ವಿಶ್ವನಾಥ ಮಲೇಬೆನ್ನೂರು
ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆ ಹೆಚ್ಚಿಸಲು ರಾಜ್ಯ ಸರ್ಕಾರ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮ ಇದೀಗ ಅಧಿಕಾರಿಗಳು, ನೌಕರರು ಮನೆ ಹತ್ತಿರವಿರುವ ಕಚೇರಿಗಳಿಗೆ ಡೆಪ್ಯೂಟೇಶನ್ ಅಥವಾ ವರ್ಗಾವಣೆ ಪಡೆಯುವ ಲಾಭಿಗೆ ಮುಂದಾಗಿರುವುದು ಕಂಡು ಬಂದಿದೆ.
ರಾಜ್ಯ ಸರ್ಕಾರ 42 ಇಲಾಖೆಯ ಅಧಿಕಾರಿಗಳು, ನೌಕರರಿಗೆ ‘ಕರ್ತವ್ಯ’ (ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಎಐ ಆಧಾರಿತ ಹಾಜರಾತಿ ನಿರ್ವಹಣಾ ತಂತ್ರಜ್ಞಾನ ಜಾರಿಗೊಳಿಸಿದೆ. ಈ ವ್ಯವಸ್ಥೆಯಡಿ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಚೇರಿಯಲ್ಲಿ ಹಾಜರಾಗಿ ತಮ್ಮ ಮೊಬೈಲ್‌ನಲ್ಲಿ ಹಾಜರಾತಿ ದಾಖಲಿಸಬೇಕು.ಒಂದು ವೇಳೆ ತಡವಾದರೆ, ಸ್ವಯಂ ಪ್ರೇರಿತವಾಗಿ ಆಕಸ್ಮಿಕ ರಜೆ ಎಂದು ಪರಿಗಣಿಸಲಾಗುತ್ತದೆ. ಕಟ್ಟುನಿಟ್ಟಾಗಿ ವ್ಯವಸ್ಥೆ ಜಾರಿಗೊಳಿಸಿದ ಪರಿಣಾಮ ಇದೀಗ ಕೆಲವು ಅಧಿಕಾರಿಗಳು, ಸಿಬ್ಬಂದಿಗೆ ಸಂಕಷ್ಟ ಎದುರಾಗಿದ್ದು, ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಉನ್ನತ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಮೂಲಕ ತಮಗೆ ಅನುಕೂಲವಾಗುವ ಮತ್ತು ಮನೆ ಸಮೀಪದ ಸರ್ಕಾರಿ ಕಚೇರಿಗಳಿಗೆ ಡೆಪ್ಯೂಟೇಶನ್ ಅಥವಾ ವರ್ಗಾವಣೆ ಪಡೆಯುವುದಕ್ಕೆ ತಂತ್ರ ಆರಂಭಿಸಿದ್ದಾರೆ.
ಈವರೆಗೆ ಹಲವು ನೌಕರರು, ನೂರಾರು ಕಿ.ಮೀ.ನಿಂದ ಕಚೇರಿಗೆ ಬಸ್ ಅಥವಾ ರೈಲಿನ ಮೂಲಕ ಪ್ರತಿನಿತ್ಯ ಓಡಾಟ ನಡೆಸುತ್ತಿದ್ದರು. ಗ್ರಾಮಾಂತರ ಪ್ರದೇಶದಲ್ಲಿರುವ ಕಚೇರಿಗಳ ನೌಕರರು, ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡು ನಿತ್ಯ ಕಚೇರಿಗೆ ಹೋಗಿ ಬರುತ್ತಿದ್ದರು.
ಕಚೇರಿ ಸಮೀಪ ಮನೆ ಹುಡುಕಾಟ:
ಕಟ್ಟುನಿಟ್ಟಿನ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿರುವುದರಿಂದ ರಾಜ್ಯದಲ್ಲಿ ಶಾಲೆ ಹಾಗೂ ಕಚೇರಿ ಸಮಯಕ್ಕೆ ತಮ್ಮ ನಿವಾಸ ಸ್ಥಳದಿಂದ ಕಚೇರಿ ಅಥವಾ ಶಾಲೆ ಇರುವ ಸ್ಥಳಕ್ಕೆ ಸರ್ಕಾರಿ ಬಸ್ ಓಡಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸಹ ಕೇಳಿ ಬಂದಿದೆ.
ರಾಜ್ಯದಲ್ಲಿ ಒಟ್ಟಾರೆ 4,78,033 ಸರ್ಕಾರಿ ಅಧಿಕಾರಿ, ನೌಕರರಿದ್ದಾರೆ. ಈ ಪೈಕಿ ಜೂನ್ 17ರ ವರೆಗೆ ಒಟ್ಟು 2,66,711 ನೌಕರರು ಕರ್ತವ್ಯ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ 2,11,322 ಅಧಿಕಾರಿ ನೌಕರರು ನೋಂದಣಿ ಮಾಡಿಕೊಂಡಿಲ್ಲ. ನೋಂದಣಿ ಮಾಡಿಕೊಂಡವರ ಪೈಕಿ ಕಳೆದ ಬುಧವಾರ 1,78,543 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 88,168 ನೌಕರರು ಗೈರಾಗಿದ್ದರು.---ಕೋಟ್---
- ಸಿ.ಎಸ್. ಷಡಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.