ಅಹಿಂದ ಚಳುವಳಿ ಉದ್ದೇಶ ಸರ್ವರಿಗೂ ಸಮಪಾಲು-ಸಮಬಾಳು: ತರೀಕೆರೆ ಎನ್. ವೆಂಕಟೇಶ್

KannadaprabhaNewsNetwork | Published : Jun 14, 2024 1:01 AM

ಸಾರಾಂಶ

ತರೀಕೆರೆ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹತ್ಮಾ ಪ್ರೋ.ಬಿ ಕೃಷ್ಣಪ್ಪ ರವರ ಕನಸು ಶೋಷಿತರು ಆಳುವ ವರ್ಗ ಆಗಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ, ಅಹಿಂದ ಚಳುವಳಿ ರಾಜ್ಯ ಜಂಟಿ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.

- ತರೀಕೆರೆಯಲ್ಲಿ ಜಿಲ್ಲೆಯ ಅಹಿಂದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಪ್ರಮುಖರ ಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹತ್ಮಾ ಪ್ರೋ.ಬಿ ಕೃಷ್ಣಪ್ಪ ರವರ ಕನಸು ಶೋಷಿತರು ಆಳುವ ವರ್ಗ ಆಗಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ, ಅಹಿಂದ ಚಳುವಳಿ ರಾಜ್ಯ ಜಂಟಿ ಸಂಚಾಲಕ ತರೀಕೆರೆ ಎನ್. ವೆಂಕಟೇಶ್ ಹೇಳಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲೆ ಅಹಿಂದ ಪದಾಧಿ ಕಾರಿಗಳ, ಕಾರ್ಯಕರ್ತರ, ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಪರಿಸರದಲ್ಲಿ ಭೇದ ಭಾವವಿಲ್ಲ. ಯಾವುದೇ ಜಾತಿ ಧರ್ಮದವರಿಗೂ ಸಹ ತಾರತಮ್ಯವಿಲ್ಲ, ಅಸಮಾನತೆ ಇಲ್ಲ, ಆದರೆ ಪ್ರಕೃತಿಯಿಂದ ಬದುಕುತ್ತಿರುವ ಮನುಷ್ಯರಲ್ಲಿ ಜಾತಿ ಬೇಧ ಅಸಮಾನತೆ ಇದೆ. ಅಹಿಂದ ಚಳುವಳಿ ಉದ್ದೇಶ ಸರ್ವರಿಗೂ ಸಮಪಾಲು ಸಮಬಾಳು. ಆದ್ದರಿಂದ ಎಲ್ಲರೂ ಅಹಿಂದ ಚಳುವಳಿಯಲ್ಲಿ ಒಂದಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಸಂಘಟಿತರಾಗೋಣ ಎಂದರು.

ಮಹಿಳಾ ಘಟಕದ ರಾಜ್ಯ ಸಂಚಾಲಕರಾದ ಭವಾನಿ ಮಾತನಾಡಿ ಅಹಿಂದ ಸಂಘಟನೆ ಬೇರೆ ಸಂಘಟನೆ ಗಳಿಗಿಂತ ಭಿನ್ನವಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಹಿರಿಯ ಮಾರ್ಗದರ್ಶಕರು, ನಮ್ಮ ಸಮುದಾ ಯದ ಶೋಷಣೆಗೆ ಮುಂದಾಗಿದ್ದಾರೆ. ಆದರೆ ಈ ಅಹಿಂದ ಸಂಘಟನೆ ಉತ್ತಮ ಸಂಘಟನೆಯಾಗಿದ್ದು ಇದು ಪೂರಕ ದಾರಿಯಲ್ಲಿ ಸಾಗುವುದಕ್ಕೆ ಮುನ್ನುಡಿಯಾಗಿದೆ ಎಂದು ಹೇಳಿದರು.

ಹಿಂದುಳಿದ ಕುರುಬ ಸಮಾಜದ ಮುಖಂಡರಾದ ಹಾಲುವಜ್ರಪ್ಪ ಮಾತನಾಡಿ ಅಹಿಂದ ಚಳುವಳಿ ಯಾವತ್ತಿಗೂ ಹಿಂದೆ ಉಳಿಯಬಾರದು ಅಹಿಂದ ಸಂಘಟನೆ ಮತ್ತು ಚಳುವಳಿಯನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಹಿಂದ ಚಳುವಳಿಗಾರರಿಗೆ ರಾಜಕೀಯ ಸ್ಥಾನಮಾನ ಸಿಗುತ್ತದೆ. ಕೆಲವು ರಾಜಕಾರಣಿಗಳ ಕುತಂತ್ರದಿಂದ ಅಹಿಂದ ಚಳುವಳಿಗೆ ಪರ‍್ಯಾಯವಾಗಿ ರೂಪ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದು ಇದಕ್ಕೆ ನಾವು ಬಲಿಯಾಗದೆ ಅಹಿಂದ ಚಳುವಳಿಗೆ ಗಟ್ಟಿತನ ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.

ನಂತರ ಮುಸ್ಲಿಂ ಸಮಾಜದ ಮುಖಂಡ ಆದೀಲ್ ಪಾಷ ಮಾತನಾಡಿ ವೈಯಕ್ತಿಕ ಆಸೆ ಮತ್ತು ಪದವಿ ಗಾಗಿ ಹಂಬಲಿಸುವವರು ಈ ಅಹಿಂದ ಚಳುವಳಿಯಲ್ಲಿ ಭಾಗವಹಿಸುವುದು ಬೇಡ, ಅಹಿಂದ ಸಂಘಟನೆಗೆ ಉತ್ತಮ ಮನಸ್ಸಿನಿಂದ ಮುಕ್ತವಾಗಿ ಹೋರಾಟ ಮಾಡುವವರು ಬರಬೇಕಾಗಿದೆ ಎಂದು ಹೇಳಿದರು.

ಬಂಜಾರ ಬಳಗದ ಅಧ್ಯಕ್ಷ ಬಿ. ಕೃಷ್ಣನಾಯ್ಕ ಮಾತನಾಡಿ, ಅಹಿಂದ ಚಳುವಳಿ ರಾಜ್ಯದ ಮುಖ್ಯ ಮಂತ್ರಿ ಯಾಗಲು ಸಿದ್ದರಾಮಯ್ಯಗೆ ಸಂಘಟನೆ ಪೂರಕವಾಗಿತ್ತು ಎಂದು ಹೇಳಿದರು.

ಕುರುಬ ಸಮಾಜದ ಜಿಲ್ಲಾ ಸಂಚಾಲಕರಾಗಿ ಹಾಲು ವಜ್ರಪ್ಪ, ತಾಲೂಕು ಸಂಚಾಲಕರಾಗಿ ವಕೀಲ ನಾಗರಾಜ, ಅಲ್ಪ ಸಂಖ್ಯಾತ ಮುಸ್ಲಿಂ ಸಮಾಜದ ಜಿಲ್ಲಾ ಸಂಚಾಲಕರಾಗಿ ಎನ್.ಆರ್.ಪುರದ ಅಬ್ದುಲ್ ರೆಹಮಾನ್, ತರೀಕೆರೆ ತಾಲೂಕು ಸಂಚಾಲಕರಾಗಿ ಆದೀಲ್ ಪಾಷ, ಎಚ್.ಇ ಪ್ರದೀಪ್, ಚಲುವಾದಿ ಸಮಾಜದ ಜಿಲ್ಲಾ ಸಂಚಾಲಕರಾಗಿ ಎನ್.ಆರ್.ಪುರದ ರಾಜೇಶ್, ಜಿಲ್ಲಾ ಬಂಜಾರ ಸಂಘದ ಸಂಚಾಲಕರಾಗಿ ಹೊಸಳ್ಳಿ ತಾಂಡ್ಯದ ಎಚ್.ಎಂ. ಮಂಜುನಾಥ್, ಮಾದಿಗ ಸಮಾಜದ ತರೀಕೆರೆ ತಾಲೂಕು ಸಂಚಾಲಕರಾಗಿ ನಾಗೇನಹಳ್ಳಿ ಬಸವರಾಜ್, ಕಸಬಾ ಹೋಬಳಿ ಸಂಚಾಲಕರಾಗಿ ಬೇಲೇನಹಳ್ಳಿ ಎನ್.ಸಿದ್ದಪ್ಪ, ತರೀಕೆರೆ ನಗರ ಸಂಚಾಲಕರಾಗಿ ಯೋಗೀಶ್, ಮಹಿಳಾ ಘಟಕದ ತರೀಕೆರೆ ನಗರ ಸಂಚಾಲಕಿಯಾಗಿ ರಮ್ಯ, ಚಾಕೋನಹಳ್ಳಿ ಗ್ರಾಮ ಸಂಚಾಲಕಿಯಾಗಿ ಶೋಭ, ಯಲುಗೆರೆ ಗ್ರಾಮ ಸಂಚಾಲಕಿಯಾಗಿ ರೇಣುಕಾಬಾಯಿ ಹಾಗೂ ಭೈರನಾಯಕನಹಳ್ಳಿ ಗ್ರಾಮ ಸಂಚಾಲಕರಾಗಿ ಗುರು ಮೂರ್ತಿ, ಎನ್.ಆರ್. ಪುರ ನಗರ ಸಂಚಾಲಕರಾಗಿ ಪಿಕಪ್ ಚಂದ್ರು, ಬನ್ನೂರೂ ಗ್ರಾಮ ಸಂಚಾಲಕರಾಗಿ ನಾರಾಯಣ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಕೀಲರಾದ ನಾಗರಾಜ್ , ಶೇಖರ್, ಲೋಕೇಶ್,13ಕೆಟಿಆರ್.ಕೆ.13ಃ

ತರೀಕೆರೆಯಲ್ಲಿ ನಡೆದ ಜಿಲ್ಲೆಯ ಅಹಿಂದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಪ್ರಮುಖರ ಸಭೆಯಲ್ಲಿ ಅಹಿಂದ ಚಳುವಳಿ ರಾಜ್ಯ ಜಂಟಿ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ , ಹಿಂದುಳಿದ ಕುರುಬ ಸಮಾಜದ ಮುಖಂಡ ಹಾಲುವಜ್ರಪ್ಪ, ಬಂಜಾರ ಬಳಗದ ಅಧ್ಯಕ್ಷ ಬಿ. ಕೃಷ್ಣನಾಯ್ಕ, ರಾಜ್ಯ ಮಹಿಳಾ ಘಟಕದ ಸಂಚಾಲಕಿ ಎಂ.ವಿ.ಭವಾನಿ ಮತ್ತಿತರರು ಇದ್ದರು.

Share this article