ಕುಕನೂರು: ಜಗತ್ತನ್ನು ವ್ಯಾಪಿಸಿರುವ ಎಐ ಮನುಷ್ಯರನ್ನು ತಿನ್ನುವ ಭಸ್ಮಾಸುರವಾಗಿದೆ. ಅದು ಮನುಷ್ಯರನ್ನೇ ಮೀರಿಸುತ್ತದೆ ಎಂದು ಬೆಳಗಾವಿ ವಿಟಿಯು ಕುಲಪತಿ ಡಾ. ವಿದ್ಯಾಶಂಕರ ಎಸ್. ಹೇಳಿದರು.
ಭಾರತದಲ್ಲಿ ಇನ್ನೂ ಎಐ ಬಳಕೆ ಇಲ್ಲ. ಹೆಚ್ಚಿನ ಪ್ರಮಾಣದಲ್ಲಿ ಯುವ ಜನತೆ ಕೌಶಲ್ಯ ಪರಿಣತಿ ಕಲಿಯುವ ಮೂಲಕ ಸ್ವಯಂ ಉದ್ಯೋಗದತ್ತ ಹೆಚ್ಚು ಗಮನ ಹರಿಸಬೇಕು. ಪ್ರತಿ ವರ್ಷ ೧೫ರಿಂದ ೧೮ ಲಕ್ಷ ವಿದ್ಯಾರ್ಥಿಗಳು ಎಂಜನಿಯರ್‌ಗಳಾಗಿ ಹೊರಬರುತ್ತಿದ್ದಾರೆ. ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಪ್ರಮುಖ ಕಂಪನಿಯು ಉದ್ಯೋಗ ನೀಡಲು ಬಂದಾಗ ಸಾಫ್ಟ್‌ವೇರ್ ಕಲಿತ ವಿದ್ಯಾರ್ಥಿಗಳು ಕೇವಲ ೩೦೦ರಿಂದ ೪೦೦ ಮಾತ್ರ ದೊರೆಯುತ್ತಾರೆ. ಕೌಶಲ್ಯ ಕೊರತೆ ಇದೆ. ಎಂಜನಿಯರ್ ವಿದ್ಯಾರ್ಥಿಗಳು ಕಲಿಯುವ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಕಲಿಯಬೇಕು. ಮೂರನೇ ವರ್ಷದ ಪಠ್ಯದಲ್ಲಿ ಎಐ ಬಗ್ಗೆ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ ಎಂದರು.
ರಾಜ್ಯ ಸರ್ಕಾರದ ಯುವನಿಧಿಯಲ್ಲಿ ೪೮ ಸಾವಿರ ಇಂಜಿನಿಯರ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ನಿರುದ್ಯೋಗದ ಕುರುಹು ಕಾಣ ಸಿಗುತ್ತದೆ. 2030ಕ್ಕೆ 3 ಕೋಟಿ ಎಂಜಿನಿಯರ್‌ಗಳ ಅವಶ್ಯಕತೆ ಇದೆ. ವಿಟಿಯುನಿಂದ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕೃಷಿಯಲ್ಲಿ ಸಹ 80 ಕೋಟಿಯಲ್ಲಿ ವಿವಿಧ ರಂಗದಲ್ಲಿ ಎಐ ಬಳಕೆ ಹಾಗೂ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡುವ ಹಂತದಲ್ಲಿ ಕೌಶಲ್ಯ ರೂಪಿಸಲಾಗುತ್ತಿದೆ ಎಂದರು.