- ಸಹೋದರಿ ಮಗಳ ಮದುವೆ ಸಂಭ್ರಮದಲ್ಲಿ ಲೈಟರ್ ಗನ್ ಹಿಡಿದು ಡ್ಯಾನ್ಸ್। ಮಾಜಿ ಜಿಪಂ ಸದಸ್ಯ, ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಸ್ಪಷ್ಟನೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಅಫಜಲಪುರ ಕಾಂಗ್ರೆಸ್ ಮುಖಂಡ, ಹಾಲಿ ಶಾಸಕ ಎಂ ವೈ ಪಾಟೀಲ್, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣ ಎಂವೈ ಪಾಟೀಲರ ಅತ್ಯಾಪ್ತ, ಮಾಜಿ ಜಿಪಂ ಸದಸ್ಯ ಮತೀನ್ ಪಟೇಲ್ ದುರಂಧರ್ ಸಿನಿಮಾ ಹಾಡಿಗೆ ಕೈಯಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಸುದ್ದಿಗೆ ಗ್ರಾಸವಾಗಿದೆ.ವಿಡೀಯೋ ವೈರಲ್ ಆಗಿ ಎಲ್ಲೆಡೆ ವ್ಯಾಪಾಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೈ ಮುಖಂಡ ಮತೀನ್ ಪೇಲ್ ತಾವು ಕೈಯಲ್ಲಿ ಹಿಡಿದ್ದದ್ದು ನಿಜವಾದ ಗನ್ ಅಲ್ಲ, ಲೈಡರ್ ಗನ್, ಆಟಿಕೆ ಗನ್ ಎಂದು ಸ್ಪಷ್ಟನೆ ನೀಡಿ ಪೊಲೀಸರಿಗೂ ಮಾಹಿತಿ ನೀಡಿದ್ದಾಗಿ ಹೇಳುವ ಮೂಲಕ ನಡೆದಿರುವ ಬೆಳವಣಿಗೆಗೆ ಸ್ಪಷ್ಟನೆ ನೀಡಿದ್ದಾರೆ.
ಕಾರ್‌ನಲ್ಲಿ ಗನ್ ಹಿಡಿದು ದುರಂಧರ್ ಹಾಡಿನ ಹಿನ್ನೆಲೆಯ ಸಂಗೀತಕ್ಕೆ ಕೈ ಮುಖಂಡ ಪೋಸ್ ನೀಡಿರುವ ಮತೀನ್ ಪಟೇಲ್ ವೀಡಿಯೋ ವೈರಲ್ ಆಗಿದೆ. ಗನ್ ಹಿಡಿದು ಪೋಸ್ ಕೊಡುವ ವಿಡಿಯೋ ಹಾಗೂ ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಕೈ ಮುಖಂಡನ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ನಾನು ಹಿಡಿದದ್ದು ಲೈಟರ್ ಗನ್: ಮತೀನ್ ಪಟೇಲ್
ಗನ್ ಹಿಡಿದುಕೊಂಡು ದುರಂಧರ್ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿರುವ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಮಾತನಾಡಿದ್ದು ವಿಡಿಯೋ ವೈರಲ್ ಬೆನ್ನಲ್ಲೇ ಇದು ಗನ್ ಅಲ್ಲ, ಆಟಿಕೆಯ ಗನ್ ಎಂದು ಸ್ಪಷ್ಟನೆ ನೀಡಿದ್ದಾರೆ.ಕಳೆದ ತಿಂಗಳು 18ರಂದು ನನ್ನ ಸಹೋದರಿಯ ಮಗಳ ಮದುವೆ ಸಂಭ್ರಮಕ್ಕೂ ಮುಂಚೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದೇವು, ಆ ವೇಳೆ ಕುಟುಂಬದ ಎಲ್ಲಾ ಸದಸ್ಯರು ಡ್ಯಾನ್ಸ್ ಹಾಡು ಹಾಗೂ ವಿವಿಧ ಪಾತ್ರಗಳನ್ನು ಮಾಡಿದ್ದೇವು. ನಮ್ಮ ಮಕ್ಕಳ ಒತ್ತಾಯದಿಂದ ನಾನೂ ಲೈಟರ್ ಗನ್ ಹಿಡಿದುಕೊಂಡು ಒಂದು ಮಾತ್ರ ಮಾಡಿದ್ದೆ ಅಷ್ಟೇ ಎಂದಿದ್ದಾರೆ.
ಇದೀಗ ಆ ವಿಡಿಯೋ ವೈರಲ್ ಮಾಡಿ ನನ್ನ ಹೆಸರಿಗೆ ಕಪ್ಪು ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆನಾನು ಜಿಪಂ ಮಾಜಿ ಸದಸ್ಯನಾಗಿ ಈ ರೀತಿ ಗನ್ ಪ್ರದರ್ಶನ ಮಾಡುವವನೇ ಅಲ್ಲ, ಅದಾಗ್ಯೂ ಲೈಟರ್ ಗನ್ ಪೊಲೀಸರಿಗೆ ಒಪ್ಪಿಸಿ ಮಾಹಿತಿ ನೀಡಿದ್ದೇನೆ ಎಂದು ಕಲಬುರಗಿಯಲ್ಲಿ ಮಾಜಿ ಜಿಪಂ ಸದಸ್ಯ ಮತೀನ್ ಪಟೇಲ್ ತಮ್ಮ ಗನ್ ಡ್ಯಾನ್ಸ್ ಪ್ರಕರಣದ ಕುರಿತಂತೆ ಸ್ಪಷ್ಟೀಕರಣ ನೀಡಿದ್ದಾರೆ.
ಫೋಟೋ- ಮತೀನ್ ಪಟೇಲಅಫಜಲಪುರ ಕೈ ಮುಖಂಡ, ಮಾಜಿ ಜಿಪಂ ಸದಸ್ಯ ಮತೀನ್ ಪಟೇಲ್ ಕೈಯಲ್ಲಿ ಗನ್ ಹಿಡಿದು ಡ್ಯಾನ್ಸ್ ಮಾಡಿರುವುದು. ಇದೀಗ ಅದು ಲೈಟರ್ ಗನ್, ಆಟಿಕೆ ಗನ್ ಎಂದು ಮತೀನ್ ಹೇಳಿಕೆ ನೀಡಿದ್ದಾರೆ.