ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನಫಾರ್ಮೇಶನ್ ಸೈನ್ಸ್ ವಿಭಾಗದಿಂದ ವಿದ್ಯಾರ್ಥಿಗಳಿಗೆ ಎಐ ಇನ್ ಸೈಬರ್ ಸೆಕ್ಯೂರಿಟಿ ವಿಷಯದ ಕುರಿತು ಹಮ್ಮಿಕೊಂಡ ಮೂರು ದಿನಗಳ ಕೌಶಲ್ಯ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಐಟಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗುತ್ತಿರುವ ಇಂದಿನ ದಿನಗಳಲ್ಲಿ ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿವೆ. ತಾಂತ್ರಿಕ ಕ್ಷೇತ್ರವು ಸೈಬರ್ ಭದ್ರತೆಯಲ್ಲಿ ವೃತ್ತಿಪರ ಎಂಜಿನಿಯರುಗಳ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು. ಐಎಸ್ಸಿ ವಿಭಾಗದ ಮುಖ್ಯಸ್ಥ ಡಾ.ಸಾಧನಾ ಬಂಗಾರಶೆಟ್ಟಿ ಅಧ್ಯಕ್ಷೀಯ ಮಾತುಗಳನ್ನಾಡಿದರು.ಪ್ರೊ.ಸಂದೀಪ್ ಕೂಗಲಿ ಹಾಗೂ ಪ್ರೊ.ಪಿ.ಕೆ.ದೇಶಪಾಂಡೆ ಕಾರ್ಯಕ್ರಮವನ್ನು ಎಐಸಿಟಿಇ ಐಡಿಯಾ ಲ್ಯಾಬ್ ಸಹಯೋಗದೊಂದಿಗೆ ಸಂಯೋಜನೆ ಮಾಡಿದ್ದರು. ಐಸೆಕ್ ಸೈಬರ್ ಸೆಕ್ಯೂರಿಟಿ ಸೊಲ್ಯೂಷನ್ಸ್ ಬೆಳಗಾವಿಯ ಅನೀಶ್ ವೆರ್ಣೆಕರ್ ಉಪಸ್ಥಿತರಿದ್ದರು.