ಹತ್ತಿ ಬೆಳೆಯ ಕ್ಷೇತ್ರೋತ್ಸವ : ತೋಟಗಾರಿಕೆ ಬೆಳೆಯತ್ತಲೂ ಗಮನಹರಿಸಿ ಆದಾಯ ಇಮ್ಮಡಿಗೆ ರೈತರಿಗೆ ಸಲಹೆ

KannadaprabhaNewsNetwork |  
Published : Aug 22, 2024, 01:03 AM ISTUpdated : Aug 22, 2024, 12:47 PM IST
cotton and soybean farmers

ಸಾರಾಂಶ

ಕಲಿಕೆ ಟಾಟಾ ಟ್ರಸ್ಟ್‌, ಟೆಸ್ಕೋ ಮತ್ತು ಕೃಷಿ ಇಲಾಖೆ ಸಹಯೋಗ ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ವಡಗೇರಿ ತಾಲೂಕಿನ ಬಿಳ್ಹಾರ್ ಗ್ರಾಮದ ಪ್ರಗತಿಪರ ರೈತ ಬಸಣ್ಣ ಗೌಡ ಅವರ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

 ಯಾದಗಿರಿ : ಕಲಿಕೆ ಟಾಟಾ ಟ್ರಸ್ಟ್‌, ಟೆಸ್ಕೋ ಮತ್ತು ಕೃಷಿ ಇಲಾಖೆ ಸಹಯೋಗ ಹತ್ತಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ವಡಗೇರಿ ತಾಲೂಕಿನ ಬಿಳ್ಹಾರ್ ಗ್ರಾಮದ ಪ್ರಗತಿಪರ ರೈತ ಬಸಣ್ಣ ಗೌಡ ಅವರ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯಾದಗಿರಿಯ ತೋಟಗಾರಿಕೆ ವಿಸ್ತರಣಾ ಘಟಕ ಸಹಾಯಕ ಪ್ರಾಧ್ಯಾಪಕ ಡಾ.ಶಶಿಕಲಾ ಮಾತನಾಡಿ, ತೋಟಗಾರಿಕೆ ಬೆಳೆಯತ್ತಲೂ ರೈತರು ಗಮನಹರಿಸುವ ಮೂಲಕ ಆದಾಯ ಇಮ್ಮಡಿಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಂತ್ರಿಕ ಅಧಿಕಾರಿ ಮಹಾಂತೇಶ ಮಾತನಾಡಿ, ರೈತ ಸಂಪರ್ಕ ಕೇಂದ್ರ ವಿವಿಧ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು,

ರೇಷ್ಮೆ ಇಲಾಖೆಯ ಅಧಿಕಾರಿ ರಾಮಣ್ಣ ಮಾತನಾಡಿ, ರೇಷ್ಮೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ವಿವರವಾಗಿ ಮಾಹಿತಿ ನೀಡಿ ರೈತರು ಉಪ ಉತ್ಪನ್ನವಾಗಿ ರೇಷ್ಮೆ ಕೃಷಿ ಮಾಡಬಹುದು ಎಂದು ತಿಳಿಸಿದರು.

ಕಲಿಕೆ ಜೀವನೋಪಾಯ ಕಾರ್ಯಕ್ರಮ ಸಂಯೋಜಕ ಶಾಂತಗೌಡ ಬಿರದಾರ ಅವರು ಹತ್ತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಸವಿಸ್ತಾರ ತಿಳಿಸಿ ಸಂಸ್ಥೆಯಿಂದ ರೈತರಿಗೆ ಉಚಿತ ಬೀಜಗಳನ್ನು ಒದಗಿಸಿ ಹತ್ತಿ ಬೆಳೆಯ ಸಮಗ್ರ ಬೇಸಾಯದ ಮಾಹಿತಿ ನೀಡಲಾಗುತ್ತಿದ್ದು, ರೈತರಿಗೆ ಆದಾಯ ಹೆಚ್ಚಳ ಮಾಡುವ ಉದ್ದೇಶದಿಂದ ಸಂಸ್ಥೆಯು ರೈತರಿಗೆ ಎಲ್ಲ ಸಹಾಯ ಹಾಗೂ ಮಾರ್ಗದರ್ಶನ ಮಾಡುತ್ತದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು,

ಕಲಿಕೆ ಜೀವನೋಪಾಯ ಕಾರ್ಯಕ್ರಮದ ಇನ್ನೋರ್ವ ಸಂಯೋಜಕ ಅನುರಾಧ ಮಾತನಾಡಿ, ಕಲಿಕೆ ಟಾಟಾ ಟ್ರಸ್ಟ್‌ ಗುರಿ ಮತ್ತು ಉದ್ದೇಶಗಳನ್ನು ರೈತರಿಗೆ ತಿಳಿಸಿ ರೈತರಿಗೆ ನೆರವಾಗುವುದಕ್ಕಾಗಿ ಟ್ರಸ್ಟ್ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜಕಿ ಸುಧಾರಾಣಿ, ಅರುಣ ಕುಮಾರ, ಸಂಪತಕುಮಾರ, ಹಸನ, ರಜಾಕ್ ಮತ್ತು ಕ್ಷೇತ್ರ ಸಹಾಯಕರಾದ ಕುಮಾರ್, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ, ಸೈದಪ್ಪ ವಡಗೇರಾ, ಹಣಮಂತ, ಸೈದಪ್ಪ ಉಳ್ಳೆಸೂಗೂರು, ಬಾಲಪ್ಪ, ಮಹಾದೇವ, ಶಂಕರ ಸೇರಿದಂತೆ 100ಕ್ಕೂ ಹೆಚ್ಚು ಜನ ರೈತರು ವಿವಿಧ ಗ್ರಾಮಗಳಿಂದ ಆಗಮಿಸಿ ಪಾಲ್ಗೊಂಡರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ