ಅಪೂರ್ವ ಸ್ನೇಹ ಬಳಗ ಹಾಗೂ ಹಳೆಯ ವಿದ್ಯಾರ್ಥಿನಿ ರಮ್ಯಾ ಅವರು, ವಿದ್ಯಾರ್ಥಿಗಳಿಗೆ ಪುಸ್ತಕ, ಪೌಚ್, ಪೆನ್, ಪೆನ್ಸಿಲ್ ಗಳನ್ನು ಕೊಡುಗೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯನ್ನು ಹಸಿರು ತೋರಣದಲ್ಲಿ ಶಾಲೆಯನ್ನು ಸಿಂಗರಿಸಿಆರತಿ ಬೆಳಗಿ, ಪುಷ್ಪವೃಷ್ಟಿ, ಸಿಹಿ ವಿತರಿಸಿ ಮಕ್ಕಳಿಗೆ ಹೂಗುಚ್ಚ ನೀಡಿ ಸಂಭ್ರಮದಿಂದ ಸ್ವಾಗತಿಸಲಾಯಿತು.ಈ ವೇಳೆ ಅಪೂರ್ವ ಸ್ನೇಹ ಬಳಗ ಹಾಗೂ ಹಳೆಯ ವಿದ್ಯಾರ್ಥಿನಿ ರಮ್ಯಾ ಅವರು, ವಿದ್ಯಾರ್ಥಿಗಳಿಗೆ ಪುಸ್ತಕ, ಪೌಚ್, ಪೆನ್, ಪೆನ್ಸಿಲ್ ಗಳನ್ನು ಕೊಡುಗೆ ನೀಡಿದರು.ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಸುರೇಶ್, ನಜರ್ ಬಾದ್ ನಟರಾಜ್, ರವಿ ಶಾಸ್ತ್ರಿ, ಶಿಕ್ಷಕರಾದ ಶಿವಯ್ಯ, ಶಿಲ್ಪಾ, ನಾಗರತ್ನಾ, ಮಹಾದೇವ, ಮಮತಾಕುಮಾರಿ, ಎಸ್.ಎನ್. ರಾಜೇಶ್, ಶಿವಲಿಂಗಸ್ವಾಮಿ, ಜತ್ತಿ ಪ್ರಸಾದ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.