ಧಾರವಾಡ:
ಧಾರವಾಡ ಕೃಷಿ ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿತು. ಸಂಗೀತ ಸ್ಪರ್ಧೆಯಲ್ಲಿ ಸಮುದಾಯ ವಿಜ್ಞಾನ ಕಾಲೇಜು, ಸಾಹಿತ್ಯ ವಿಭಾಗದಲ್ಲಿ ಶಿರಸಿ ಕೃಷಿ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು. ಥಿಯೇಟರ್ ವಿಭಾಗಗಳಲ್ಲಿ ಹನುಮನಮಟ್ಟಿ ಚಾಂಪಿಯನ್, ಚಿತ್ರಕಲೆಯಲ್ಲಿ ವಿಜಯಪುರ ವಿಜೇತವಾಯಿತು. ಯಕ್ಷಗಾನ, ಕರಗ, ಕಂಸಾಳೆ ಮತ್ತು ರಾಜಸ್ಥಾನಿಯಂತಹ ವಿವಿಧ ನೃತ್ಯ ಶೈಲಿಗಳನ್ನು ಯುವಜನೋತ್ಸವದಲ್ಲಿ ಪ್ರದರ್ಶಿಸಲಾಯಿತು. ನೃತ್ಯ ಕಲಾ ಸ್ಪರ್ಧೆಯಲ್ಲಿ ಧಾರವಾಡ ಕೃಷಿ ಕಾಲೇಜು ಹಾಗೂ ಸಮುದಾಯ ವಿಜ್ಞಾನ ಪ್ರಥಮ ಸ್ಥಾನ ಹಂಚಿಕೊಂಡವು.
ನಾಟಕ, ಸಮೂಹ ನೃತ್ಯ, ಮೂಕಾಭಿನಯ, ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತ, ಚಿತ್ರಕಲೆ, ಪೋಸ್ಟರ್ ತಯಾರಿಕೆ, ರಂಗೋಲಿ, ಕ್ವಿಜ್, ಹಾಗೂ ಸಾಹಿತ್ಯ ಚಟುವಟಿಕೆಗಳು ಸೇರಿದಂತೆ ಒಟ್ಟು 30 ವಿವಿಧ ಸ್ಫರ್ಧೆಗಳು ನಡೆದವು.ಜಾನಪದ ವಿವಿ ಕುಲಪತಿ ಟಿ.ಎಂ. ಬಾಸ್ಕರ್ ಭಾಗವಹಿಸಿ ಮಾತನಾಡಿ, ಕೃಷಿಯಿಂದ ಜಾನಪದ ಸಮೃದ್ಧವಾಗಿದೆ. ನಾಗರಿಕತೆ ಅಥವಾ ಜಾನಪದ ಲೋಕವು ಕೃಷಿಯಿಂದಲೆ ಬಂದಿದೆ. ಕೃಷಿ ವಿದ್ಯಾರ್ಥಿಗಳು ಹೊಲ ಗದ್ದೆಗಳಲ್ಲಿ ಪ್ರಾಯೋಗಿಕ ಚಟುವಟಿಕೆ ಕೈಗೊಂಡು, ಉತ್ತಮ ಹಾಗೂ ಪೌಷ್ಟಿಕಾಂಶಯುಕ್ತ ಸಸ್ಯತಳಿಗಳನ್ನು ಅಭಿವೃದ್ಧಿಪಡಿಸಲು ಸಲಹೆ ನೀಡಿದರು.