ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಮಿನಿ ಪುರಭವನದಲ್ಲಿ ನಡೆದ ಐದು ದಿನಗಳ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಕರ್ನಾಟಕದ ಆಗಸ್ಟಿನ್ ಚಾಂಪ್ಯನ್ ಆಗಿದ್ದಾರೆ. ಶನಿವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ತಮಿಳ್ನಾಡಿನ ಬಾಲಸುಬ್ರಹ್ಮಣಿಯಂ ಅವರನ್ನು ಸೋಲಿಸಿ ಕೊಡಗು ಮೂಲದ ಆಗಸ್ಟಿನ್ ಟ್ರೋಫಿ ತನ್ನದಾಗಿಸಿದರು. ಮಹಾರಾಷ್ಟ್ರದ ಇಂದ್ರಜಿತ್ ಮಹೀಂದ್ರೇಕರ್ ಎದುರು ತೆಲಂಗಾಣದ ನಾಗಾ ಸಾಯಿ ಸಾರ್ಥಕ್ ಕರಣಂ ಸೋತರೆ, ತಮಿಳ್ನಾಡಿನ ಕೆ.ರಾಹುಲ್ ಅವರು ಕೇರಳದ ಸಾರ್ಷ ಬೇಕರ್‌ನ್ನು ಮಣಿಸಿದರು. ಸಮಾರೋಪದಲ್ಲಿ ಕೆನರಾ ಬ್ಯಾಂಕ್ ಡಿಜಿಎಂ ಶ್ರೀಕಾಂತ್ ಬಹುಮಾನ ವಿತರಿಸಿದರು. ಸಿಸಿಬಿ ಎಸಿಪಿ ಪಿ.ಎ. ಹೆಗಡೆ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಪ್ರಮುಖರಾದ ಬೆಟ್ಟ ಜಯರಾಮ ಭಟ್ ಸುಳ್ಯ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ಪ್ರಭಾಕರ ಶ್ರೇಯಾನ್, ವಿವಿ ಮಯ್ಯ, ನಾರಾಯಣನ್, ದ.ಕ. ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೋಟೆ, ಗೌರವಾಧ್ಯಕ್ಷ ಸುನಿಲ್ ಆಚಾರ್, ಪೂರ್ಣಿಮಾ ಎಸ್.ಆಳ್ವ, ವಾಣಿ ಸಿ.ಪಣಿಕ್ಕರ್, ರಮ್ಯ ಎಸ್.ರೈ, ಸತ್ಯಪ್ರಸಾದ್ ಮತ್ತಿತರರಿದ್ದರು.