ಕನ್ನಡಪ್ರಭವಾರ್ತೆ ಮೂಲ್ಕಿ
ಐಕಳದ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ, ಮುಂಬೈ ಸಮಿತಿ ಮತ್ತು ಕಾಂತಾಬಾರೆ ಬೂದಾಬಾರೆ ಪ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಐಕಳದಲ್ಲಿ ಜರುಗಿದ ಹೊನಲು ಬೆಳಕಿನ ಪುರುಷರ ಮುಕ್ತ 65 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.ಐಕಳ ಕಾಂತಾ ಬಾರೆ ಬೂದಾ ಬಾರೆ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಐಕಳಬಾವದ ರವಿಚಂದ್ರ ಡಿ ಶೆಟ್ಟಿ, ಮುಂಬೈ ಸಮಿತಿಯ ಸುಕುಮಾರ ಭಂಡಾರಿ, ಸಂಜೀವ ಶೆಟ್ಟಿ ಸ್ಥಳಂತ ಗುತ್ತು, ಸುರೇಂದ್ರ ಶೆಟ್ಟಿ ಹೊಸಗದ್ದೆ, ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಕಾಂತಾಬಾರೆ-ಬೂದಾಬಾರೆ ಕ್ಲಬ್ ಕೋಶಾಧಿಕಾರಿ ದಯೇಶ್ ಕೋಟ್ಯಾನ್, ಚೇತನ್ ಶೆಟ್ಟಿ, ಶರತ್ ಶೆಟ್ಟಿ ಕಿನ್ನಿಗೋಳಿ, ವೀಕ್ಷಕ ವಿವರಣೆಗಾರ ದಿವಾಕರ ಉಪ್ಪಳ ದೇವಿದಾಸ್ ಶೆಟ್ಟಿ ಶ್ರೀ ಕಲ್ಪ, ಸಾಯಿನಾಥ ಶೆಟ್ಟಿ, ಶ್ರೀಶ ಸರಪ್ ಐಕಳ, ಸ್ವರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಪುರಸ್ಕೃತ ಕ್ರೀಡಾಪಟು ಜಯ ಎ ಶೆಟ್ಟಿ ಮತ್ತು ಅವರ ಪತ್ನಿ ಛಾಯಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬಳಿಕ ಮ್ಯಾಟ್ ಕಬ್ಬಡಿ ಪಂದ್ಯಾಟ ನಡೆಯಿತು.