ಅನಂತ್ ಕುಮಾರ್‌ ಹೆಗಡೆ ವಿರುದ್ಧ ಅಹಿಂದಾ ಪ್ರತಿಭಟನೆ

KannadaprabhaNewsNetwork |  
Published : Jan 18, 2024, 02:07 AM ISTUpdated : Jan 18, 2024, 07:40 AM IST
17ಎಚ್ಎಸ್ಎನ್15 : ಚನ್ನರಾಯಪಟ್ಟಣದ ಪ್ರವಾಸಿ ಮಂದಿರದ ಮುಂದೆ ನಡೆದ ಪ್ರತಿಭಟನೆ. | Kannada Prabha

ಸಾರಾಂಶ

ಚನ್ನರಾಯಪಟ್ಟಣಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂಧಿಸಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಅಹಿಂದ ಸಂಘಟನೆಯ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ

ಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂಧಿಸಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಅಹಿಂದ ಸಂಘಟನೆಯ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ. ಎಂ.ರಸ್ತೆ ಮೂಲಕ ಸಾಗಿ ಕೆ.ಆರ್.ಸರ್ಕಲ್ ನಲ್ಲಿ ಅನಂತ್ ಕುಮಾರ್ ಹೆಗಡೆಯ ಪ್ರತಿಕೃತಿ ದಹಿಸಿ ಅನಂತ್ ಕುಮಾರ್ ಹೆಗಡೆಯ ವಿರುದ್ಧ ಘೋಷಣೆಗಳನ್ನು ಕೂಗಿದ ನಂತರ ತಾಲೂಕು ಕಛೇರಿ ಆವರಣಕ್ಕೆ ಬಂದರು.

 ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆಯವರು ಸಭೆಯೊಂದರಲ್ಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಅವಹೇಳನಕಾರಿಯಾಗಿ ನಿಂದಿಸಿದ್ದಾರೆ ಎಂದು ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷ ಉತ್ತೇನಹಳ್ಳಿ ಚಂದ್ರು ತಿಳಿಸಿದರು.

ಅಹಿಂದ ಸಂಘಟನೆಯ ಮುಖಂಡರಾದ ಮಹೇಶ್‌ ಕಬ್ಬಾಳು ಮಾತನಾಡಿ, ರಾಜ್ಯದ ಶಿರಸಿ, ಶ್ರೀರಂಗಪಟ್ಟಣ ಹಾಗೂ ಇತರ ಕಡೆ ಇರುವ ಮಸೀದಿಗಳನ್ನು ಕೆಡವಿ, ಮಂದಿರ ಕಟ್ಟುತ್ತೇವೆ ಹಾಗೂ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಉದ್ದಟತನದಿಂದ ಕಾನೂನು ಬಾಹಿರ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದರು.

ದಂಡೋರ ಮಂಜುನಾಥ್ ಮಾತನಾಡಿ ಅನಂತ್‌ಕುಮಾರ್ ಹೆಗ್ಗಡೆಯ ಹೇಳಿಕೆಗಳು ದೇಶದ ಹಾಗೂ ರಾಜ್ಯದ ದಲಿತರ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದ ಗದಾ ಪ್ರಹಾರವಾಗಿದ್ದು, ಮುಂದಿನ ದಿನಮಾನದಲ್ಲಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಅಶಾಂತಿ ತಲೆದೋರಿ ಕೋಮು ಗಲಭೆಗಳಾಗುವ ಸಂಭವವಿದೆ ಎಂದು ಎಚ್ಚರಿಸಿದರು. 

ದೇಶದ ಸಂವಿಧಾನಕ್ಕೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಇವರ ಹೇಳಿಕೆಗಳು ಬಹಳ ಮುಜುಗರ ಉಂಟುಮಾಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದರು. ನಂತರ ತಾಲೂಕು ದಂಡಾಧಿಕಾರಿ ಗೋವಿಂದರಾಜುಗೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ದಿವಾಕರ್, ಮುಖಂಡರಾದ ಹೆಚ್. ಸಿ. ಶಂಕರಲಿಂಗೇಗೌಡ, ಎಂ. ಕೆ. ಮಂಜೇಗೌಡ, ಜಗದೀಶ್, ರಂಗಸ್ವಾಮಿ, ಗಾಯಕ ಮಂಜು, ಕುಂಬಾರಬೀದಿ ಗುರುರಾಜ್, ಶಾಂತರಾಜು, ಮಹದೇವ್, ಜಾವಿದ್, ರಮೇಶ್‌ಭೂಮಿ, ಹರೀಶ್, ರಾಮಚಂದ್ರು, ಶ್ರೀನಿವಾಸ್‌ಶೆಟ್ಟಿಹಳ್ಳಿ, ಮಖಾನ್‌ ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ