ಅಫಜಲ್ಪುರ: ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಡಿಸಿ

KannadaprabhaNewsNetwork |  
Published : Oct 26, 2024, 12:50 AM IST
ಫೋಟೋ- ಅಫಜಲ್ಪುರ 1ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅವರು ಅಫಜಲ್ಪುರ ತಾಲೂಕಿನ ಕರಜಗಿ ನಾಡ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ರೆಕಾರ್ಡ್ ರೂಮ್ ವೀಕ್ಷಿಸಿದರು. | Kannada Prabha

ಸಾರಾಂಶ

ಅಫಜಲ್ಪುರಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಭೇಟಿ ನೀಡಿ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಾಲೂಕು ಆಡಳಿತ ಸೌಧ ಕಾಮಗಾರಿ ವೀಕ್ಷಿಸಿ ಅದರ ಗುಣಮಟ್ಟ ಪರಿಶೀಲಿಸಿದರು. ಸದರಿ ಕಾಮಗಾರಿಯನ್ನ ಮಾರ್ಚ್ ಅಂತ್ಯಕ್ಕೆ ಪೂರ್ಣ ಮುಗಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿಅಫಜಲ್ಪುರಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಭೇಟಿ ನೀಡಿ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಾಲೂಕು ಆಡಳಿತ ಸೌಧ ಕಾಮಗಾರಿ ವೀಕ್ಷಿಸಿ ಅದರ ಗುಣಮಟ್ಟ ಪರಿಶೀಲಿಸಿದರು. ಸದರಿ ಕಾಮಗಾರಿಯನ್ನ ಮಾರ್ಚ್ ಅಂತ್ಯಕ್ಕೆ ಪೂರ್ಣ ಮುಗಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು.ಅಫಜಲ್ಪುರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ₹2 ಕೋಟಿ ವೆಚ್ಚದ 15 ಶಾಲಾ ಕೋಣೆ, ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಿಕ್ಷಕರ ತರಬೇತಿ ಕೇಂದ್ರದ ಕಟ್ಟಡದ ಪ್ರಗತಿ ಸಹ ಪರಿಶೀಲಿಸಿದರು.

₹6 ಕೋಟಿ ವೆಚ್ಚದಲ್ಲಿ ಡಿಗ್ಗಿ ಕ್ರಾಸ್ ದಿಂದ ಭೋಸಗಾ ಕ್ರಾಸ್ ವರೆಗಿ ನಡೆಯುತ್ತಿರುವ ರಸ್ತೆ ಸುಧಾರಣೆ ಕಾಮಗಾರಿ ವೀಕ್ಷಿಸಿ ನವೆಂಬರ್ ಒಳಗೆ ಮುಗಿಸಲು ಸೂಚಿಸಿದರು. ನಂತರ ಕರಜಗಿ ನಾಡ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ ರೆಕಾರ್ಡ್ ರೂಮ್ ವೀಕ್ಷಿಸಿದರು.ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ವಿವಿಧ ಸಿವಿಲ್ ಕಾಮಗಾರಿಗಳಿಗೆ ಡಿ.ಸಿ. ಅವರು ಸರಣಿ ಭೇಟಿ ನೀಡಿ ವಿವಿಧ ಕಾಮಗಾರಿ ಖುದ್ದಾಗಿ ಪರಿಶೀಲಿಸಿ, ಸಿಲ್ಕ್ ಮಾರುಕಟ್ಟೆ ಕಾಮಗಾರಿಗೆ ವೇಗ ನೀಡಿ ಎಂದು ಅಧಿಕಾರಿ ಮತ್ತು ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.ಕೆ.ಕೆ.ಆರ್.ಡಿ.ಬಿ ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಕೇಂದ್ರ ಬಸ್ ನಿಲ್ದಾಣ ಬಳಿಯ ಕಣ್ಣಿ ಮಾರ್ಕೆಟ್ ಸ್ಥಳದಲ್ಲಿ ಸುಮಾರು ₹28 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತರಕಾರಿ ಮಾರುಕಟ್ಟೆ ಕಾಮಗಾರಿ ವೀಕ್ಷಿಸಿದ ಅವರು, ಜನವರಿ ಮಾಹೆಯಲ್ಲಿ ಮಾರುಕಟ್ಟೆ ಉದ್ಘಾಟನೆ ಮಾಡಬೇಕಿರುವುದರಿಂದ, ಕೂಡಲೆ ಕಾಮಗಾರಿ ಪೂರ್ಣಗೊಳಿಸಬೇಕು ಮತ್ತು ಲಾಟರಿ ಮೂಲಕ ಮಳಿಗೆ ಹಂಚಬೇಕು ಎಂದು ತಿಳಿಸಿದರು.

ಕೋಟನೂರ (ಡಿ) ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ₹2.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೇಳೆ ಕಾಳುಗಳ ಸಂಸ್ಕರಣೆ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಕಾಮಗಾರಿ ಪೂರ್ಣಗೊಂಡಿರುವುದರಿಂದ ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸುಭಾಷ ಅವರಿಗೆ ಸೂಚನೆ ನೀಡಿದರು.ಈ ವೇಳೆ ಲೋಕೋಪಯೋಗಿ ಇಲಾಖೆ ಎ.ಇ.ಇ. ಎಸ್.ಎಸ್. ಪಟ್ಟಣಶೆಟ್ಟಿ ಅಫಜಲಪೂರ ತಹಸೀಲ್ದಾರ ಸಂಜೀವಕುಮಾರ ದಾಸರ್, ಲೊಕೋಪಯೋಗಿ ಇಲಾಖೆಯ ಎಇಇ ಲಕ್ಷ್ಮೀಕಾಂತ ಬಿರಾದಾರ ಇದ್ದರು.

ಗಡವಿನೊಳಗೆ ಕೆಲಸವಾಗದಿದ್ರೆ ದಂಡ ಹಾಕಿಕಲಬುರಗಿ ನಗರದ ಜಾಫರಾಬಾದ್ ಬಳಿ 4 ಎಕರೆ ಪ್ರದೇಶದಲ್ಲಿ ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಕಾಮಗಾರಿ ಸ್ಥಳಕ್ಕೂ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ, ನಿಧಾನಗತಿಯಲ್ಲಿ ಕೆಲಸ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಗುತ್ತಿಗೆದಾರನಿಗೆ ದಂಡ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅವರು ಅಫಜಲ್ಪುರ ತಾಲೂಕಿನ ಕರಜಗಿ ನಾಡ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ರೆಕಾರ್ಡ್ ರೂಮ್ ವೀಕ್ಷಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ