ಆಲಂಗ -ಶಿಬರ- ನಡುವಾಲ್ ರಸ್ತೆ ನಿರ್ಮಾಣ ಆಗ್ರಹ: ಶಾಸಕ ಪರಿಶೀಲನೆ

KannadaprabhaNewsNetwork |  
Published : Nov 26, 2025, 03:00 AM IST
ಫೋಟೋ: ೨೩ಪಿಟಿಆರ್-ಶಿಬರನರಿಮೊಗರು ಗ್ರಾಮದ ಆಲಂಗ -ಶಿಬರ- ನಡುವಾಲ್ ರಸ್ತೆ ನಿರ್ಮಾಣಕ್ಕಾಗಿ ಶಾಸಕರು ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ನರಿಮೊಗರು ಗ್ರಾಮದ ಆಲಂಗ-ಶಿಬರ- ನಡುವಾಲ್ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿರುವ ರಸ್ತೆ ಸಮಸ್ಯೆ ಇತ್ಯರ್ಥ ಪಡಿಸಿದ ಶಾಸಕ ಅಶೋಕ್ ಕುಮಾರ್ ರೈ ನೂತನ ರಸ್ತೆ ನಿರ್ಮಾಣದ ಬಗ್ಗೆ ಭಾನುವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಪುತ್ತೂರು: ನರಿಮೊಗರು ಗ್ರಾಮದ ಆಲಂಗ-ಶಿಬರ- ನಡುವಾಲ್ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿರುವ ರಸ್ತೆ ಸಮಸ್ಯೆ ಇತ್ಯರ್ಥ ಪಡಿಸಿದ ಶಾಸಕ ಅಶೋಕ್ ಕುಮಾರ್ ರೈ ನೂತನ ರಸ್ತೆ ನಿರ್ಮಾಣದ ಬಗ್ಗೆ ಭಾನುವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಅಶೋಕ್ ರೈ ಈ ಭಾಗದಲ್ಲಿ ೨೫ ಮನೆಗಳಿದ್ದು ಮನೆಗೆ ತೆರಳಲು ರಸ್ತೆ ಇಲ್ಲದ ಕಾರಣ ರಸ್ತೆ ಸಮಸ್ಯೆ ಬಗ್ಗೆ ಮಾತನಾಡಲು ಈ ಭಾಗದ ಕಾಂಗ್ರೆಸ್ ವಲಯಾಧ್ಯಕ್ಷ ಹೊನ್ನಪ್ಪ ಕೈಂದಾಡಿ, ಬಾಬು ಶೆಟ್ಟಿ ಸಹಿತ ಕೆಲವರು ಬಂದಿದ್ದರು. ರಸ್ತೆ ನಿರ್ಮಾಣ ಆಗಬೇಕಾದರೆ ಜಾಗದ ಪ್ರಮುಖರಾದ ಬಾಲಚಂದ್ರ ಮತ್ತು ಕಿಶೋರ್ ಅವರನ್ನು ಕರೆಸಿ ಮಾತುಕತೆ ಮಾಡಲಾಗಿತ್ತು. ಅವರು ಬಹಳ ಪ್ರೀತಿಯಿಂದ ಜಾಗ ಬಿಟ್ಟು ಕೊಡಲು ಸಿದ್ದರಾಗಿದ್ದಾರೆ. ರಸ್ತೆ ಅಭಿವೃದ್ಧಿಗೆ ರು.೫ ಲಕ್ಷ ಅನುದಾನ ಘೋಷಣೆ ಮಾಡಿದರು.ರಸ್ತೆಗೆ ಜಾಗ ಬಿಟ್ಟಿದ್ದೇವೆ: ಕಿಶೋರ್

ಶಾಸಕ ಅಶೋಕ್ ರೈ ಮತ್ತು ಈ ಭಾಗದ ಜನರು ರಸ್ತೆ ಸಮಸ್ಯೆ ಬಗ್ಗೆ ಕೇಳಿಕೊಂಡಾಗ ನಾವು ನಮ್ಮ ವರ್ಗ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿದ್ದೇವೆ. ಇನ್ನು ಶಿಬರ ಭಾಗದ ಜನರಿಗೆ ರಸ್ತೆ ಸಮಸ್ಯೆಯ ಇರುವುದಿಲ್ಲ. ಈ ರಸ್ತೆಯನ್ನು ಅಭಿವೃದ್ದಿ ಮಾಡುವುದಾಗಿಯೂ ಶಾಸಕರು ಹೇಳಿದ್ದು ಈಗಾಗಲೇ ೫ ಲಕ್ಷ ಅನುದಾನ ನೀಡಿದ್ದಾರೆ ಎಂದು ಜಾಗದ ಮಾಲಿಕ ಕಿಶೋರ್ ತಿಳಿಸಿದ್ದಾರೆ.ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿದರು.

ಪಕ್ಷದ ಮುಖಂಡರಾದ ಬಾಬು ಶೆಟ್ಟಿ ನರಿಮೊಗರು, ಕಾಂಗ್ರೆಸ್ ವಕ್ತಾರ ರವೀಂದ್ರ ರೈ ನೆಕ್ಕಿಲು, ರಾಘವೇಂದ್ರ ಪ್ರಭು, ಚೆನ್ನಪ್ಪ ಗೌಡ, ಮಂಜುನಾಥ ಶೇಖ, ವಲಯ ಮಹಿಳಾ ಘಠಕದ ಅಧ್ಯಕ್ಷೆ ಹರಿಣಾಕ್ಷಿ ಮತ್ತಿತತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ