ರಾಮನಗರ: ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ರೇಸ್‌ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ. ಬೇರೆಯವರೂ ರೇಸ್‌ನಲ್ಲಿ ಇರಬಹುದು. ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ. ಸದ್ಯಕ್ಕೆ ಸಿದ್ದರಾಮಯ್ಯನವರು ಬೇಡ ಅಂದಾಗ ಆ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಲಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಡಿ.ಸುಧಾಕರ್ ಅನಾರೋಗ್ಯ ವಿಚಾರ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ನಾಯಕರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಬಾಲಿಷವಾದ ಹೇಳಿಕೆ. ಯಾವ ಆಧಾರದಲ್ಲಿ ಇದನ್ನು ಹೇಳಿದ್ದಾರೆ ಅಂತ ಗೊತ್ತಿಲ್ಲ. ಹೆಬ್ಬೆಟ್ಟು ಹಾಕಿಸಿಕೊಳ್ಳಲು ಯಾರು ಹೋಗಿದ್ದಾರೆ ಅಂತ ಅವರೇ ಹೇಳಲಿ ಎಂದರು.
ಡಿ.ಕೆ.ಶಿವಕುಮಾರ್ ಗು ಸುಧಾಕರ್ ಗೂ ಹಳೇ ವಿಶ್ವಾಸ. ಅಂದಿನಿಂದ ಇಂದಿನವರೆಗೂ ಅವರ ಕುಟುಂಬದ ಜೊತೆ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ. ಅವರ ಆರೋಗ್ಯದ ವಿಚಾರ ನೋಡಿಕೊಳ್ಳಲು ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ತಿಳಿಸಿದ್ದಾರೆ. ಅವರ ಆರೋಗ್ಯದ ಕಡೆ ಮೊದಲು ಗಮನ ಹರಿಸೋಣ. ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ಕೊಟ್ಟು ಕುಮಾರಸ್ವಾಮಿ ಸಣ್ಣವರಾಗುವುದು ಬೇಡ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.ಸಂಪುಟ ಪುನರಚನೆ ಬಗ್ಗೆ ಮಾತನಾಡಿದ ಬಾಲಕೃಷ್ಣ, ಈ ಬಗ್ಗೆ ನಾವು ಮನವಿ ಮಾಡಿದ್ದೀವಿ. ಹೈಕಮಾಂಡ್ ಶೀಘ್ರದಲ್ಲಿ ತೀರ್ಮಾನ ತಗೆದುಕೊಳ್ಳಲಿದೆ. ಹೈಕಮಾಂಡ್ ಯಾಕೆ ವಿಳಂಬ ಮಾಡುತ್ತಿದಿಯೊ ಗೊತ್ತಿಲ್ಲ. ನಾಳೆಯೇ ಸಂಪುಟ ವಿಸ್ತಾರಣೆ ಮಾಡಿದರೂ ನಮಗೆ ಖುಷಿ ಎಂದರು.
27ಕೆಆರ್ ಎಂಎನ್ 6.ಜೆಪಿಜಿ