ವಿದ್ಯುತ್‌ ಅವಘಡ ಸಂದರ್ಭ 1912 ಟೋಲ್‌ ಫ್ರೀ ಸಂಖ್ಯೆ ಸಂಪರ್ಕಿಸಲು ಸಲಹೆ

KannadaprabhaNewsNetwork |  
Published : Jun 05, 2024, 12:32 AM ISTUpdated : Jun 05, 2024, 01:00 PM IST
೩೨ | Kannada Prabha

ಸಾರಾಂಶ

ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಕೊಡಗು ಜಿಲ್ಲೆಯ ಟೋಲ್ ಫ್ರೀ ಸರ್ವೀಸ್ ಸೆಂಟರ್‌ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665.

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಮಸ್ಯೆಗಳುಂಟಾದಲ್ಲಿ ಸಂಪರ್ಕಿಸಲು ಸೆಸ್ಕ್‌ ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಿದೆ.

ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೆ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೆ) ತಕ್ಷಣ ಚಾಮುಂಡೇಶ್ವರ ವಿದ್ಯುತ್ ಸರಬರಾಜು ನಿಗಮ ನಿಯಮಿತದ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸ್ಆಪ್ ಮೂಲಕ ಪೋಟೋ ಸಂದೇಶವನ್ನು ನೀಡಬಹುದು.

ಕೊಡಗು ಜಿಲ್ಲೆಯ ಟೋಲ್ ಫ್ರೀ ಸರ್ವೀಸ್ ಸೆಂಟರ್‌ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665.

ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಮಡಿಕೇರಿ, ತಾಳತ್‌ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯಕುಮಾರ್ 9449598602, ಸಹಾಯಕ ಜೂನಿಯರ್ ಎಂಜಿನಿಯರ್‌ಗಳು ಸಂಪತ್ ಕುಮಾರ್(ಮಡಿಕೇರಿ) 9449598603, ಹೇಮಂತ್ ರಾಜ್(ತಾಳತ್ ಮನೆ) 9449598604, ತೇಜ(ಮೂರ್ನಾಡು) 9449598605, ಅನಿಲ್ ಕುಮಾರ್ (ಸಂಪಾಜೆ) 9448994851, ಹರಿಣಾಕ್ಷಿ (ಭಾಗಮಂಡಲ) 9480810344, ಹರೀಶ್ (ನಾಪೋಕ್ಲು) 9449598606 ಹಾಗೂ ಗ್ರಾಹಕರ ಸೇವಾ ಕೇಂದ್ರ 08272-248454, 9449598665.

ಕುಶಾಲನಗರ ತಾಲೂಕಿಗೆ ಸಂಬಂಧಿಸಿದಂತೆ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ 9449598538, ಸಹಾಯಕ/ಜೂನಿಯರ್ ಎಂಜಿನಿಯರ್‌ಗಳು ಲವಕುಮಾರ (ಸುಂಟಿಕೊಪ್ಪ) 9449598615, ವಿನೋದ್ ಕನ್ನ (ಕುಶಾಲನಗರ) 9449598589, ರಾಣಿ (ಕೂಡಿಗೆ ಶಾಖೆ) 9449598613, ರುಕ್ಮುಂಗದಕುಮಾರ್ (ಮಾದಾಪುರ) 9449598588, ಎಚ್.ಕೆ.ಪ್ರದೀಪ್ (ಚೆಟ್ಟಳ್ಳಿ ಶಾಖೆ) 9448499965, ಗ್ರಾಹಕರ ಸೇವಾ ಕೇಂದ್ರ 08276-271046.

ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ ಶಾಖೆಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ 9449598612, ಸಹಾಯಕ/ ಜೂನಿಯರ್ ಎಂಜಿನಿಯರ್‌ಗಳಾದ ರವಿಕುಮಾರ್ (ಸೋಮವಾರಪೇಟೆ) 9449598614, ಸುದೀಪ್ ಕುಮಾರ್ (ಶನಿವಾರಸಂತೆ) 9449598616, ಪ್ರಕಾಶ್ (ಕೊಡ್ಲಿಪೇಟೆ) 9449598617, ಮನುಕುಮಾರ್(ಆಲೂರು ಸಿದ್ದಾಪುರ) 9449598622, ವಿಜಯಕುಮಾರ್ (ಶಾಂತಳ್ಳಿ) 9480837509, ಗ್ರಾಹಕರ ಸೇವಾ ಕೇಂದ್ರ 9448283394.

ವಿರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ ಶಾಖೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ 9480837545, ಸಹಾಯಕ/ ಜೂನಿಯರ್ ಎಂಜಿನಿಯರ್‌ಗಳಾದ ಅಭಿಷೇಕ್ (ವಿರಾಜಪೇಟೆ) 9449598610, ಎಚ್.ಜಿ.ಮನುಕುಮಾರ್(ಅಮ್ಮತ್ತಿ) 9448994344, ಸ್ವರಾಗ್(ಸಿದ್ದಾಪುರ) 9449598611, ದೇವಯ್ಯ(ಪಾಲಿಬೆಟ್ಟ) 9448994341 ಮತ್ತು ಗ್ರಾಹಕರ ಸೇವಾ ಕೇಂದ್ರ 9448289410.

ಪೊನ್ನಂಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಗೋಣಿಕೊಪ್ಪ, ಶ್ರೀಮಂಗಲ, ಬಾಳೆಲೆ ಮತ್ತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿವೇಕಾನಂದ ಪೊನ್ನಪ್ಪ 9449598607, ಹೇಮಂತ್ ಕುಮಾರ್ (ಗೋಣಿಕೊಪ್ಪ) 9449598608, ನಾಗೇಂದ್ರ ಪ್ರಸಾದ್ (ಶ್ರೀಮಂಗಲ) 9449598609, ರಂಗಸ್ವಾಮಿ (ಬಾಳಲೆ) 9449597484 ಹಾಗೂ ಗ್ರಾಹಕರ ಸೇವಾ ಕೇಂದ್ರ 9448283394 ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಎಸ್.ಅನಿತಾಬಾಯಿ 9449598601 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ