ಗ್ರಾಮ ಸ್ವಚ್ಛತೆಗೆ ಅಕ್ಕ ಮಹಾದೇವಿ ಸಮಾಜ ಒತ್ತು: ಜಯಲಕ್ಷ್ಮೀ

KannadaprabhaNewsNetwork |  
Published : Nov 06, 2026, 02:00 AM IST
4ಕೆಡಿವಿಜಿ6-ಜಗಳೂರು ತಾ. ಪಲ್ಲಾಗಟ್ಟೆ ಗ್ರಾಮದಲ್ಲಿ ಅಕ್ಕ ಮಹಾದೇವಿ ಮಹಿಳಾ ಸಮಾಜದ ಸಭೆಯಲ್ಲಿ ಅಧ್ಯಕ್ಷೆ, ಜಿಪಂ ಮಾಜಿ ಅಧ್ಯಕ್ಷೆ ಕೆ.ಜಿ.ಜಯಲಕ್ಷ್ಮಿ, ಪಿಡಿಓ ಹನುಮಂತಪ್ಪ ಇತರರು. | Kannada Prabha

ಸಾರಾಂಶ

ಮಹಿಳಾ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ಸಮಾಜಮುಖಿ ಸೇವಾ ಕಾರ್ಯಗಳ ಸದುದ್ದೇಶದೊಂದಿಗೆ ಪಲ್ಲಾಗಟ್ಟೆ ಗ್ರಾಮದಲ್ಲಿ ನೂತನವಾಗಿ ಅಕ್ಕ ಮಹಾದೇವಿ ಮಹಿಳಾ ಸಮಾಜ ಸ್ಥಾಪಿಸಿ, ಕಾರ್ಯ ನಿರ್ವಹಿಸುದ್ದೇವೆ ಎಂದು ಸಮಾಜದ ಅಧ್ಯಕ್ಷೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಜಿ.ಜಯಲಕ್ಷ್ಮೀ ಮಹೇಶ ತಿಳಿಸಿದ್ದಾರೆ.

- ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ 2ನೇ ಮಾಸಿಕ ಸಭೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಿಳಾ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ಸಮಾಜಮುಖಿ ಸೇವಾ ಕಾರ್ಯಗಳ ಸದುದ್ದೇಶದೊಂದಿಗೆ ಪಲ್ಲಾಗಟ್ಟೆ ಗ್ರಾಮದಲ್ಲಿ ನೂತನವಾಗಿ ಅಕ್ಕ ಮಹಾದೇವಿ ಮಹಿಳಾ ಸಮಾಜ ಸ್ಥಾಪಿಸಿ, ಕಾರ್ಯ ನಿರ್ವಹಿಸುದ್ದೇವೆ ಎಂದು ಸಮಾಜದ ಅಧ್ಯಕ್ಷೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಜಿ.ಜಯಲಕ್ಷ್ಮೀ ಮಹೇಶ ತಿಳಿಸಿದರು.

ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂತನವಾಗಿ ಸ್ಥಾಪನೆಯಾದ ಅಕ್ಕ ಮಹಾದೇವಿ ಮಹಿಳಾ ಸಮಾಜದ 2ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಲ್ಲಾಗಟ್ಟೆ ಗ್ರಾಮದ ಯುವತಿಯರು, ಮಹಿಳೆಯರನ್ನು ಒಳಗೊಂಡಂತೆ ಅಕ್ಕ ಮಹಾದೇವಿ ಮಹಿಳಾ ಸಮಾಜವು ಕಾರ್ಯ ನಿರ್ವಹಿಸಲಿದೆ ಎಂದರು.

ಶೈಕ್ಷಣಿಕ ಮಹತ್ವ ಸಾರುವ, ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣ, ಸಮಾಜಮುಖಿ ಸೇವಾ ಕಾರ್ಯಗಳನ್ನು ಅಕ್ಕ ಮಹಾದೇವಿ ಮಹಿಳಾ ಸಮಾಜ ಮುಂದಿನಗಳಲ್ಲಿ ಕೈಗೊಳ್ಳಲಿದೆ. ಸರ್ಕಾರದಿಂದ ಮಹಿಳೆಯರಿಗೆ, ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಾಜವು ಗಮನಹರಿಸಲಿದೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ನಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಕೇರಿ, ಗ್ರಾಮವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಗ್ರಾಪಂ ಆಡಳಿತ ಜೊತೆಗೆ ಕೈ ಜೋಡಿಸುವ ಮೂಲಕ ಪಲ್ಲಾಗಟ್ಟೆ ಗ್ರಾಮವನ್ನು ಮಾದರಿ ಗ್ರಾಮವಾಗಿ ಮಾಡುವತ್ತಲೂ ಸಮಾಜ ಶ್ರಮಿಸಲಿದೆ ಎಂದು ಘೋಷಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಅಕ್ಕ ಮಹಾದೇವಿ ಮಹಿಳಾ ಮಹಿಳಾ ಸಮಾಜ ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವಚ್ಛತೆ, ಶಿಕ್ಷಣ, ಆರೋಗ್ಯದಂತಹ ಸದುದ್ದೇಶದೊಂದಿಗೆ ಸ್ಥಾಪನೆ ಆಗಿರುವುದು ಉತ್ತಮ ಬೆಳವಣಿಗೆ. ಗ್ರಾ.ಪಂ.ನಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಮಾಜದ ಗೌರವಾಧ್ಯಕ್ಷೆ ನಾಗರತ್ನಮ್ಮ ಗುರುಸಿದ್ದನಗೌಡ, ಉಪಾಧ್ಯಕ್ಷೆ ಟಿ.ಸಿ.ರುದ್ರಮ್ಮ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ನಾಗವೇಣಿ, ಕಾರ್ಯದರ್ಶಿ ಎಚ್.ಎಂ.ಅನಿತಾ, ಖಜಾಂಚಿ ಟಿ.ಎಸ್.ಕೌಶಲ್ಯ, ನಿರ್ದೇಶಕರಾದ ಎಸ್.ಎಂ.ನಾಗರತ್ನ, ಕೆ.ಅಂಜಿನಪ್ಪ, ಪತ್ರೆಮ್ಮ, ಎಂ.ಕೆ.ಮಂಜುಳ, ರಮೀಜ, ಡಿ.ಜೆ.ಸಾವಿತ್ರಿ, ಎಂ.ಬಿ.ಎಸ್.ಶೃತಿ, ಶಿವಮ್ಮ, ಟಿ.ಎನ್.ಕವಿತಾ ಇತರರು ಇದ್ದರು.

ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎಆರ್‌ಎಲ್‌ಎಂ)ನಡಿ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಸಂಜೀವಿನಿ ಜಿಪಿಎಲ್‌ಎಫ್‌ನಿಂದ ಪಲ್ಲಾಗಟ್ಟೆ ಗ್ರಾಮದ ಅಕ್ಕ ಮಹಾದೇವಿ ಸಮಾಜ ಉದ್ಘಾಟನಾ ಸಮಾರಂಭದಲ್ಲಿ ತಂಬಾಕುಮುಕ್ತ ಕರ್ನಾಟಕ ಅಭಿಯಾನದ ಕೈಗೊಳ್ಳಲಾಗಿತ್ತು. ಅಭಿಯಾನದಡಿ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

- - -

-4ಕೆಡಿವಿಜಿ6: ಜಗಳೂರು ತಾಲೂಕು ಪಲ್ಲಾಗಟ್ಟೆಯಲ್ಲಿ ಅಕ್ಕ ಮಹಾದೇವಿ ಮಹಿಳಾ ಸಮಾಜ ಸಭೆಯಲ್ಲಿ ಅಧ್ಯಕ್ಷೆ, ಜಿಪಂ ಮಾಜಿ ಅಧ್ಯಕ್ಷೆ ಕೆ.ಜಿ.ಜಯಲಕ್ಷ್ಮೀ, ಪಿಡಿಒ ಹನುಮಂತಪ್ಪ ಇತರರು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ