ಅಖಂಡ ಭಾರತ ಸಂಕಲ್ಪ ದಿನ: ವಾಹನ ಜಾಥಾ

KannadaprabhaNewsNetwork | Published : Aug 13, 2024 12:54 AM

ಸಾರಾಂಶ

ಪೊನ್ನಂಪೇಟೆ ಕೊಡವ ಸಮಾಜದಿಂದ ಆರಂಭಗೊಂಡ ಜಾಥಾದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಪಾಲ್ಗೊಂಡವು. ಗೋಣಿಕೊಪ್ಪ ಬೈಪಾಸ್ ಮೂಲಕಗ ಆಗಮಿಸಿ ಉಮಾಮಹೇಶ್ವರಿ ದೇವಸ್ಥಾನ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸಾಗಿ ಬಂತು. ಹರಿಶ್ಚಂದ್ರಪುರದಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಾಥಾಕ್ಕೆ ತೆರೆ ಎಳೆಯಲಾಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಪೊನ್ನಂಪೇಟೆ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಈ ವೇಳೆ ಪೊನ್ನಂಪೇಟೆಯಿಂದ ಗೋಣಿಕೊಪ್ಪಕ್ಕೆ ನಡೆದ ವಾಹನ ಜಾಥಾದಲ್ಲಿ 400ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿತ್ತು.

ಪೊನ್ನಂಪೇಟೆ ಕೊಡವ ಸಮಾಜದಿಂದ ಆರಂಭಗೊಂಡ ಜಾಥಾದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಪಾಲ್ಗೊಂಡವು. ಗೋಣಿಕೊಪ್ಪ ಬೈಪಾಸ್ ಮೂಲಕಗ ಆಗಮಿಸಿ ಉಮಾಮಹೇಶ್ವರಿ ದೇವಸ್ಥಾನ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸಾಗಿ ಬಂತು. ನಂತರ ಹರಿಶ್ಚಂದ್ರಪುರದಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜಾಥಾಕ್ಕೆ ತೆರೆ ಎಳೆಯಲಾಯಿತು.ಜಾಥಾ ಹಿನ್ನೆಲೆ, ತಿತಿಮತಿ, ಹಾತೂರು, ಪಾಲಿಬೆಟ್ಟ, ಪೊನ್ನಂಪೇಟೆ ರಸ್ತೆಯಿಂದ ಬರುವ ವಾಹನಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದವು. ಪೊಲೀಸ್ ಇಲಾಖೆ ಪಟ್ಟಣದಲ್ಲಿ ವಾಹನ ದಟ್ಟಣೆಯಾಗದಂತೆ ಮುಂಜಾಗೃತ ಕ್ರಮಕೈಗೊಂಡಿತ್ತು.ಆರ್‌ಎಂಸಿ ಬಳಿಯಲ್ಲಿ ಜಾಥಾವನ್ನು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಕೆ.ಬೋಪಣ್ಣ, ಪ್ರಮುಖರಾದ ಗುಮ್ಮಟ್ಟಿರ ಕಿಲನ್ ಗಣಪತಿ, ಪಂದ್ಯಂಡ ಹರೀಶ್, ಅಮೃತ್ರಾಜ್ ಸೇರಿದಂತೆ ಇನ್ನಿತರ ಪ್ರಮುಖರು ಬರಮಾಡಿಕೊಂಡರು.

ಹಿಂದೂಗಳು ಜಾಗೃತವಾಗುವ ಕಾಲ ಸನ್ನಿಹಿತವಾಗಿದ್ದು, ಈ ನಿಟ್ಟಿನಲ್ಲಿ ಹಿಂದುಗಳು ಒಗ್ಗಟ್ಟನ್ನು ಕಾಪಾಡುವ ಮೂಲಕ ಈ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು. ಪರಕೀಯರ ದಾಳಿಯಿಂದ ಛಿದ್ರಗೊಂಡಿರುವ ಭಾರತ ನೆಲ ಒಂದಾಗಿ ಅಖಂಡ ಭಾರತ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಒಂದಾಗಬೇಕೆಂದು ವಿಎಚ್‌ಪಿ ನಿಕಟಪೂರ್ವ ಪ್ರಾಂತ ಗೋ ರಕ್ಷಕ ಪ್ರಮುಖ್ ಮುರುಳಿಕೃಷ್ಣ ಹಂಸತಡ್ಕ ಕರೆ ನೀಡಿದರು.

ನಿವೃತ್ತ ಬ್ಲಾಕ್ ಕ್ಯಾಟ್ ಕಮಾಂಡೊ ಕ್ಯಾಪ್ಟನ್ ಮಲ್ಲೇಂಗಡ ಎಂ. ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು.ಆರ್‌ಎಸ್‌ಎಸ್‌ ಸಂಘ ಚಾಲಕ್ ಚೆಕ್ಕೇರ ಮನು ಕಾವೇರಪ್ಪ, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಹ ಪ್ರಮುಖ್ ಅಲ್ಲುಮಾಡ ಶರತ್ ಪೆಮ್ಮಯ್ಯ, ತಾಲೂಕು ಸಂಯೋಜಕ್ ಸುಳ್ಳಿಮಾಡ ಪಿ. ಸಂಪತ್ ಇದ್ದರು. ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಹಿರಿಯರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

Share this article