ಅಳದಂಗಡಿ ಸಿಎ ಬ್ಯಾಂಕ್ ಸಭೆ ಮಹಾಸಭೆ

KannadaprabhaNewsNetwork |  
Published : Sep 02, 2026, 04:00 AM IST
ಅಳದಂಗಡಿ ಸಿಎ ಬ್ಯಾಂಕ್ ಸಭೆ ಮಹಾಸಭೆ . | Kannada Prabha

ಸಾರಾಂಶ

1976ರಲ್ಲಿ ಆರಂಭಿಸಲ್ಪಟ್ಟ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇದೀಗ ಸುವರ್ಣ ಸಂಭ್ರಮ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಸಂಭ್ರಮದಲ್ಲಿ ಸದಸ್ಯರೆಲ್ಲರೂ ತನು-ಮನ-ಧನದ ಮೂಲಕ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ರಾಕೇಶ್ ಹೆಗ್ಡೆ ಮನವಿ ಮಾಡಿದರು.

ಬೆಳ್ತಂಗಡಿ : 1976ರಲ್ಲಿ ಆರಂಭಿಸಲ್ಪಟ್ಟ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಇದೀಗ ಸುವರ್ಣ ಸಂಭ್ರಮ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಸಂಭ್ರಮದಲ್ಲಿ ಸದಸ್ಯರೆಲ್ಲರೂ ತನು-ಮನ-ಧನದ ಮೂಲಕ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ರಾಕೇಶ್ ಹೆಗ್ಡೆ ಮನವಿ ಮಾಡಿದರು. ಅಳದಂಗಡಿ ನಮನ ಸಭಾಭವನದಲ್ಲಿ ನಡೆದ ಸಂಘದ 49ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಬಾರಿ ಡಿವಿಡೆಂಡ್‌ ಶೇ. 15ರಷ್ಟು ನೀಡಲಾಗುವುದು. ಇದರಲ್ಲಿ ಸದಸ್ಯರ ಒಪ್ಪಿಗೆಯ ಮೇರೆಗೆ ಶೇ. 2 ರಷ್ಟನ್ನು ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಮೀಸಲಾಗಿಡಲಾಗುವುದು. ಅದ್ದೂರಿಯಾಗಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಂಘವು ಸದಸ್ಯರ ಎಲ್ಲ ರೀತಿಯ ಏಳಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಆಡಳಿತವು ಕಾನೂನಿನ ಚೌಕಟ್ಟಿನೊಳಗೆ ಪಾರದರ್ಶಕತೆಯಿಂದ ನಡೆಯುತ್ತಿದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಸಂಘವು ಪ್ರಸ್ತುತ 7 ಗ್ರಾಮ ವ್ಯಾಪ್ತಿಯನ್ನು ಹೊಂದಿದ್ದು, 7,788 ಸದಸ್ಯರನ್ನು ಹೊಂದಿದೆ. ಸದರಿ ವರ್ಷದಲ್ಲಿ 517 ಕೋಟಿರು.ಗೂ ಹೆಚ್ಚು ವ್ಯವಹಾರ ದಾಖಲಿಸಿ 2 ಕೋಟಿ 12 ಲಕ್ಷ ರೂ. ಲಾಭಾಂಶವನ್ನು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ರೈತರ ಸಂಕಷ್ಟಕ್ಕೆ ಆಧಾರ ವಿಮೆಯನ್ನು ಈ ವರ್ಷದಿಂದ ಜಾರಿಗೊಳಿಸಲಾಗುತ್ತದೆ. 5,82,04,351 ರೂ. ಪಾಲು ಬಂಡವಾಳ ಹೊಂದಿದೆ. ಪಾಲು ಬಂಡವಾಳದಲ್ಲಿ 25,43, 896 ರು. ಹೆಚ್ಚಳವಾಗಿ ಶೇ. 4.57 ರಷ್ಟು ಪ್ರಗತಿ ಸಾಧಿಸಿದೆ. ವರದಿ ವರ್ಷಾಂತ್ಯಕ್ಕೆ 39,18,80,339 ರು. ಠೇವಣಿಯನ್ನು ಸಂಗ್ರಹಿಸಿದೆ. ಪ್ರಸಕ್ತ 89 ನವೋದಯ ಸ್ವ ಸಹಾಯ ಗುಂಪುಗಳು ಕಾರ್ಯಾಚರಿಸುತ್ತಿದ್ದು, ವರ್ಷಾಂತ್ಯಕ್ಕೆ ಒಟ್ಟು 30.55 ಲಕ್ಷ ರು. ಉಳಿತಾಯ ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೆ. 75ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘದ ಉಪಾಧ್ಯಕ್ಷ ಜನಾರ್ದನ, ನಿರ್ದೇಶಕರಾದ ಗುರುಪ್ರಸಾದ್, ಹೇಮಂತ್, ದೇವಿಪ್ರಸಾದ ಶೆಟ್ಟಿ, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ಕೊರಗಪ್ಪ, ಸುಂದರಿ, ಮಮತಾ, ಧರ್ಣಪ್ಪ, ಸುದರ್ಶನ್ ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸುದರ್ಶನ್ ಉಪಸ್ಯಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರಾ ವರದಿ ಮಂಡಿಸಿದರು. ನಿರ್ದೇಶಕ ವಿಶ್ವನಾಥ ಹೊಳ್ಳ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಿ: ರೈತರ ಆಗ್ರಹ
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಿ: ಕರಿಗಾರ