ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶ್ರೀಕ್ಷೇತ್ರ ಐರಾವತ ಐರಣಿ ಹೊಳೆಮಠ ಮಹಾ ಸಂಸ್ಥಾನಾಧಿಪತಿ, ಶ್ರೀಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮಿ ಅವರಿಗೆ ಗೌರವ ಸರ್ಮಪಣೆ ಮಾಡಿ, ಐರಣಿ ಮಠದ ಪಟ್ಟಾಭಿಷೇಕ ಕಾರ್ಯಕ್ರಮದ ಕರಪತ್ರಗಳನ್ನು ಶಾಸಕ ಡಿ.ಜಿ.ಶಾಂತನಗೌಡ ಬಿಡುಗಡೆಗೊಳಿಸಿದರು.ಶುಕ್ರವಾರ ಐರಣಿ ಹೊಳೆಮಠ ಮಹಾ ಸಂಸ್ಥಾನಾಧಿಪತಿ ಶ್ರೀಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮಿಗಳು ತಾಲೂಕಿನ ಕೋಣನತಲೆ ಶಾಖಾ ಮಠದ ಮುಪ್ಪಿನಾರ್ಯ ಆಶ್ರಮಕ್ಕೆ ಗುರುಸೇವಾ ಸಮಿತಿ ಸದಸ್ಯರ ಪಟ್ಟಿಯನ್ನು ಹೊನ್ನಾಳಿ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ನೋಂದಾವಣೆ ಮಾಡಿಸಿದರು. ಅನಂತರ ಶಾಸಕ ಡಿ.ಜಿ.ಶಾಂತನಗೌಡರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭ ಐರಣಿ ಮಠದ ಸ್ವಾಮಿಗಳಿಗೆ ಗೌರವ ಸಮರ್ಪಿಸಲಾಯಿತು.
ಶ್ರೀಗಳು ಈ ಸಂದರ್ಭ ಮಾತನಾಡಿ, ಐರಣಿ ಮಠದ ಶ್ರೀಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮಿಗಳ ಅಪ್ಪಣೆ ಮೇರೆಗೆ, ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲೂಕಿನ ಶ್ರೀಕ್ಷೇತ್ರ ಐರಣಿ ಹೊಳೆಮಠ ಮತ್ತು ಶಾಖಾ ಮಠಗಳಿಗೆ ಪೂಜ್ಯರ ಅಗ್ರಗಣ್ಯ ಶಿಷ್ಯರಾದ ಶ್ರೀ ಸಿದ್ಧಾರೂಢ ಬಾಲಯೋಗಿ ಸ್ವಾಮಿ ಅವರನ್ನು ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡಲಾಗುವುದು. ಈ ಸದುದ್ದೇಶದಿಂದ ಫೆ.8ರಿಂದ 10 ರವರೆಗೆ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಿದರು.ಶ್ರೀ ಕ್ಷೇತ್ರ ಐರಣಿ ಹೊಳೆಮಠದಲ್ಲಿ ನಾಡಿನ ಸಕಲ ಜಗದ್ಗುರುಗಳು, ಮಠಾಧಿಪತಿಗಳು, ಸಾಧು-ಸಂತರು, ಗಣ್ಯರು ಹಾಗೂ ಹೊಳೆಮಠ ಮತ್ತು ಎಲ್ಲ ಶಾಖಾಮಠಗಳ ಸಮಸ್ತ ಭಕ್ತರ ಸಮ್ಮುಖ ಪಟ್ಟಾಭಿಷೇಕ ನೆರವೇರಿಸಲು ಸಕಲ ಭಕ್ತರು ಇಚ್ಛೆ ಹೊಂದಿದ್ದಾರೆ. ಐರಣಿ ಮಠದಲ್ಲಿ ಅತ್ಯಂತ ವಿಜೃಂಭಣೆಯಿಂದ ಶ್ರದ್ಧಾ-ಭಕ್ತಿಯಿಂದ 3 ದಿನಗಳ ಕಾಲ ಭಕ್ತರು ಆಗಮಿಸಿ ತನು-ಮನ-ಧನ ಸಹಾಯದೊಂದಿಗೆ ಸೇವೆಗೈದು ಸಕಲ ಪೂಜ್ಯರ ದರ್ಶನ- ಆರ್ಶಿರ್ವಾದ ಪಡೆಯಬೇಕು ಎಂದು ತಿಳಿಸಿದರು.
ಕರಪತ್ರ ಬಿಡುಗಡೆಗೊಳಿಸಿದ ಸಂದರ್ಭ ಕೊಣನತೆಲೆ ಮುಖಂಡರಾದ ಮಾಜಿ ಛೇರ್ಮನ್ ನಾಗಪ್ಪ, ಹಿರೇಗೋಣಿಗೆರೆ ಸೋಮಪ್ಪ, ಐರಣಿ ಬಾಬಣ್ಣ, ನಂದಿಗೌಡ, ಈಶ್ವರಪ್ಪಗೌಡ, ಉಮೇಶ್, ಸುಭಾಷ್, ಕೊಣನತಲೆ ಹಾಗೂ ಹಿರೇಗೋಣಿಗೆರೆ ಗ್ರಾಮಗಳ ಮುಖಂಡರು, ಭಕ್ತರು ಇದ್ದರು.- - -
ಬಾಕ್ಸ್ * ಆಡಳಿತ ಮಂಡಳಿಗೆ ಆಯ್ಕೆಕೊಣನತಲೆ ಶಾಖಾ ಮಠವಾದ ಮುಪ್ಪಿನಾರ್ಯ ಆಶ್ರಮಕ್ಕೆ ಗುರುಸೇವಾ ಸಮಿತಿ ಟ್ರಸ್ಟ್‌ನ ಆಡಳಿತ ಮಂಡಳಿಗೆ ಸದಸ್ಯರ ಆಯ್ಕೆ ನಡೆಯಿತು. ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿಯನ್ನು ಪಟ್ಟಣದ ಉಪ ನೋಂದಣಾಧಿಕಾರಿಯಲ್ಲಿ ನೋಂದಣಿ ಮಾಡಿಸಲಾಗಿದೆ. ಗೌರವ ಅಧ್ಯಕ್ಷರಾಗಿ ಶ್ರೀಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷರಾಗಿ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ. ಶಾಸಕ ಡಿ.ಜಿ. ಶಾಂತನಗೌಡ, ಬಾಲಯೋಗಿ ನಿರ್ದೇಶಕರು ಹಾಗೂ ಕಾರ್ಯದರ್ಶಿಯಾಗಿ ಕೆ.ಶಾಂತರಾಜ, ಖಜಾಂಚಿಯಾಗಿ ಹಾಲಪ್ಪ ಆಯ್ಕೆಯಾಗಿದ್ದಾರೆ. ಗೌರವ ಸದಸ್ಯರನ್ನಾಗಿ ಕೊಣನತಲೆ ಗ್ರಾಮದ ಎನ್.ನಾಗಪ್ಪ, ಸದಸ್ಯರಾಗಿ ಬಿ.ವಿ.ಸಿದ್ಧಾರೂಢ, ಬಿ.ವೀರನಗೌಡ, ನಂದ್ಯಪ್ಪ ಪಾಳ್ಯದ್, ಸೋಮಪ್ಪ, ಜಿ.ಆನಂಪ್ಪ, ಬಸಾಪುರ ಮಲ್ಲಪ್ಪ ನಾಗರಾಜ, ಜಿ.ಬಿ.ಮಲ್ಲನಗೌಡ, ರವೀಂದ್ರನಾಥ್, ಡಿ.ಬಿ.ಉಮೇಶ್, ಕುಬೇರ ಗೌಡ ಪಾಟೀಲ್, ಸದಸ್ಯರಾಗಿ ಆಯ್ಕೆಯಾದರು ಎಂದು ತಿಳಿಸಲಾಯಿತು.- - - -17ಎಚ್.ಎಲ್.ಐ3.ಜೆಪಿಜಿ:
ಶ್ರೀಕ್ಷೇತ್ರ ಐರಾವತ ಐರಣಿ ಹೊಳೆಮಠ ಮಹಾ ಸಂಸ್ಥಾನಾಧಿಪತಿ ಶ್ರೀಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮಿಯವರಿಗೆ ಳಿ ಗೌರವ ಸರ್ಮಪಣೆ ಮಾಡಲಾಯಿತು. ಈ ಸಂದರ್ಭ ಐರಣಿ ಮಠದ ಕಾರ್ಯಕ್ರಮದ ಕರಪತ್ರಗಳನ್ನು ಶಾಸಕ ಡಿ.ಜಿ.ಶಾಂತನಗೌಡ ಬಿಡುಗಡೆಗೊಳಿಸಿದರು.