ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘಕ್ಕೆ ಅಕ್ಕಿವಳ್ಳಿ ಅಧ್ಯಕ್ಷ, ಪ್ರಕಾಶಗೌಡ ಉಪಾಧ್ಯಕ್ಷ

KannadaprabhaNewsNetwork |  
Published : Jun 23, 2026, 02:30 AM IST
ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರೊಂದಿಗೆ ಗಣ್ಯರು. | Kannada Prabha

ಸಾರಾಂಶ

ಹಾನಗಲ್ಲಿನ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿ.ಎಸ್. ಅಕ್ಕಿವಳ್ಳಿ, ಉಪಾಧ್ಯಕ್ಷರಾಗಿ ಪ್ರಕಾಶಗೌಡ ಪಾಟೀಲ ಅವಿರೋಧ ಆಯ್ಕೆಯಾದರು.

ಹಾನಗಲ್ಲ: ಹಾನಗಲ್ಲಿನ ಪ್ರತಿಷ್ಠಿತ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿ.ಎಸ್. ಅಕ್ಕಿವಳ್ಳಿ, ಉಪಾಧ್ಯಕ್ಷರಾಗಿ ಪ್ರಕಾಶಗೌಡ ಪಾಟೀಲ ಅವಿರೋಧ ಆಯ್ಕೆಯಾದರು.

ಸೋಮವಾರ ಹಾನಗಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತಲ್ಲದೇ, ಈ ಅವಧಿಯಲ್ಲಿ ಐಟಿಐ ಸೇರಿದಂತೆ ವಿವಿಧ ಉದ್ಯೋಗಾಧಾರಿತ ಕೋರ್ಸಗಳನ್ನು ಆರಂಭಿಸುವ ಭರವಸೆಯನ್ನು ನೂತನ ಆಡಳಿತ ಮಂಡಳಿ ಪ್ರಕಟಿಸಿತು.

ನೂತನ ನಿರ್ದೇಶಕರಾದ ನಾಗರಾಜ ಉದಾಸಿ, ರವಿಚಂದ್ರ ಪುರೋಹಿತ, ರವಿ ಮೂಡ್ಲಿಯವರ, ಸುರೇಶ ರಾಯ್ಕರ, ಮಾಲತೇಶ ಚಿಕ್ಕಣ್ಣನವರ, ರವಿರಾಜ ಕಲಾಲ, ಭೀಮನಗೌಡ ಕೂಕನಗೌಡ್ರ, ಮಂಜುನಾಥ ಚಿಕ್ಕಾವಲಿ, ಅಶೋಕ ಹಂಗರಗಿ, ಭಾಸ್ಕರ ಹುಲಮನಿ, ಮಂಜುಳಾ ಬೇದ್ರೆ, ರೇಖಾ ಶೆಟ್ಟರ ಈ ಸಂದರ್ಭದಲ್ಲಿದ್ದರು. ನಿರ್ದೇಶಕ ಯಲ್ಲಪ್ಪ ಶೇರಖಾನೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಭೆಗೆ ಅನುಪಸ್ಥಿತರಾಗಿದ್ದರು. ಚುನಾವಣಾಧಿಕಾರಿ ಎಚ್.ಜಿ.ಪ್ರಾಶಂತ ಹಾಗೂ ಸಹಾಯಕ ಚುನಾವಣಾಧಿಕಾರಿ ಸುಭಾಸ ಮಾದರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕಟಿಸಿದರು.

ಚುನಾವಣಾ ಸಂದರ್ಭದಲ್ಲಿ ವಿರೋಧಿ ತಂಡದಿಂದ ಆಯ್ಕೆಯಾದ ಏಕೈಕ ನಿರ್ದೇಶಕ ಮಂಜುನಾಥ ಚಿಕ್ಕಾವಲಿ, ಸಂಸ್ಥೆಯ ಹಿತಕ್ಕಾಗಿ ಯಾವುದೇ ರೀತಿಯ ಹೊರಾಟಕ್ಕೆ ನಾನು ಬದ್ಧ ಎಂದರು.

ಅಭಿನಂದನಾ ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಗಣ್ಯರಾದ ಮಹೇಶ ಕಮಡೊಳ್ಳಿ, ರಾಜಶೇಖರ ಕಟ್ಟೇಗೌಡರ, ಪದ್ಮನಾಭ ಕುಂದಾಪೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕಲ್ಯಾಣಕುಮಾರ ಶೆಟ್ಟರ, ಗಣೇಶಪ್ಪ ಕೋಡಿಹಳ್ಳಿ, ಸದಾನಂದ ಮೆಳ್ಳಳ್ಳಿ, ಮಹೇಶ ಬಣಕಾರ, ಎಸ್.ಜಿ.ಹಿರೇಮಠ, ಭೋಜರಾಜ ಕರೂದಿ, ವಿ.ಎಸ್.ಬಳ್ಳಾರಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾನ್ಕುಳಿಯಲ್ಲಿ ಗೋವು-ಮಣ್ಣು-ಅಡಕೆ ಮಾಹಿತಿ ಶಿಬಿರ
ನಾಡಬಾಂಬ್ ಸ್ಫೋಟ; ಅಕ್ಕಪಕ್ಕದ ಮನೆಗಳು ಛಿದ್ರ