ಭಾರತೀಯ ಸೈನಿಕರ ಸಾಹಸ, ಪರಾಕ್ರಮ ಅವಿಸ್ಮರಣೀಯ: ಆರ್.ಮಿಥುನ್ ರೆಡ್ಡಿ

KannadaprabhaNewsNetwork |  
Published : Jul 27, 2024, 12:48 AM IST
26ಜಿಯುಡಿ1 | Kannada Prabha

ಸಾರಾಂಶ

ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಕಾವಲು ಕಾಯುತ್ತಿರುವ ನಮ್ಮ ಸೈನಿಕರು. ತಮ್ಮ ಮನೆ, ಪರಿವಾರವನ್ನು ಬಿಟ್ಟು ದೇಶವೇ ತಮ್ಮ ಮನೆ ಎನ್ನುವಂತೆ ಕಾವಲು ಕಾಯುವ ವೀರ ಯೋಧರ ಸಾಹಸ ಮತ್ತು ಪರಾಕ್ರಮ ಅವಿಸ್ಮರಣೀಯ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಮ್ಮ ಪ್ರಾಣದ ಹಂಗು ತೊರೆದು, ದೇಶದ ಗಡಿಯಲ್ಲಿ ಬಿಸಿಲು, ಗಾಳಿ, ಮಳೆ ಎನ್ನದೇ ನಮ್ಮನ್ನು ಕಾಯುತ್ತಿರುವ ಸೈನಿಕರ ಸಾಹಸ, ಪರಾಕ್ರಮ ಅವಿಸ್ಮರಣೀಯವಾದುದು ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ನಾಯಕ ಆರ್.ಮಿಥುನ್ ರೆಡ್ಡಿ ತಿಳಿಸಿದರು.

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಬಜರಂಗದಳ ಸೇವಾ ಸಪ್ತಾಹ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಭಾರತೀಯ ವೀರಯೋಧರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಕಾವಲು ಕಾಯುತ್ತಿರುವ ನಮ್ಮ ಸೈನಿಕರು. ತಮ್ಮ ಮನೆ, ಪರಿವಾರವನ್ನು ಬಿಟ್ಟು ದೇಶವೇ ತಮ್ಮ ಮನೆ ಎನ್ನುವಂತೆ ಕಾವಲು ಕಾಯುವ ವೀರ ಯೋಧರ ಸಾಹಸ ಮತ್ತು ಪರಾಕ್ರಮ ಅವಿಸ್ಮರಣೀಯ. ದೇಶ, ರಾಜ್ಯ, ಸಂಸ್ಕೃತಿ, ಭಾಷೆ ವಿಚಾರಕ್ಕೆ ಬಂದಾಗ ನಾವು ಮುಂದೆ ಇರಬೇಕು. ಇಂತಹ ದೇಶಾಭಿಮಾನದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರಿಗೂ ಈ ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳನ್ನು ತಿಳಿಸಿದರು.

ಬಳಿಕ ವಿಶ್ವ ಹಿಂದೂ ಪರಿಷತ್ ವಿಭಾಗ ಸಂಘಟನಾ ಕಾರ್ಯದರ್ಶಿ ಸಾಗರ್ ಜಿ. ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ನೇಕಾರರ ಪ್ರಕೋಷ್ಠದ ಸಹ ಸಂಚಾಲಕ ಗಜನಾಣ್ಯ ನಾಗರಾಜ್, ಬಜರಂಗದಳ ಜಿಲ್ಲಾ ಸಂಚಾಲಕ ಜಿ.ಎ ಅಮರೇಶ್ ಸೇರಿದಂತೆ ಹಲವರು ಮಾತನಾಡಿದರು. ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಭಾರತ ಮಾತೆಗೆ ಹಾಗೂ ಯೋಧರಿಗೆ ಪುಷ್ಪನಮನ ಸಲ್ಲಿಸಿದರು. ಬಿಜೆಪಿ ನಗರ ಅಧ್ಯಕ್ಷ ಆನಂದ್, ಬಜರಂಗದಳ ಕೋಲಾರ ವಿಭಾಗ ಸಂಚಾಲಕ ನರೇಶ್ ರೆಡ್ಡಿ, ವಿಎಚ್ ಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ತಾಲೂಕು ಅಧ್ಯಕ್ಷ ಶ್ರೀನಾಥ್, ಬಜರಂಗದಳದ ಮನೋಜ್, ಲೋಕೇಶ್, ಗಗನ್, ಉಲ್ಲೋಡು ಗ್ರಾಮ ಪಂಚಾಯತಿ ಹಿರಿಯ ಮುಖಂಡ ಪ್ರಹ್ಲಾದರಾವ್, ಮುಖಂಡರಾದ ಪದ್ಮಾವತಿ, ವರ್ಲಕೊಂಡ ಸಂತೋಷ್, ಮಣಿಕುಮಾರ್ ಸೇರಿದಂತೆ ಹಲವರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ