ಆಸ್ಪತ್ರೆ ಹತ್ತಿರದ ಸಮಾಜದ ನಿವೇಶನದಲ್ಲಿ ಸೋಮವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸರಗೂರು ತಾಲೂಕು ಘಟಕದಿಂದ ನಡೆದ ಶ್ರೀ ಬಸವೇಶ್ವರ ಜಯಂತಿ ಮಹೋತ್ಸವ, ನೂತನ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವನ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣ ಶಾಂತ ವಾತಾವರಣದಲ್ಲಿ ಬೆಳೆದು ರಾಜ ಬಿಜ್ಜುಳನ ಅಸ್ಥಾನದಲ್ಲಿ ಕೆಲಸ ಮಾಡುತ್ತಾ ಆದರ್ಶ ಪೂರಕವಾದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದರು. ಸಮಸಮಾಜಕ್ಕೆ ವಚನಗಳನ್ನು ಕೊಡುಗೆ ನೀಡಿದ ಅವರ ಬೋಧನೆಗಳು ಇಂದಿನ ಭಾರತದಲ್ಲಿಯೂ ಅವಶ್ಯಕವಾಗಿದ್ದು, ಎಲ್ಲರೂ ಅನುಸರಿಸಬೇಕು. ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಜಾತಿ ಪದ್ದತಿ ನಿರ್ಮೂಲನೆಗೆ ಪಣತೊಟ್ಟು ಸಕಲ ಜೀವಿಗಳಿಗೂ ಒಳಿತು ಬಯಸಿದ ಬಸವಣ್ಣನವರನ್ನು ಜಾತಿ, ಜಯಂತಿ ಆಚರಣೆ, ಪುಸ್ತಕಗಳಿಗೆ ಮಾತ್ರ ಸಿಮೀತಗೊಳಿಸಿರುವುದು ತುಂಬಾ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,

ಮಾನವ ಯಶಸ್ಸು ಗಳಿಸಲು ಬಸವಣ್ಣನವರ ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕು. ಮಹಾತ್ಮರನ್ನು ಸ್ಮರಿಸಿಕೊಂಡು ಜೀವನದಲ್ಲಿ ಸಾರ್ಥಕತೆ ಕಾಣಬೇಕು. ಇಂಥ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸದ್ಗುಣಗಳನ್ನು ಮೈಗೂಡಿಸಿಕೊಂಡರೆ ಕಾರ್ಯಕ್ರಮ ಮಾಡಿದ್ದಕ್ಕೆ ಸಾರ್ಥಕವಾಗಲಿದೆ ಎಂದರು.

ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಬಸವಣ್ಣನ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ರಾಜಕಾರಣಿಯಲ್ಲ ಬದಲಿಗೆ ನಾನೊಬ್ಬ ಜನಸೇವಕ. ಬಸವ ಭವನ ನಿರ್ಮಾಣಕ್ಕೆ ಸರ್ಕಾರದ ಗಮನಕ್ಕೆ ತಂದು ಮೂರು ಕೋಟಿ ರು.ಅನುದಾನ ಕೊಡಿಸುತ್ತೇನೆ ಎಂದು ಹೇಳಿದರು.

ಬಿಡುಗಲು ಪಡುವಲು ವಿರಕ್ತ ಮಠದ ಮಹದೇವ ಸ್ವಾಮೀಜಿ ಷಟ್ಸ್ಥಲ ಧ್ವಜಾರೋಹಣ ಮಾಡಿದರು. ಹಂಚೀಪುರ ಮಠದ ಚೆನ್ನಬಸವಸ್ವಾಮೀಜಿ, ದಡದಹಳ್ಳಿ ಮಠದ ಷಡಾಕ್ಷರಿಸ್ವಾಮೀಜಿ ಬಸವೇಶ್ವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಗಾವಡಗೆರೆಯ ನಟರಾಜ ಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲ ಸ್ವಾಮೀಜಿ, ಪುರ ಮಠದ ಚಂದ್ರಶೇಖರ ಸ್ವಾಮೀಜಿ, ಬಿಚನಹಳ್ಳಿ ಮಠದ ನಾಗೇಂದ್ರ ಸ್ವಾಮೀಜಿ, ಮಾದಾಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಂಚೀಪುರ ಮಠದ ಕಿರಿಯ ತೋಂಟದಾರ್ಯ ಸ್ವಾಮೀಜಿ, ಜಕ್ಕಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕ ಗಣೇಶ್ ಪ್ರಸಾದ್, ಮಾಜಿ ಸಚಿವ ಎಂ. ಶಿವಣ್ಣ, ಮಹಾಸಭಾದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಮಾತನಾಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ಅಭಿನಂದಿಸಿದರು. ಪಟ್ಟಣದ ಎಸ್ಕೆಜಿ ಕಾನ್ವೆಂಟ್ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಪ್ರದರ್ಶಿಸಿದರು.

ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಜೆಡಿಎಸ್ ಮುಖಂಡ ಜಯಪ್ರಕಾಶ್, ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ, ತಹಸೀಲ್ದಾರ್ ಮೋಹನಕುಮಾರಿ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಪ್ರಧಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ, ಕಾರ್ಯದರ್ಶಿ ಬಸವರಾಜು, ಜಯಕುಮಾರ್, ಬಸವ ಬಳಗ ಅಧ್ಯಕ್ಷ ಹಂಚೀಪುರ ಗಣಪತಿ, ಬಸವ ಬಳಗದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಮೊತ್ತ ಬಸವರಾಜು, ರುದ್ರಪ್ಪ, ಮೈಸೂರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಿ.ವಿ. ಬಸವರಾಜು, ಮೈಸೂರು ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಧನ್ಯ ಸತ್ಯಂದ್ರಮೂರ್ತಿ, ಅರ್ಜುನ್, ಡಿ.ಜಿ. ಶಿವರಾಜು, ಸಿ.ಕೆ. ಗಿರೀಶ್, ಗಿರಿ ಕುಮಾರ್, ಎಂ. ಪರಶಿವಮೂರ್ತಿ, ಎಂ.ಎನ್. ನಾಗರಾಜು, ಶಿವಕುಮಾರ್ ಇದ್ದರು.ಇದಕ್ಕೂ ಮುನ್ನ ಮೆರವಣಿಗೆ ಯು ಪ್ರಮುಖ ಬೀದಿಗಳಲ್ಲಿ ನಂದಿಧ್ವಜ ಪೂಜೆಯೊಂದಿಗೆ ಶ್ರೀ ಬಸವೇಶ್ವರರ ಪತ್ತಳಿಯನ್ನು ಲಿಂಗವಿರುವ ಬೆಳ್ಳಿ ರಥದಲ್ಲಿ ಕೊರಿಸಿ, ಕುಂಭ ಕಳಶಹೊತ್ತ ಮಹಿಳೆಯರು, ಶರಣರ ವಚನಗಳು ಅಲಂಕೃತ ಶಬ್ದ ಚಿತ್ರಗಳು, ಭಜನಾ ಮೇಳ, ವೀರಗಾಸೆ ಕುಣಿತ, ವೀರಭದ್ರನೃತ್ಯ, ಮಹಿಳಾ ಜಾನಪದ ಕಲಾವಿದರಿಂದ ವೀರಗಾಸೆ ಕುಣಿತ, ಜಾನಪದ ಕಲತಂಡಗಳೊಂದಿಗೆ ಪಟ್ಟಣದ ಕೆಇಬಿ ಕಚೇರಿಯಿಂದ ಸಮಾಜದ ನಿವೇಶನದ ಸಭಾ ಕಾರ್ಯಕ್ರಮದ ಅವರಣಕ್ಕೆ ಬಂದು ತಲುಪಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!