ಸೂಲಿಬೆಲೆ: ಮಹಿಳೆ ಮತ್ತು ಪುರುಷ ಎಂಬ ಬೇಧವಿಲ್ಲದೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಸಕ್ರಿಯರಾಗಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಹೇಳಿದರು.
ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಮ್ಮ ಅಕ್ಕಮಹಾದೇವಿ ಸ್ವ-ಸಹಾಯ ಮಹಿಳಾ ಗುಂಪು ಸದಾ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದು, ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಉತ್ತಮ ಸ್ವ-ಸಹಾಯ ಗುಂಪು ಇದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಅಧಿಕಾರಿ ಶಾಂತಮ್ಮ, ಮಹಿಳಾ ಅಭಿವೃದ್ಧಿ ನಿಗಮದ ವಿಜಯಕುಮಾರಿ, ಅಕ್ಕಮಹಾದೇವಿ ಸಂಘದ ಭಾರತಮ್ಮ, ಪದ್ಮ, ಶೈಲಾ, ಜಗದಾಂಬ, ಅಕ್ಕಯಮ್ಮ, ವೆಂಕಟಲಕ್ಷ್ಮಿ ಸಹಾಯಕ ಮಹೇಶ್, ಸಹದೇಶ್ ಇತರರಿದ್ದರು.