ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ 2 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದರ ಜೊತೆ 44 ಲಕ್ಷ ರು. ವೆಚ್ಚದ ಪಟ್ಟಣ ಪುರಸಭೆಗೆ ಹೊಸದಾಗಿ ಖರೀದಿಸಿರುವ ಸಕ್ಕಿಂಗ್/ಜಟ್ಟಿಂಗ್ ಮಷಿನ್ ವಾಹನಕ್ಕೆ ಚಾಲನೆ ನೀಡಿರುವುದಾಗಿ ಹೇಳಿದರು.ಪಟ್ಟಣ ಭೋವಿ ಕಾಲೋನಿಯ ಪರಿಮಿತಿಯಲ್ಲಿ 20 ಲಕ್ಷಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ, ಹೈಮಾಸ್ಟ್ ಲೈಟ್ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಪಡಿಸುವ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದೆ. ಪುರಸಭಾ ವ್ಯಾಪ್ತಿಯ 3ನೇ ವಾರ್ಡ್ ನ ಪೋಸ್ಟ್ ಆಫೀಸ್ ಸರ್ಕಲ್‌ನಲ್ಲಿ ಅಳವಡಿಸಲಾಗಿರುವ ಮಿನಿ ಹೈಮಾಸ್ಟ್ ಬೀದಿ ದೀಪಗಳಿಗೆ ಚಾಲನೆ ದೊರಕಿದೆ ಎಂದರು.
ನಮ್ಮ ಸರ್ಕಾರ ಬಹುಕೋಟಿ ವೆಚ್ಚದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದು, ತಾಲೂಕು ಆಸ್ಪತ್ರೆಯ ಆವರಣದಲ್ಲಿ ಅಳವಡಿಸಲಾಗಿರುವ ಮಿನಿ ಹೈಮಾಸ್ಟ್ ಬೀದಿ ದೀಪಗಳಿಗೆ ಚಾಲನೆ ನೀಡಿದೆ. ಪ್ರಮುಖವಾಗಿ ಶ್ರೀರಂಗಪಟ್ಟಣ ಪುರಸಭೆಯನ್ನು ಜಿಲ್ಲೆಯಲ್ಲೆ ಮಾದರಿ ಪುರಸಭೆಯನ್ನಾಗಿಸುವ ನಿಟ್ಟಿನಲ್ಲಿ ಕಾಮಗಾರಿ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.