ಯುವ ಆವೃತ್ತಿಯ ಎಸ್.ಎಸ್.ಎಲ್.ಸಿ.ಮಾರ್ಗಸೂಚಿ ನಿತ್ಯ ಓದಲು ಸಲಹೆ

KannadaprabhaNewsNetwork |  
Published : Jun 14, 2025, 02:28 AM IST
ನರಸಿಂಹರಾಜಪುರ ತಾಲೂಕಿನ ಗಡಿ ಭಾಗವಾದ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಪ್ಪ ಯಸ್ಕಾನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ  ಕನ್ನಡಪ್ರಭ ಯುವ ಆವೃತ್ತಿಯನ್ನು ಕೊಪ್ಪ ಯಸ್ಕಾನ್ ಸಂಸ್ಥೆ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಬಿಡುಗಡೆಗೊಳಿಸಿದರು.ಯಸ್ಕಾನ್ ಸಂಸ್ಥೆಯ ನಿರ್ದೇಶಕ ಕೆಸಕೊಡಿಗೆ ಕೃಷ್ಣಮೂರ್ತಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಕನ್ನಡಪ್ರಭ ಯುವ ಆವೃತ್ತಿಯಲ್ಲಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಬೇಕಾದ ಮಾರ್ಗಸೂಚಿಗಳಿರುವುದರಿಂದ ಇದನ್ನು ಪ್ರತಿ ನಿತ್ಯ ಓದಬೇಕು ಎಂದು ಕೊಪ್ಪ ಯಸ್ಕಾನ್ ಸಂಸ್ಥೆ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಕರೆ ನೀಡಿದರು.

ಕುದುರೆಗುಂಡಿ ಸರ್ಕಾರಿ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಯಲ್ಲಿ ಯಡಗೆರೆ ಸುಬ್ರಮಣ್ಯ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕನ್ನಡಪ್ರಭ ಯುವ ಆವೃತ್ತಿಯಲ್ಲಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಬೇಕಾದ ಮಾರ್ಗಸೂಚಿಗಳಿರುವುದರಿಂದ ಇದನ್ನು ಪ್ರತಿ ನಿತ್ಯ ಓದಬೇಕು ಎಂದು ಕೊಪ್ಪ ಯಸ್ಕಾನ್ ಸಂಸ್ಥೆ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಕರೆ ನೀಡಿದರು.

ಗುರುವಾರ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಪ್ಪ ಯಸ್ಕಾನ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ 2 ವರ್ಷಗಳ ಹಿಂದೆಯೂ ಸಹ ಕನ್ನಡಪ್ರಭ ಯುವ ಆವೃತ್ತಿಗೆ ಕೊಪ್ಪ ಯಸ್ಕಾನ್ ಸಂಸ್ಥೆ ಕೊಡುಗೆ ನೀಡಿತ್ತು. ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪ್ರಮುಖ ಘಟ್ಟ. ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಫಲಿತಾಂಶ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಎಲ್ಲಾ ಸೌಲಭ್ಯ ನೀಡುತ್ತಿದ್ದರೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಮಾತ್ರ ಆತಂಕದ ವಿಷಯ ಎಂದರು. ಕೊಪ್ಪ ಯಸ್ಕಾನ್ ಸಂಸ್ಥೆ ನಿರ್ದೇಶಕ ಕೆಸಕೊಡಿಗೆ ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿ, ಪಠ್ಯ ಪುಸ್ತಕದ ಜೊತೆಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಅಗತ್ಯ. ಪ್ರತಿ ನಿತ್ಯ ಮಕ್ಕಳು ದಿನ ಪತ್ರಿಕೆ ಓದುತ್ತಾ ಬಂದರೆ ಪ್ರಚಲಿತ ಸಂಗತಿ, ದೇಶದ, ರಾಜ್ಯದ ವಿಷಯಗಳು ತಿಳಿಯುತ್ತದೆ. ಮಕ್ಕಳು ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ ದಿನ ಪತ್ರಿಕೆ, ಒಳ್ಳೆ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು.ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಧನಂಜಯ ಮೇಧೂರ ಮಾತನಾಡಿ, ದಿನ ಪತ್ರಿಕೆಗಳಲ್ಲಿ ಜನರ ಅಪೇಕ್ಷೆಗೆ ತಕ್ಕಂತೆ ಸಾಹಿತ್ಯ, ಕ್ರೀಡೆ, ವಿಜ್ಞಾನ,ರಾಜಕೀಯ ಸೇರಿದಂತೆ ಎಲ್ಲಾ ವಿಚಾರಗಳಿರುತ್ತದೆ. ಕನ್ನಡದಿನ ಪತ್ರಿಕೆ ಗಳಿಂದ ಕನ್ನಡ ಭಾಷಾ ಜ್ಞಾನ ಹೆಚ್ಚಾಗಲಿದೆ. ಕೊಪ್ಪ ಯಸ್ಕಾನ ಸಂಸ್ಥೆ ಪ್ರಾಯೋಜತ್ವದಲ್ಲಿ ನಮ್ಮ ಶಾಲೆಗೆ ಕನ್ನಡಪ್ರಭ ಯುವ ಆವೃತ್ತಿ ಬರುತ್ತಿದೆ ಎಂದರು. ಕನ್ನಡಪ್ರಭ ಪತ್ರಿಕೆಯ ವರದಿಗಾರ ಯಡಗೆರೆ ಮಂಜುನಾಥ್ ಮಾತನಾಡಿ, ಕನ್ನಡಪ್ರಭ ಸಾಮಾಜಿಕ ಕಳಕಳಿಯಿಂದ 1 ರು.ಗೆ ಯುವ ಆವೃತ್ತಿ ನೀಡುತ್ತಿದೆ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪ್ರತಿ ನಿತ್ಯ ಕನ್ನಡ ಪ್ರಭ ಯುವ ಆವೃತ್ತಿಯನ್ನು ತಾವೂ ಓದಿ ತಮ್ಮ ಪೋಷಕರಿಗೂ ಓದಲು ನೀಡಬೇಕು. ಪ್ರತಿ ಮನೆಗಳಲ್ಲೂ ದಿನ ಪತ್ರಿಕೆ ಬರಬೇಕು.ವಿದ್ಯಾರ್ಥಿ ದಿಶೆಯಲ್ಲೇ ಮಕ್ಕಳು ಕನ್ನಡ ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪತ್ರಿಕೆ ವಿಭಿನ್ನ ವಿಚಾರಗಳನ್ನು ಹೊತ್ತು ತರುತ್ತಿದ್ದು ಜನ ಸಾಮಾನ್ಯರಿಗೆ ಹತ್ತಿರವಾದ ದಿನ ಪತ್ರಿಕೆ ಎಂದರು.ಇದೇ ಸಂದರ್ಭದಲ್ಲಿ ಕೊಪ್ಪ ಯಸ್ಕಾನ್ ಸಂಸ್ಥೆ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಅವರನ್ನು ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಿಂದ ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಾದ ಕು. ಸಾನಿಕ, ಕು.ಆಕಾಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಭೆ ಅಧ್ಯಕ್ಷತೆಯನ್ನು ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಅಧ್ಯಕ್ಷ ಪ್ರವೀಣ ಶೆಟ್ಟಿ ವಹಿಸಿದ್ದರು. ಸಹ ಶಿಕ್ಷಕಿಯರಾದ ಎನ್. ರೂಪ, ಯೋಗೇಶ್ವರಿ, ಎಚ್.ಎಂ.ಜ್ಯೋತಿ, ವಾಣಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ