ಗೋಕರ್ಣ: ಸಮಾಜ ನಮಗೆ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಬೇರೆಲ್ಲ ಋಣಕ್ಕಿಂತ ಸಮಾಜದ ಋಣ ತೀರಿಸುವುದು ಅಸಾಧ್ಯ ಎಂದು ಜಿ.ಸಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಆರ್.ಜಿ. ಗುಂದಿ ಹೇಳಿದರು.ಅಕ್ಷರ ಫೌಂಡೇಶನ್ ಬೆಂಗಳೂರು ಅಡಿಗೋಣ ಶಾಖೆ ಆಶ್ರಯದಲ್ಲಿ ನಾಡು ಮಾಸ್ಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಅರ್ಹತೆಗೆ ಅಕ್ಷರ ನಮನ ಪ್ರೇರಣಾ ಉಪನ್ಯಾಸ ಹಾಗೂ ಅಕ್ಷರ ರಶ್ಮಿ ಪ್ರಶಸ್ತಿ ಮತ್ತು ಅಕ್ಷರಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉಪನ್ಯಾಸಕರಾಗಿ ಪ್ರೌಢಶಾಲಾ ಹಂತದಲ್ಲಿ ಪೋಷಕರ ಪ್ರಭಾವಶಾಲಿ ಮಾರ್ಗದರ್ಶನ ವಿಷಯದ ಕುರಿತು ಮಾತನಾಡಿದರು.
ಭದ್ರಕಾಳಿ ಸಮೂಹ ಸಂಸ್ಥೆ ಕಾರ್ಯದರ್ಶಿ ಜಿ.ಎನ್. ನಾಯಕ ಮಾತನಾಡಿದರು. ನಾಡು ಮಾಸ್ಕೇರಿ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಪ್ರಿಯಾ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಕ್ಷರ ಫೌಂಡೇಶನ್ ಅಧ್ಯಕ್ಷ ಕೆ.ಎಚ್. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮಹೇಶ ನಾಯಕ, ನಿವೃತ್ತ ಆರೋಗ್ಯ ಅಧಿಕಾರಿ ಸಿ.ಟಿ. ನಾಯಕ ಇದ್ದರು.ಇದೇ ವೇಳೆ ಅಕ್ಷರ ಫೌಂಡೇಶನ್ ವತಿಯಿಂದ ಪತ್ರಕರ್ತರಾದ ಸುಭಾಷ ಕಾರೇಬೈಲ್, ಪತ್ರಕರ್ತ ವಿನಾಯಕ ಶಾಸ್ತ್ರಿ ಅವರಿಗೆ ಅಕ್ಷರ ಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.
ಫೌಂಡೇಶನ್ ಸದಸ್ಯೆ ವಿಜಯಲಕ್ಷ್ಮೀ ನಾಯಕ, ವೆಂಟು ಮಾಸ್ಟರ್ ಶಿಳ್ಯಾ, ರಮೇಶ ನಾಯಕ, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಜಗದೀಶ್ ನಾಯ್ಕ, ಪ್ರಮುಖರಾದ ರಾಜೇಶ್ ನಾಯಕ, ಶ್ರೀನಿವಾಸ್ ನಾಯಕ, ನಮಿತಾ ನಾಯಕ, ಗಣಪತಿ ನಾಯ್ಕ ಇದ್ದರು.
ಸಹಶಿಕ್ಷಕ ಶ್ರೀಧರ ನಾಯಕ ಸ್ವಾಗತಿಸಿದರು. ಪ್ರೇರಣಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಶ್ಯಾಮಲಾ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು. ನಿವೃತ್ತ ಶಿಕ್ಷಕ ಮಂಜುನಾಥ ಹಿತ್ತಲಮಕ್ಕಿ ವಂದಿಸಿದರು. ಬಿಎಡ್ ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.