ಅಕ್ಕಮಹದೇವಿ ಅದರ್ಶ ನಮ್ಮೆಗೆಲ್ಲ ದಾರಿದೀಪ

KannadaprabhaNewsNetwork |  
Published : Mar 31, 2024, 02:01 AM IST
ಶರಣೆ ಅಕ್ಕಮಹದೇವಿ ಅದರ್ಶ ನಮ್ಮೆಗೆಲ್ಲ ದಾರಿದೀಪ  : ವಸಂತಮ್ಮ  | Kannada Prabha

ಸಾರಾಂಶ

ಮಹಿಳೆಯರು ಶರಣೆ ಅಕ್ಕಮಹದೇವಿ ಅದರ್ಶ, ಓನಕೆ ಓಬವ್ವ, ಕಿತ್ತೂರುರಾಣಿ ಚೆನ್ನಮ್ಮನಂತಹ ಶೌರ್ಯವನ್ನು ಮೆರೆಯುವ ಮೂಲಕ ಸ್ವಾವಲಂಬಿಗಳಾಗಿ ಅದರ್ಶವಾದ ಬದುಕು ರೂಪಿಸಿಕೊಳ್ಳಬೇಕೆಂದು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಹಿಳೆಯರು ಶರಣೆ ಅಕ್ಕಮಹದೇವಿ ಅದರ್ಶ, ಓನಕೆ ಓಬವ್ವ, ಕಿತ್ತೂರುರಾಣಿ ಚೆನ್ನಮ್ಮನಂತಹ ಶೌರ್ಯವನ್ನು ಮೆರೆಯುವ ಮೂಲಕ ಸ್ವಾವಲಂಬಿಗಳಾಗಿ ಅದರ್ಶವಾದ ಬದುಕು ರೂಪಿಸಿಕೊಳ್ಳಬೇಕೆಂದು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ ತಿಳಿಸಿದರು. ನಗರದಲ್ಲಿ ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್‌ನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ೧೨ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಬಸವಾದಿ ಶರಣರು ನೀಡುವ ಮೂಲಕ ಸಮಾನತೆಯನ್ನು ಸಾರಿದರು. ಅನುಭವ ಮಂಟಪದಲ್ಲಿ ಅಕ್ಕಮಹದೇವಿ, ಸೇರಿದಂತೆ ಅನೇಕ ಶರಣೆಯರು ಸ್ವರಚಿತ ವಚನಗಳನ್ನು ವಾಚನೆ ಮಾಡಿ, ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದ್ದರು. ಅಂಥ ಶರಣ ಬೀಡಿನಲ್ಲಿ ಮಹಿಳೆಯರು ಇನ್ನು ಹೆಚ್ಚಿನ ರೀತಿಯಲ್ಲಿ ಎಲ್ಲಾ ರಂಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳಬೇಕು ಎಂದರು. ಮಾ. ೮ ವಿಶ್ವ ಮಹಿಳಾ ದಿನಾಚರಣೆಯಾಗಿದ್ದು, ಅದ್ದೂರಿಯಾಗಿ ಮಹಿಳಾ ದಿನಾಚರಣೆಯನ್ನು ಕದಳಿ ವೇದಿಕೆಯನ್ನು ಆಯೋಜನೆ ಮಾಡುವ ತಯಾರಿಯಲ್ಲಿದ್ದೇವು. ಲೋಕಸಭಾ ಚುನಾವಣೆ ಘೋಷಣೆ, ನೀತಿ ಸಂಹಿತೆ ಕಾರಣ ಮಾ. ೩೦ ರಂದು ಸಂಕೇತವಾಗಿ ಕದಳಿ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕದಳಿ ಹಾಗೂ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ ಎಂದು ವಸಂತಮ್ಮ ತಿಳಿಸಿದರು. ವೇದಿಕೆಯ ಕಾರ್ಯದರ್ಶಿ ಅನ್ನಪೂರ್ಣಸ್ವಾಮಿ ಮಾತನಾಡಿ, ಮಹಿಳೆಯರು ಬೆಳವಣಿಗೆಯಲ್ಲಿ ಪುರುಷರ ಸಹಕಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಂಗದಲ್ಲಿಯು ಪುರುಷರ ಸಮಾನವಾಗಿ ನಾವು ಜೀವನ ರೂಪಿಸಿಕೊಳ್ಳಲು ಅವರ ಸಹಕಾರ ಇರುತ್ತದೆ. ತಂದೆ, ಅಣ್ಣ, ತಮ್ಮ, ಗಂಡ ಹಾಗೂ ಮಗನಾಗಿ, ಎಲ್ಲಾ ವಿಚಾರಗಳಲ್ಲಿಯೂ ಸ್ವಾಮತೆಯನ್ನು ಹೊಂದಿದರೆ ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಗೌರವ ದೊರೆಯಲಿದೆ ಎಂದರು. ಕದಳಿ ಮಹಿಳೆಯ ವೇದಿಕೆಯ ಉಪಾಧ್ಯಕ್ಷೆ ಸುಂದರಮ್ಮ, ಖಜಾಂಚಿ ಡಿ.ಕೆ. ರಾಜಮ್ಮ ಅವರು ಅಕ್ಕಮಹದೇವಿ ವಚನಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶಿವಮಣಿ, ಬೇಬಿ, ವಿಜಯಾಂಬ, ಕಮಲಮ್ಮ, ರಾಜಮ್ಮ, ಪಂಕಜ, ಲೋಹಿತಾ, ನೀತು, ಇಂದ್ರಮ್ಮ, ಸುನೀತಾ, ಪ್ರೀತಿ, ಸವಿತಾ, ಶಾರದ, ಕುಮಾರಿ, ಶೋಭಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ