ಕನಕಪುರ: ರೈತರ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದ ಭೂ ಮಾಪನ ಪ್ರಕ್ರಿಯೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಿನೂತನ ತಂತ್ರಜ್ಞಾನದಡಿ ಮರು ಭೂ ಮಾಪನ ಮಾಡಿ ಸೂಕ್ತ ದಾಖಲೆಗಳನ್ನು ಒದಗಿಸುವ ಹೊಸ ಮಾದರಿ ಜಾರಿಗೆ ತಂದು ಇತಿಹಾಸ ನಿರ್ಮಿಸಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಹೋಬಳಿ ವ್ಯಾಪ್ತಿಯ 35 ಕಂದಾಯ ಗ್ರಾಮಗಳ ಪೈಕಿ 33 ಗ್ರಾಮಗಳಲ್ಲಿ ವಿನೂತನ ತಂತ್ರಜ್ಞಾನ (ರೋವರ್) ಮೂಲಕ ಸರ್ವೆ ಮಾಡಿ 23,469 ರೈತರ 97 ಸಾವಿರ ಎಕರೆ ಜಮೀನಿಗೆ ಹೊಸ ಪೋಡಿಯುಕ್ತ ದಾಖಲೆಗಳನ್ನು ನೀಡುವ ಮೂಲಕ ರಾಷ್ಟ್ರದಲ್ಲೇ ಹೊಸ ಮಾದರಿ ನಿರ್ಮಾಣ ಮಾಡಿದೆ. ಮುಂದಿನ ಪೀಳಿಗೆಗೆ ಅನುಕೂಲ ಆಗಲಿರುವುದರಿಂದ ಈ ಯೋಜನೆಯನ್ನು ರಾಮನಗರ ಜಿಲ್ಲೆ ಹಾಗೂ ರಾಜ್ಯಾದ್ಯಂತ ವಿಸ್ತರಣೆ ಮಾಡುವಂತೆ ಮನವಿ ಮಾಡಿ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಹೊಸ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದರು.
ಕೆ ಕೆ ಪಿ ಸುದ್ದಿ 03:ದೊಡ್ಡಆಲಹಳ್ಳಿ ಗ್ರಾಮದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.