ಕೃಷಿ - ಖುಷಿ ಕಾರ್ಯಕ್ರಮ ಉದ್ಘಾಟಿಸಿದ ಕರ್ಣಾಟಕ ಬ್ಯಾಂಕ್ ಎಜಿಎಂ
ಇಲ್ಲಿನ ವಿದ್ಯಾಧಿರಾಜ ಪಾಲಿಟೆಕ್ನಿಕ್‌ನಲ್ಲಿ ಮಂಗಳವಾರ ಕರ್ನಾಟಕ ಬ್ಯಾಂಕ್ ಹಾಗೂ ಸವಿ ಫೌಂಡೇಶನ್, ಮೂಡುಬಿದ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ - ಖುಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೃಷಿಯ ಬಗ್ಗೆ ಯುವಜನತೆಯಲ್ಲಿ ನಿರಾಸಕ್ತಿ ಬೇಡ. ಕೃಷಿಗೆ ಉಜ್ವಲ ಭವಿಷ್ಯವಿದೆ. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸುವ ಮೂಲಕ ಉತ್ತಮ ಇಳುವರಿ ಪಡೆಯಲು ರೈತರಿಗೆ ನೆರವಾಗುವ ಉದ್ದೇಶದಿಂದ ಕರ್ನಾಟಕ ಬ್ಯಾಂಕ್ ವಿವಿಧ ರೀತಿಯ ಸಹಕಾರ ನೀಡಲು ಸದಾ ಸಿದ್ಧವಿದೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು ಮಾತನಾಡಿ, ಕೃಷಿಯಲ್ಲಿ ಸೂಕ್ತ ವೈಜ್ಞಾನಿಕ ವಿಧಾನ ಅನುಸರಿಸದಿರುವುದರಿಂದ ಹಲವಾರು ಸಂದರ್ಭಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ. ಸರಿಯಾದ ಕೃಷಿ ತಂತ್ರಜ್ಞಾನ, ಗೊಬ್ಬರ ಬಳಕೆ, ನೀರು ನಿರ್ವಹಣೆ ಹಾಗೂ ಬೆಳೆ ಸಂರಕ್ಷಣೆ ವಿಧಾನಗಳನ್ನು ಅನುಸರಿಸಿದರೆ ಕೃಷಿಯನ್ನು ಸದಾ ಲಾಭದಾಯಕವಾಗಿಸಬಹುದು ಎಂದು ಸಮಗ್ರವಾಗಿ ವಿವರಿಸಿದರು.ಪ್ರಾಚಾರ್ಯ ಗೋಪಾಲಕೃಷ್ಣ ಡಿ. ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ರಂಜಿತ ಎ.ಶೆಟ್ಟಿ, ಶಾಖಾ ವ್ಯವಸ್ಥಾಪಕ ಚಿಂತಾಮಣಿ ಜಿ. ಪಂಡಿತ, ಉಪಪ್ರಾಚಾರ್ಯ ದೀಪಕ ಪ್ರಭು ಉಪಸ್ಥಿತರಿದ್ದರು. ಪ್ರಗತಿ ಶಾನಭಾಗ ಪ್ರಾರ್ಥಿಸಿದಳು. ಸಂಯೋಜಕರಾದ ಮೂಡುಬಿದ್ರೆ ಸವಿ ಫೌಂಡೇಶನ್ ಮೆನೇಜಿಂಗ್ ಟ್ರಸ್ಟಿ ಡಾ. ಸಂದೀಪ ನಾಯಕ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.