ಓದುವ ಹವ್ಯಾಸ ಅಳವಡಿಸಿಕೊಳ್ಳಿ: ಸುನಿಲ್ ಕುಮಾರ್

KannadaprabhaNewsNetwork |  
Published : Oct 31, 2024, 12:56 AM IST
ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ  ಸಭಾಂಗಣದಲ್ಲಿ ನಡೆದ ಯುವ ಬರಹಗಾರರ ಸಮ್ಮೇಳನದ ಅಕ್ಷರಯಾನ ಕಾರ್ಯಕ್ರಮ | Kannada Prabha

ಸಾರಾಂಶ

ಬರಹಗಾರರ ಸಮ್ಮೇಳನದ ಮೂಲಕ ಯುವ ಬರಹಗಾರರು ಸಾಹಿತಿಗಳನ್ನು ಗುರುತಿಸುವ ಕಾರ್ಯವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಬರಹಗಾರರ ಸಮ್ಮೇಳನದ ಮೂಲಕ ಯುವ ಬರಹಗಾರರು ಸಾಹಿತಿಗಳನ್ನು ಗುರುತಿಸುವ ಕಾರ್ಯವಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ ಸುನಿಲ್ ಕುಮಾರ್ ಹೇಳಿದರು.

ಅವರು ವಿಕಾಸ ಸೇವಾ ಸಂಸ್ಥೆ ಕಾರ್ಕಳ, ಕ್ರಿಯೇಟಿವ್ ಪುಸ್ತಕ ಮನೆ ಸಹಯೋಗದೊಂದಿಗೆ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆದ ಯುವ ಬರಹಗಾರರ ಸಮ್ಮೇಳನದ ಅಕ್ಷರಯಾನ ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಮೊಬೈಲ್ ಗುಂಗಿನಲ್ಲಿ ಕಾಲಕಳೆಯುವ ಬದಲು ಓದುವ ಗೀಳನ್ನು ಆಳವಡಿಸಿಕೊಳ್ಳಿ, ಆಗಲೆ ನಮ್ಮೊಳಗಿನ ಸಾಹಿತ್ಯ ಪ್ರತಿಭೆಗಳು ಅರಳಲು ಸಾಧ್ಯ ಎಂದರು.

ರಂಗ ಕಲಾವಿದ ಎಸ್ ಎನ್ ಸೇತುರಾಂ ಮಾತನಾಡಿ, ಸಾಹಿತ್ಯ ದ ಮೂಲಕ ಯುವ ಮನಸ್ಸುಗಳು ಸತ್ಯವನ್ನು ತಿಳಿಯುವ ಕೆಲಸವಾಗಬೇಕು. ಸತ್ಯವನ್ನು ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾಲೇಜ್ ಸಂಸ್ಥಾಪಕ ಅಶ್ಚಥ್ ಎಸ್ ಎಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಮನೆ ಕಾರ್ಕಳ ತಾಲೂಕಿನಲ್ಲೆ 20000 ಕ್ಕೂ ಹೆಚ್ಚು ಪುಸ್ತಕ ಗಳು ಮಾರಾಟವಾಗಿವೆ. ಸಾಹಿತ್ಯ ಚಿಂತನೆಗಳು ಈಗಲೂ ಮುಂದುವರೆಸುತಿದ್ದಾರೆ ಎಂದರು.

ಸಭೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ನಟ ನಿರ್ದೇಶಕ ಪ್ರಕಾಶ್ ಬೆಳವಾಡಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕೊಂಡಳ್ಳಿ ಕಾಲೇಜು ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಡಾ. ಗಣನಾಥ ಶೆಟ್ಟಿ, ಅಮೃತ್ ರೈ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅನು ಬೆಳ್ಳೆ ಬರೆದ ಬ್ಲ್ಯಾಕ್ ಕಾಫಿ, ಮಹಿಮಾ ಮಹೇಶ್ ಶೆಣೈ ಬರೆದ ಬಚ್ಚಿಟ್ಟ ಭಾವಗಳು, ರಾಜೇಂದ್ರ ಭಟ್ ಅವರ ರಾಜಪಥ, ಅಶೋಕ್ ಕುಮಾರ್ ಅವರ ಸೂರ್ಯಯ ನಮಃ , ರವಿ ಶಂಕರ್ ಹೆಗ್ಡೆ ಯವರ ಶ್ರೀ ಭಾರತಸಾವಿತ್ರಿ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು. ‌

ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು.‌ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು