ಹಾದಿಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ ಚಂದ್ರಪ್ಪಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ತರೀಕೆರೆಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿ ಹೈನುಗಾರಿಕೆಯನ್ನು ಉತ್ತೆಜಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ಹಾದೀಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಬಿ ಚಂದ್ರಪ್ಪ ಅವರಿಗೆ ಅಭಿನಂದಿಸಿ ಮಾತನಾಡಿದರು. ಹಾದೀಕೆರೆ ಕೃಷಿ ಪತ್ತಿನ ಸಂಘದಲ್ಲಿ 233 ಜನರಿಗೆ. ₹1.38 ಕೋಟಿ ಸಾಲಸೌಲಭ್ಯ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ನಬಾರ್ಡ್ ನಿಂದ ಸಿಗುವ ಸಾಲ ಸೌಲಭ್ಯ ಕಡಿಮೆಯಾಗಿದೆ. ನಬಾರ್ಡ್ ಶೇ.9 ಬಡ್ಡಿ ದರದಲ್ಲಿ ಡಿಸಿಸಿ ಬ್ಯಾಂಕ್ ಗೆ ಸಾಲ ನೀಡಿದರೆ ಶೇ. 9 ಬಡ್ಡಿಯನ್ನು ಸರ್ಕಾರವೇ ತುಂಬಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೆಸಿಸಿ ಸಾಲ ನೀಡಲಾಗುತ್ತಿದೆ. ನಮ್ಮ ಡಿಸಿಸಿ ಬ್ಯಾಂಕ್ ನಲ್ಲಿ ₹1200 ಕೋಟಿ ಠೇವಣಿ ಹಣವಿದೆ. ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಹೆಚ್ಚಿನ ಠೇವಣಿ ಇಡಬೇಕು. ಹಾದೀಕೆರೆ ಕೃಷಿ ಪತ್ತಿನ ಸಂಘಕ್ಕೆ ನಾವು ಅಧಿಕಾರಕ್ಕೆ ಬಂದಮೇಲೆ ₹2.50 ಕೋಟಿ ಸಾಲ ನೀಡಲಾಗಿದೆ ಎಂದು ಹೇಳಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ ಮಾತನಾಡಿ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ರೈತರಿಗೆ ಉಪಯೋಗವಾಗುವ ರೀತಿ ಇರಬೇಕು. ರೈತರ ಕೃಷಿ ಸಲಕರಣೆಗಳು ಇಲ್ಲಿಯೆ ದೊರೆಯುವಂತೆ ಮಾಡುವುದು ನನ್ನ ಮಹದಾಸೆ. ಹಾದೀಕೆರೆ ಸಹಕಾರ ಸಂಘವನ್ನು ಸೂಪರ್ ಮಾರ್ಕೆಟ್ ಆಗಿ ಪರಿವರ್ತಿಸಲಾಗುವುದು. ರೈತರು ಹೆಚ್ಚಿನ ಠೇವಣಿ ಇಡಬೇಕು, ನನ್ನ ಅವಧಿಯಲ್ಲಿ ರೈತರ ಅಭ್ಯುದಯಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.ಲಿಂಗದಹಳ್ಳಿ ಸಹಕಾರ ಸಂಘದ ಓಂಕಾರಪ್ಪ. ನಿರ್ದೇಶಕರಾದ ಅರುಣ್, ನಾಗರಾಜ್, ಪ್ರಸನ್ನ ಕುಮಾರ್, ವಿಜಯ ಕುಮಾರ್ ಮಾತನಾಡಿದರು. ನಿರ್ದೇಶಕರಾದ ಮಂಜುನಾಥ, ಡಿ.ಸಿ. ಬಸವರಾಜ, ಪೂಜಾ, ಕಮಲಾಬಾಯಿ, ವೆಂಕಟೇಶ , ಮುಖಂಡರಾದ ಜ್ಞಾನೇಶ್, ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಭಾಗವಹಿಸಿದ್ದರು.
-14ಕೆಟಿಆರ್.ಕೆ.1ಃ
ಸಮೀಪದ ಹಾದೀಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಬಿ ಚಂದ್ರಪ್ಪ ಅವರನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ,ಮಾಜಿ ಶಾಸಕ ಡಿ.ಎಸ್.ಸುರೇಶ್ ಅಭಿನಂದಿಸಿದರು.