ಮಿಷನರಿ ಬ್ರೇನ್‌ ವಾಷಿಂಗ್‌ ಬಳಿಕಬಡವರು ನಕ್ಸಲ್‌ವಾದಕ್ಕೆ: ಸಿಬಿಐ

KannadaprabhaNewsNetwork |  
Published : Sep 17, 2026, 03:45 AM IST
ಪಿವಿಆರ್‌ | Kannada Prabha

ಸಾರಾಂಶ

ಅಮೆರಿಕ ಮೂಲದ ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ದಿ ಟಿಮೋಥಿ ಇನಿಶಿಯೇಟಿವ್‌ (ಟಿಟಿಐ) ಮತ್ತು ಅದಕ್ಕೆ ಸಂಬಂಧಿಸಿದ ಹಲವಾರು ವ್ಯಕ್ತಿಗಳ ವಿರುದ್ಧ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ-2010 ಅನ್ನು ಉಲ್ಲಂಘಿಸಿ 92.55 ಕೋಟಿ ರು.ಗಳನ್ನು ಮಿಷನರಿ ಚಟುವಟಿಕೆಗಳಿಗೆ ಬಳಸಿಕೊಂಡ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

ನವದೆಹಲಿ: ಅಮೆರಿಕ ಮೂಲದ ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ದಿ ಟಿಮೋಥಿ ಇನಿಶಿಯೇಟಿವ್‌ (ಟಿಟಿಐ) ಮತ್ತು ಅದಕ್ಕೆ ಸಂಬಂಧಿಸಿದ ಹಲವಾರು ವ್ಯಕ್ತಿಗಳ ವಿರುದ್ಧ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ-2010 ಅನ್ನು ಉಲ್ಲಂಘಿಸಿ 92.55 ಕೋಟಿ ರು.ಗಳನ್ನು ಮಿಷನರಿ ಚಟುವಟಿಕೆಗಳಿಗೆ ಬಳಸಿಕೊಂಡ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆಯ ಆಧಾರದ ಮೇಲೆ ಕೇಂದ್ರ ಗೃಹ ಸಚಿವಾಲಯ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಬಿಐ ದಾಖಲಿಸಿದ ದೂರಿನಲ್ಲಿ ಬೆಂಗಳೂರು ಮತ್ತು ಮೈಸೂರು ಮೂಲದವರಾದ, ಭಾರತದಲ್ಲಿ ಟಿಟಿಐ ಕಾರ್ಯಾಚರಣೆಯ ಉಸ್ತುವಾರಿ ಜೊನಾಥನ್ ಎಸ್‌. ರಾಜನ್‌, ಹಣಕಾಸು ವಿಭಾಗದ ಮುಖ್ಯಸ್ಥ ಅಜಿತ್‌ ವರ್ಗೀಸ್‌ ಮಥಾಯಿಸ್‌, ಮಿಕಾ ಮಾರ್ಕ್‌, ಸಂಸ್ಥೆಯ ಪ್ರತಿನಿಧಿಗಳಾದ ವರ್ಗೀಸ್‌ ಚಾಕೋ, ಸುಪ್ರೀಂ ಜೋಯ್‌ ಮತ್ತು ಬಬ್ಲು ಕುಮಾರಿ ಹೆಸರನ್ನು ಪ್ರಸ್ತಾಪಿಸಲಾಗಿದೆ.

ಇವರೆಲ್ಲಾ 2025ರ ನವೆಂಬರ್‌ನಿಂದ 2026 ಏಪ್ರಿಲ್‌ವರೆಗಿನ 6 ತಿಂಗಳಲ್ಲಿ ಹಣವನ್ನು ಮಿಷನರಿ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲಾಗಿದೆ. ಜನವರಿ 2024ರಿಂದ ಮಾರ್ಚ್ 2026ರ ಅವಧಿಯಲ್ಲಿ ಅಮೆರಿಕದ ಟ್ರೂಯಿಸ್ಟ್ ಬ್ಯಾಂಕ್ ನೀಡಿದ ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಕರ್ನಾಟಕ, ಚಂಡೀಗಢ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಫ್‌ಸಿಆರ್‌ಎ ನಿಯಮಗಳನ್ನು ಉಲ್ಲಂಘಿಸಿ 44 ಕೋಟಿ ರು.ಗಳನ್ನು ಹಿಂಪಡೆಯಲಾಗಿದೆ. ಈ ಹಣವನ್ನು ಬಡಜನರ ತರಬೇತಿ, ಪ್ರವಚನ ಮತ್ತು ಬ್ರೇನ್‌ ವಾಷಿಂಗ್‌ಗೆ ಬಳಸಲಾಗಿದೆ. ಇದು ಅವರು ಎಡಪಂಥೀಯ ತೀವ್ರವಾದದತ್ತ ವಾಲಲು ಕಾರಣವಾಗಿದೆ ಎಂಬುದು ಇ.ಡಿ. ತನಿಖೆಯಿಂದ ತಿಳಿದುಬಂದಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಬೆಂಗಳೂರಲ್ಲಿ ಆರೋಪಿ ವಶ:

ಏ.18ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಟಿಐ ಸಂಸ್ಥೆಯ ಹಣಕಾಸು ವ್ಯವಹಾರದ ಪ್ರಮುಖ ವ್ಯಕ್ತಿ ಮಿಕಾ ಮಾರ್ಕ್ ಎಂಬಾತನನ್ನು ಇ.ಡಿ. ವಶಕ್ಕೆ ಪಡೆದುಕೊಂಡಾಗ ಆತನ ಬಳಿ 24 ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು. ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಇಂತಹ 1,000ಕ್ಕೂ ಹೆಚ್ಚು ಡೆಬಿಟ್ ಕಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಿಬಿಐ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೂಜೆ ಹೆಸ್ರಲ್ಲಿ ವೃದ್ಧೆಗೆ40 ಲಕ್ಷದ ರು.ಚಿನ್ನ ವಂಚಿಸಿದ ನಕಲಿ ಜ್ಯೋತಿಷಿ!
ವಿವಾಹಿತೆಯ ಅಪಹರಣ: ದುಷ್ಕರ್ಮಿಗಳಿಗೆ ಥಳಿಸಿದ ಸ್ಥಳೀಯರು