ಕೈಗಾರಿಕಾ ಕ್ಷೇತ್ರದಲ್ಲಿ ಎಐ ಕ್ರಾಂತಿಕಾರಿ ಬದಲಾವಣೆ: ಪ್ರಶಾಂತ್ ಜಯರಾಮ್

KannadaprabhaNewsNetwork |  
Published : Oct 10, 2026, 02:30 AM IST
09ಎಂಐಟಿಕೆ | Kannada Prabha

ಸಾರಾಂಶ

ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶುಕ್ರವಾರ ಐಡಿಯಾಸ್ ಟುಡೇ, ಇಂಪ್ಯಾಕ್ಟ್ ಟುಮಾರೋ ಎಂಬ ಧ್ಯೇಯವಾಕ್ಯದೊಂದಿಗೆ ಎಂಐಟಿಕೆ ಎಐ ವಿಶನ್ 24ಎಚ್ ರಾಷ್ಟ್ರಮಟ್ಟದ ಹ್ಯಾಕಥಾನ್‌

ಕುಂದಾಪುರ: ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕು. ಎಐ ತಂತ್ರಜ್ಞಾನವನ್ನು ಸಮಾಜಮುಖಿ ಪರಿಹಾರಗಳಿಗೆ ಬಳಸಿಕೊಳ್ಳಲು ಇಂತಹ ಹ್ಯಾಕಥಾನ್‌ಗಳು ಉತ್ತಮ ವೇದಿಕೆಯಾಗುತ್ತವೆ ಎಂದು ಬೆಂಗಳೂರಿನ ಕಾಮ್ವಾಲ್ಟ್ ಸಂಸ್ಥೆಯ ಡಾಟಾ ಇವಾಂಜೆಲಿಸ್ಟ್ ಪ್ರಶಾಂತ್ ಜಯರಾಮ್ ಹೇಳಿದರು.

ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶುಕ್ರವಾರ ಐಡಿಯಾಸ್ ಟುಡೇ, ಇಂಪ್ಯಾಕ್ಟ್ ಟುಮಾರೋ ಎಂಬ ಧ್ಯೇಯವಾಕ್ಯದೊಂದಿಗೆ ಎಂಐಟಿಕೆ ಎಐ ವಿಶನ್ 24ಎಚ್ ರಾಷ್ಟ್ರಮಟ್ಟದ ಹ್ಯಾಕಥಾನ್‌ ಉದ್ಘಾಟಿಸಿ ಮಾತನಾಡಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಟಿಯರ್-1 ತಂತ್ರಜ್ಞಾನ ಸಂಸ್ಥೆಯ ಸಹಾಯಕ ಉಪಾಧ್ಯಕ್ಷ ಗುರುಮೂರ್ತಿ ಎಸ್. ಬಿ. ಅವರು ಮಾತನಾಡಿ, ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ, ಅದಕ್ಕೆ ದಕ್ಷ ಕೋಡಿಂಗ್ ಮತ್ತು ಎಐ ಪರಿಕರಗಳ ಮೂಲಕ ಪರಿಹಾರ ರೂಪಿಸುವುದು ಇಂದಿನ ಕಾರ್ಪೊರೇಟ್ ಜಗತ್ತಿನ ಅಗತ್ಯ. ನಿರಂತರ ತಾಂತ್ರಿಕ ನಾವೀನ್ಯತೆ ಮಾತ್ರ ವಿದ್ಯಾರ್ಥಿಗಳನ್ನು ಯಶಸ್ವಿ ಎಂಜಿನಿಯರ್‌ಗಳನ್ನಾಗಿ ರೂಪಿಸಲು ಸಾಧ್ಯ ಎಂದು ಕವಿಮಾತು ಹೇಳಿದರು.

ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜಾಗಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಂಜೆ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕ ಡಾ. ಎಸ್. ಎನ್. ಭಟ್ ತಂತ್ರಜ್ಞಾನದ ವೇಗದ ಬದಲಾವಣೆಯೊಂದಿಗೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜಾಗಬೇಕು. ಸೋಲು-ಗೆಲುವಿಗಿಂತ ಕಲಿಕೆ ಮತ್ತು ನಿರಂತರ ಪ್ರಯತ್ನ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗ್ಡೆ ಶುಭ ಹಾರೈಸಿದರು. ಗಣಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ರಾಮಣ್ಣ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕ ಡಾ. ಮುತ್ತುವೇಲು ಲಕ್ಶ್ಮೀಕಾಂತ ವಂದಿಸಿದರು. ವಿಧ್ಯಾರ್ಥಿನಿ ತ್ರಿಶಾ ಹಾಗು ಅಲಿಶಾ‌ ಬಿಷಪ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡ್ಕೂರು ಗ್ರಾಮಕ್ಕೆ ಕರ್ಣನಂತಿದ್ದ ನಾನಾ ಪಾಟೆಕರ್ !
12ರಂದು ಉಡುಪಿ-ಉಚ್ಚಿಲ ದಸರಾಕ್ಕೆ ಸಿಎಂ ಭೇಟಿ