ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಬ್ಯಾಳಿ ಮಾತನಾಡಿ, 13 ಎಕರೆ 29 ಗುಂಟೆ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳು ನಿರ್ಮಾಣಗೊಂಡಿವೆ. ಪ್ರತಿ ಮನೆ ₹6.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿವೆ ಎಂದರು.
ನರಗುಂದ: 2023ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ₹30 ಕೋಟಿ ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಅವುಗಳಲ್ಲಿಗ 292 ಮನೆಗಳು ನಿರ್ಮಾಣ ಆಗಿವೆ. ಸ್ವಂತ ಮನೆಯಲ್ಲಿ ವಾಸ ಮಾಡಬೇಕೆಂಬ ಕನಸು ಹೊಂದಿದ್ದ ಫಲಾನುಭವಿಗಳು ಜಗನ್ನಾಥ ಬಡಾವಣೆಯಲ್ಲಿ ಸುಖಕರವಾದ ಜೀವನ ಸಾಗಿಸಲಿ ಎಂದು ಶಾಸಕ ಸಿ. ಸಿ. ಪಾಟೀಲ ಹಾರೈಸಿದರು.
ಶನಿವಾರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಜಗನ್ನಾಥ ನಗರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗಿರುವ 292 ಮನೆಗಳ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿ, ಜಗನ್ನಾಥ ಬಡಾವಣೆಯಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಅಂಗನವಾಡಿ ಕೇಂದ್ರ ಸೇರಿದಂತೆ ಅನೇಕ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಡಾವಣೆಯಲ್ಲಿ ಗಾರ್ಡನ್ ಇಲ್ಲ. ಹತ್ತಿರದಲ್ಲಿ ಪುರಸಭೆ ಜಾಗ ಇದ್ದರೆ ಪುರಸಭೆ ಅಧಿಕಾರಿಗಳು ತಿಳಿಸಬೇಕು. ಸುಂದರವಾದ ಹೂದೋಟ ನಿರ್ಮಿಸೋಣ. ಅಲ್ಪಸ್ವಲ್ಪ ಉಳಿದಿರುವ ಕೆಲಸವನ್ನು ಅಧಿಕಾರಿಗಳು ಶೀಘ್ರ ಪೂರ್ಣಗೊಳಿಸಬೇಕು. ಜಗನ್ನಾಥ ಬಡಾವಣೆಯ ಫಲಾನುಭವಿಗಳಿಗೆ 15 ದಿವಸದೊಳಗಾಗಿ ಹಕ್ಕುಪತ್ರ ಹಾಗೂ ಮನೆ ಕೀಲಿಕೈ ವಿತರಿಸುತ್ತೇನೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಬ್ಯಾಳಿ ಮಾತನಾಡಿ, 13 ಎಕರೆ 29 ಗುಂಟೆ ಪ್ರದೇಶದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳು ನಿರ್ಮಾಣಗೊಂಡಿವೆ. ಪ್ರತಿ ಮನೆ ₹6.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿವೆ. ಮನೆ ಪಡೆಯುವ ಫಲಾನುಭವಿಗಳು ತಲಾ ₹1 ಲಕ್ಷ ಹಣ ನೀಡಬೇಕು. ಉಳಿದ ಹಣವನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸರ್ಕಾರ ನೀಡುತ್ತದೆ. ಫಲಾನುಭವಿಗಳು ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತ್ತವಾಡ, ಪ್ರಕಾಶ ಪಟ್ಟಣಶೆಟ್ಟಿ, ಸುನೀಲ ಕುಷ್ಟಗಿ, ರುದ್ರಪ್ಪ ಹೊಸಮನಿ, ರಸುಲ್ ಚೌದರಿ, ಈರಣ್ಣ ನಾಯ್ಕರ, ಎಇಇ ಮಂಜುನಾಥ, ನಾಗರಾಜ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.