ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿವಿವಿ ಸಂಘದ ಅಕ್ಕನ ಬಳಗದ 87ನೇ ವಾರ್ಷಿಕೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ಮತ್ತು ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಬಿವಿವಿ ಸಂಘದ ಅಕ್ಕನ ಬಳಗ ಬಾಗಲಕೋಟೆಯಲ್ಲಿ 1938ರಲ್ಲಿಯೇ ಸ್ಥಾಪಿತವಾದ ಪ್ರಥಮ ಮಹಿಳಾ ಸಂಘಟನೆಯಾಗಿದೆ. ಇಂದು 87ನೇ ವಾರ್ಷಿಕೋತ್ಸವ ಆಚರಿಸುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿನ ಸಂಘಟಿತ ಕಾರ್ಯ, ಸಾವಿರಾರು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತಿದೆ. ಅಲ್ಲದೆ ಮಹಿಳೆಯರಿಗೆ ಸ್ವಯಂ ಉದ್ಯೋಕ್ಕಾಗಿ ಇಲ್ಲಿ ಟ್ರೈಲರಿಂಗ್ ತರಬೇತಿಗಳು ನಡೆಯುತ್ತಿವೆ ಎಂದರು.ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಶಿಶು ವಿಹಾರ ಸ್ಥಾಪಿಸಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದೆ. ಈಗ ಆಧುನಿಕತೆ ತಕ್ಕಂತೆ ಅಕ್ಕ ಶೈನಿಂಗ್ ಸ್ಟಾರ್ ಆಗಿ ಪರಿವರ್ತನೆಗೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಸದಾ ಮಹಿಳೆಯರ ಸಮಾನತೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದು ದೇಶದಲ್ಲಿ ಇದೊಂದು ಮಾದರಿ ಮಹಿಳಾ ಸಂಘಟನೆಯಾಗಿದೆ ಎಂದರು.
ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಭಾರತಿ ಸಾಲಿಮಠ ಅವರಿಗೆ ಮಹಾದೇವಿ ಅಕ್ಕ ಪ್ರಶಸ್ತಿ ಪ್ರದಾನಿಸಲಾಯಿತು.
ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿ, ಅಕ್ಕನ ಬಳಗ ಈ ಭಾಗದ ಮಹಿಳೆಯರಲ್ಲಿ ಶೈಕ್ಷಣಿಕ ಅರಿವು, ಮಹಿಳೆಯರಲ್ಲಿ ಸಮಾನತೆ, ಸ್ವಾವಲಂಬಿಯಾಗಿ ಬದುಕಲು ಅನೇಕ ತರಬೇತಿ ನೀಡಿ ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟಿದೆ. ಬಿವಿವಿ ಸಂಘದ ಅವಿಭಾಜ್ಯ ಅಂಗವಾಗಿರುವ ಅಕ್ಕನ ಬಳಗ ಸಂಘದ ಸಾಂಸ್ಕೃತಿಕ ಮಹಿಳಾ ಸಂಘಟನೆಯಾಗಿದೆ ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಹಾದೇವಿ ಅಕ್ಕ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಚರಂತಿಮಠ, ಅಕ್ಕನ ಬಳಗದ ಗೌರವಾಧ್ಯಕ್ಷರಾದ ಡಾ.ಅನಸೂಯಾ ಕೆರೂಡಿ, ಸವಿತಾ ಲಂಕೆನ್ನವರ, ರೇಖಾ ಕಲಬುರಗಿ, ವಿಜಯಲಕ್ಷ್ಮೀ ಭದ್ರಶೆಟ್ಟಿ, ಸೇರಿದಂತೆ ಬಳಗದ ಸದಸ್ಯರು ಸೇರಿ ಅನೇಕರು ಭಾಗವಹಿಸಿದ್ದರು.