ಸಿಎಂ ಸ್ಥಾನ ಉಳಿಸಿಕೊಳ್ಳಲಿ ಅಹಿಂದ ಸಮಾವೇಶ ಮಾಡ್ತಿಲ್ಲ: ಸಚಿವ ಸತೀಶ ಜಾರಹೊಳಿ

KannadaprabhaNewsNetwork |  
Published : Jul 27, 2025, 01:57 AM IST
ಸತೀಶ ಜಾರಹೊಳಿ | Kannada Prabha

ಸಾರಾಂಶ

ಸಿಎಂ ಸ್ಥಾನ ಉಳಿಸಿಕೊಳ್ಳಲಿ ಅಹಿಂದ ಸಮಾವೇಶ ಮಾಡ್ತಿಲ್ಲ, ಅದು ಎಕ್ಸಟ್ರಾ ಕೆಲಸ, ಎಕ್ಸಟ್ರಾ ಹುದ್ದೆ ಅಷ್ಟೆ, ಅದರ ಜೊತೆ ಇನ್ನೆರಡು ಹುದ್ದೆ ಕೊಡಬಹುದಲ್ಲ ಎಂದು ಸಚಿವ ಸತೀಶ ಜಾರಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಎಂ ಸ್ಥಾನ ಉಳಿಸಿಕೊಳ್ಳಲಿ ಅಹಿಂದ ಸಮಾವೇಶ ಮಾಡ್ತಿಲ್ಲ, ಅದು ಎಕ್ಸಟ್ರಾ ಕೆಲಸ, ಎಕ್ಸಟ್ರಾ ಹುದ್ದೆ ಅಷ್ಟೆ, ಅದರ ಜೊತೆ ಇನ್ನೆರಡು ಹುದ್ದೆ ಕೊಡಬಹುದಲ್ಲ ಎಂದು ಸಚಿವ ಸತೀಶ ಜಾರಹೊಳಿ ಹೇಳಿದರು.

ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ, ಸಿಎಂ,ಡಿಸಿಎಂ ಅವರನ್ನೇ ಕೇಳಬೇಕು. ಅವರೇ ಅದಕ್ಕೆ ಸರಿಯಾದ ಉತ್ತರ ಕೊಡಬೇಕು. ನಾವು ಮಂತ್ರಿಗಳಷ್ಟೇ ಇದ್ದೀವಿ, ದಿನಾಂಕ ನಿಗದಿ ಮಾಡುವ ಅಧಿಕಾರ ನಮ್ಮ ವ್ಯಾಪ್ತಿ ನಮ್ದಲ್ಲ, ಅಧ್ಯಕ್ಷರು, ಡಿಸಿಎಂ,ಸಿಎಂ ಅವರಿಗೆ ಕೇಳಿದರೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಸಿಎಂ ಪವರ್ ಸೇರಿಂಗ್ ಕುರಿತು ಮಾತನಾಡಿದ ಅವರು, ಸಚಿವರು ಯಾರ ಆಗ್ತಾರೆ? ಯಾರು ಬಿಡ್ತಾರೆ ? ಅವ್ರನ್ನೇ ಕೇಳಬೇಕು., ನಾವು ಬಾಗಲಕೋಟೆ, ಬೆಳಗಾವಿ, ವಿಜಯಪುರ ಲೆವೆಲ್ ನಲ್ಲೇ ಇರ್ತಿವಿ. ಎಲ್ಲಾ ಕಡೆ ನಮ್ಮ ಅಭಿಮಾನಿಗಳು ಸಿಎಂ ಆಗ್ಲಿ ಎಂದು ಘೋಷಣೆ ಕೂಗುತ್ತಾರೆ. ಮುಂದಿನ ಸೂಚನೆ ಅಷ್ಟೇ, ಇವತ್ತಿನದಲ್ಲ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಡಿಕೆಶಿ ಪರ ಕೆಲ ಸ್ವಾಮೀಜಿ ಬ್ಯಾಟಿಂಗ್ ಮಾಡ್ತಿರುವ ವಿಚಾರಕ್ಕೆ ಉತ್ತರಿಸಿದ ಅವರು, ಅಂತಹ ಸ್ವಾಮೀಜಿಗಳು ಇದ್ದೇ ಇರ್ತಾರೆ, ಅವ್ರ ಅಭಿಮಾನಿಗಳು ಅವರ ಪರ ಘೋಷಣೆ, ನಮ್ಮ ಅಭಿಮಾನಿಗಳು ನಮ್ಮ ಪರ ಘೋಷಣೆ ಕೂಗ್ತಾರೆ. ಅವರು ಕೂಗಿದರೆ ನಾವು ಸಿಎಂ ಆಗ್ತೀವಾ ? ಅಂತಿಮ ತೀರ್ಮಾನ ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಜಾರಕಿಹೊಳಿ ಹೇಳಿದರು.

ಎಸ್ಸಿಗೆ 17, ಎಸ್ಟಿಗೆ 7 ಮೀಸಲಾತಿ ಹೆಚ್ಚಳ ಆಗಿದೆಯಾ ? ಆಗಿಲ್ಲ ಅಂತ ಸಾಬೀತು ಪಡಿಸಿದ್ರೆ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂಬ ಸಂಸದ ಕಾರಜೋಳ ಹೇಳಿಕೆಗೆ ಕುರಿತು ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿ, ಅದು ಕುಂತು ಚರ್ಚೆ ಮಾಡಬೇಕು. ಅವರ ಅಂಕಿ ಸಂಖ್ಯೆ ನಮ್ಮತ್ರ ಇಲ್ಲ. ನಮ್ಮ ಇಲಾಖೆಯಲ್ಲಿ ಮೀಸಲಾತಿ ಹೆಚ್ಚಳ ಅನ್ವಯ ಆಗಿದೆಯಾ ಎಂಬ ಪ್ರಶ್ನೆ ಗೊಂದಲ ಇದೆ, ನೇಮಕಾತಿ ಮಾಡಿಕೊಳ್ಳುವ ಏಜೆನ್ಸಿ ಬೇರೆ ಇದೆ, ನಾವು ಮಾಡಿಕೊಳ್ಳಲ್ಲ. ಅವರ ಅಂಕಿ ಅಂಶ ನಮ್ಮಲ್ಲಿ ಸಿಗಲ್ಲ. ಸಿಗೋದಾದರೆ ಕೆಪಿಎಸ್ಸಿ ಇಲ್ಲವೆ ಯಾವ ಅಥಾರಿಟಿ ಇದೆ ಅಲ್ಲಿ ಸಿಗುತ್ತೆ. ಅವರು (ಕಾರಜೋಳ) ಹೇಳಿದ್ಮೇಲೆ ಅದರ ಬಗ್ಗೆ ಗಮನ ಹರಸ್ತೀವಿ. ಆಯಾ ಇಲಾಖೆಯಿಂದ ಮಾಹಿತಿ ತರಿಸಿಕೊಳ್ತೀವಿ. ಅವರು (ಕಾರಜೋಳ) ಹೇಳಿದ್ರಲ್ಲಿ ಸರಿ ಇಲ್ಲ ಅಂತಾದರೆ, ಸರಿ ಮಾಡುವ ಕೆಲಸ ಮಾಡ್ತಿವಿ ಎಂದರು

ಲೋಕಸಭೆ ಚುನಾವಣೆ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪದ ಕುರಿತು ಮಾತನಾಡಿದ ಸಚಿವರು, ರಾಹುಲ್ ಗಾಂಧಿ ಹೇಳಿರುವುದು ನಿಜ. ಮಹಾರಾಷ್ಟ್ರದಲ್ಲಿ ಆಗಿದೆ ಅಂತಾರೆ, ಈಗಾಗಲೇ ಈ ವಿಷಯ ಚರ್ಚೆಯಲ್ಲಿದೆ, ಕೊರ್ಟನಲ್ಲಿದೆ, ಬಿಹಾರ ಚುನಾವಣೆಯಲ್ಲಿ ಇದೇ ರೀತಿ ಮಾಡ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದಿದ್ದು ದೊಡ್ಡ ಉದಾಹರಣೆ ಆಗಿದೆ. ಲಕ್ಷಾಂತರ ಹೊಸ ಮತದಾರರನ್ನು ಸೇರಿಸಿದ್ದಾರೆ, ಕೆಲವು ಕಡೆ ಡಿಲಿಟ್ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಬಗ್ಗೆ ಮಾತನಾಡಿ, ಕೆಲವೆಡೆ ಗೊಬ್ಬರ ಅಭಾವ ಆಗಿದೆ. ರಾಜ್ಯ ಮತ್ತು ಕೇಂದ್ರ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕಿದೆ, ವರ್ಷ ವರ್ಷಕ್ಕೆ ಗೊಬ್ಬರ ಕಡಿಮೆ ಆಗ್ತಿದೆ. ಈ ವಿಚಾರವಾಗಿ ಎರಡೂ ಸರ್ಕಾರ ಚಿಂತನೆ ಮಾಡಬೇಕಿದೆ, ರೈತರಿಗೆ ತೊಂದರೆ ಆಗದಂಗೆ ಎರಡು ಸರ್ಕಾರ ನೋಡಿಕೊಳ್ಳಬೇಕಿದೆ ಎಂದು ಬಾಡಗಂಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ