ಕನ್ನಡಪ್ರಭ ವಾರ್ತೆ ಬೀರೂರು
ಪಟ್ಟಣದ ಅಕ್ಕಮಹಾದೇವಿ ಮಹಿಳಾ ಸಮಾಜದ ಆವರಣದಲ್ಲಿ ಆಯೋಜಿಸಿದ್ದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮ ದಲ್ಲಿ ಅಕ್ಕಮಹಾದೇವಿ ವಿಚಾರಧಾರೆ ಕುರಿತು ಮಾತನಾಡಿದರು.
ಸಾಮಾಜಿಕ ಅಸಮಾನತೆ ನಿವಾರಿಸಲು ವಚನಗಳ ಮೂಲಕ ದಿಟ್ಟ ಹೋರಾಟ ನಡೆಸಿದ ವಚನಗಾರ್ತಿ, ನಡೆ ನುಡಿಗಳಲ್ಲಿ ಒಂದಾಗಿ ಮೇಲು-ಕೀಳು, ಬಡವ ಬಲ್ಲಿದ ಎಂಬ ಅಸಮಾನತೆ ಅಳಿಸಿ, ದಾಸೋಹ ಮತ್ತು ಕಾಯಕದ ಮಹತ್ವವನ್ನು ನಾಡಿನಲ್ಲಿ ಪಸರಿಸಿದ ಕೀರ್ತಿ ಅಕ್ಕಮಹಾದೇವಿ ಅವರದು.ಸರಳ ಕನ್ನಡ ಸಾಹಿತ್ಯದ ಮೂಲಕ ವಿಚಾರಗಳ ಆಳವಾದ ಜ್ಞಾನ ಮತ್ತು ಅರಿವಿಗೆ ವಚನಗಳನ್ನು ಬಳಸಿ ಸತ್ಯ, ಶುದ್ಧ ಕಾಯಕ ಬದುಕನ್ನು ರೂಪಿಸಿಕೊಳ್ಳುವಲ್ಲಿ ವಚನಗಳು ಪ್ರೇರಕವಾಗಿವೆ ಎಂದರು.ಶಾಲಾ ಸಲಹ ಸಮಿತಿ ಅಧ್ಯಕ್ಷೆ ವಿಶಾಲ ಷಡಕ್ಷರಪ್ಪ ಮಾತನಾಡಿ, ನಮ್ಮೊಳಗಿನ ಅರಿವನ್ನು ಗುರುತಿಸುವ ಕಲೆ ನಮ್ಮೋಳಗೆ ಬಂದಾಗ ಬದುಕು ಮೌಲ್ಯಯುತವಾಗುತ್ತದೆ.ಮಹಿಳೆ ನಾಲ್ಕು ಗೋಡೆಗಳ ನಡುವಿನಿಂದ ಹೊರಬಂದು ತನ್ನ ಸಾಧನೆಗಳ ಮೂಲಕ ಸಬಲೆಯಾಗಿ ರೂಪಗೊಳ್ಳಲು ಪ್ರೇರಕವಾಘುವಂತೆ ಅಕ್ಕಮಹಾದೇವಿ ಮಹಿಳಾ ಸಮಾಜ ಕ್ರೀಯಾ ಶೀಲವಾದ ಕಾರ್ಯಗಳನ್ನು ಮಾಡುತ್ತಿದೆ.ಶಿಕ್ಷಣ ಸಾಹಿತ್ಯ ಸಂಸ್ಕೃತಿ ಸೇರಿ ಎಲ್ಲ ರಂಗ ಗಳ ಪ್ರಗತಿಗೆ ಕೈಜೋಡಿಸಿ ತನ್ನ ಕಾಳಜಿ ಪ್ರದರ್ಶಿಸಿದೆ ಎಂದರು.
ಅಕ್ಕಮಹಾದೇವಿ ಮಹಿಳ ಸಮಾಜದ ಅಧ್ಯಕ್ಷೆ ಶೈಲಜಾ ಸದಾಶಿವನ್, ಕಾರ್ಯದರ್ಶಿ ಉಷಾಸ್ವಾಮಿ, ನೀತುವಸಂತ್, ಆಶಾ ಶಶಿಧರ್, ಶರಣೆ ಎಂ.ವಿ.ನಾಗರತ್ನಮ್ಮ ಇದ್ದರು.