- ದೇಶ-ವಿದೇಶಗಳಿಂದ 50ಕ್ಕೂ ಹೆಚ್ಚು ಕಾರ್ಮಿಕ ಪ್ರತಿನಿಧಿಗಳು ಭಾಗಿ: ಎಚ್.ಜಿ.ಉಮೇಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಎಐಟಿಯುಸಿ ಸಂಘಟನೆಯ 43ನೇ ರಾಷ್ಟ್ರೀಯ ಸಮ್ಮೇಳನವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ.22ರಿಂದ 26ರವರೆಗೆ ನಡೆಯಲಿದ್ದು, ದೇಶ-ವಿದೇಶಗಳ ಸಾವಿರಾರು ಕಾರ್ಮಿಕ ಮುಖಂಡರು, ಕಾರ್ಮಿಕ ಪ್ರತಿನಿಧಿಗಳ ಸಮಾಗಮ ಅಲ್ಲಿ ಆಗಲಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಹಕ್ಕುಗಳ ರಕ್ಷಣೆ ಹಾಗೂ ಭವಿಷ್ಯದ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸುವ ಬಗ್ಗೆ ಸಮಾವೇಶದಲ್ಲಿಚರ್ಚೆಯಾಗಲಿದ್ದು, 1983ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ 32ನೇ ಸಮಾವೇಶ ಉದ್ಘಾಟಿಸಿದ್ದು, 43 ವರ್ಷದ ನಂತರ ರಾಜ್ಯದಲ್ಲಿ ಸಮ್ಮೇಳನ ನಡೆಯುತ್ತಿರುವುದು ವಿಶೇಷ ಎಂದರು. ದೇಶದ ಕಾರ್ಮಿಕ ವರ್ಗದ ಹಕ್ಕುಗಳು, ಉದ್ಯೋಗ ಭದ್ರತೆ, ಸಾಮಾಜಿಕ ನ್ಯಾಯ, ಕಾರ್ಮಿಕರ ಜೀವನಮಟ್ಟದ ಸುಧಾರಣೆಗಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ವಿಚಾರವನ್ನು ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಗುತ್ತದೆ. ಸೈಪ್ರಸ್, ಪೋರ್ಚಗಲ್, ನೇಪಾಳ, ಬಾಂಗ್ಲಾ ದೇಶ, ಶ್ರೀಲಂಕಾ, ಪ್ಯಾಲೇಸ್ತೀನ್, ಇರಾನ್, ಬಹರೇನ್ ಸೇರಿದಂತೆ 15ಕ್ಕೂ ಹೆಚ್ಚು ದೇಶದಿಂದ50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಾರ್ಮಿಕರ ಪ್ರತಿನಿಧಗಳು ಭಾಗವಹಿಸುವರು. ನಮ್ಮ ಜಿಲ್ಲೆಯಿಂದ 1500 ಜನ ಕಾರ್ಮಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗವು ಎದುರಿಸುತ್ತರುವ ಗಂಭೀರ ಸಮಸ್ಯೆಗಳು, ಸವಾಲುಗಳಾದ ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ, ಆರೋಗ್ಯ ಮತ್ತು ಶಿಕ್ಷಣ ಸೇವೆಗಳ ಸ್ಥಿತಿಗತಿಗಳು ಸಮ್ಮೇಳನದ ಪ್ರಮುಖ ಚರ್ಚೆಯ ವಿಷಯಗಳಾಗಿವೆ. ಕಾರ್ಮಿಕರಿಗೆ ಅವೈಜ್ಞಾನಿಕ ಹಾಗೂ ಅಗತ್ಯಾದಾರಿಕ ಕನಿಷ್ಟ ವೇತನ ಜಾರಿ,ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ, ಗಿಗ್ ಕಾರ್ಮಿಕರ ಹಕ್ಕುಗಳ ರಕ್ಷಣೆ ಬಗ್ಗೆ ಸಮ್ಮೇಳನದಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೇ, ನ.20 ಮತ್ತು 21ರಂದು ಬೆಂಗಳೂರಿನಲ್ಲಿ ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟ(ಡಬ್ಲ್ಯುಎಫ್‌ಟಿಯು) ಏಷ್ಯಾ-ಫೆಸಿಪಿಕ್ ಸಮ್ಮೇಳನವು ನಡೆಯಲಿದೆ. ದೇಶ-ವಿದೇಶಗಳ ಸುಮಾರು 120 ಪ್ರತಿನಿಧಿಗಳು ಭಾಗವಹಿಸುವರು. ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಕಾರ್ಮಿಕ ಸಂಘಟನೆಯಾದಎಐಟಿಯುಸಿಯ 43ನೇ ಸಮ್ಮೇಳನವು ದೇಶದ ಕಾರ್ಮಿಕ ವರ್ಗದ ಹಕ್ಕುಗಳು, ಹಿತಾಸಕ್ತಿಗಳು, ನ್ಯಾಯಯುತ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ನಡೆಯುವ ಹೋರಾಟಗಳಿಗೆ ಹೊಸ ದಿಕ್ಕು ಮತ್ತು ಚೈತನ್ಯ ನೀಡುವ ಐತಿಹಾಸಿಕ ವೇದಿಕೆಯಾಗಲಿದೆ ಎಂದು ಆವರಗೆರೆ ಎಚ್.ಡಿ.ಉಮೇಶ ವಿಶ್ವಾಸ ವ್ಯಕ್ತಪಡಿಸಿದರು.ಸಂಘಟನೆ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿ.ಯಲ್ಲಪ್ಪ, ಲಕ್ಷ್ಮಣ, ಸುರೇಶ ಯರಗುಂಟೆ, ಶಿವಕುಮಾರ ಶೆಟ್ಟರ್, ಹಾಲೇಶ, ಕೆರೇನಹಳ್ಳಿ ರಾಜು, ಸುಜಾತ ಇತರರು ಇದ್ದರು. ............ಕ್ಯಾಪ್ಷನ20ಕೆಡಿವಿಜಿ2-ದಾವಣಗೆರೆಯಲ್ಲಿ ಶುಕ್ರವಾರ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.