ಕುಡಿತ ಚಟ ಬಿಡಿಸಲು ಧರ್ಮಸ್ಥಳ ಸಂಸ್ಥೆಯಿಂದ ಮದ್ಯವರ್ಜನ ಶಿಬಿರ: ಜಿಲ್ಲಾ ನಿರ್ದೇಶಕ ಮುರಳೀಧರ್

KannadaprabhaNewsNetwork |  
Published : Sep 16, 2024, 01:48 AM IST
15ಕೆಎಂಎನ್ ಡಿ17 | Kannada Prabha

ಸಾರಾಂಶ

ಈ ಸಾಲಿನಲ್ಲೂ ಸಹ ಪ್ರತಿ ತಾಲೂಕಿನಲ್ಲೂ ಕನಿಷ್ಠ 3 ಮದ್ಯವರ್ಜನ ಶಿಬಿರಗಳನ್ನು ನಡೆಸಿ ಶಿಬಿರದ ಮೂಲಕ ಕನಿಷ್ಠ 150 ಮಂದಿ ಜನರನ್ನು ವ್ಯಸನ ಮುಕ್ತ ಮಾಡುವ ಕೆಲಸವನ್ನು ಮಾಡಬೇಕು. ಪ್ರತಿ ತಾಲೂಕಿನಲ್ಲೂ ಕನಿಷ್ಠ 15 ಸ್ವಾಸ್ತ್ಯ ಸಂಕಲ್ಪ ಕಾರ್‍ಯಕ್ರಮಗಳನ್ನು ನಡೆಸಬೇಕು, ಸ್ವಾಸ್ತ್ಯ ಸಂಕಲ್ಪ ಕಾರ್‍ಯಕ್ರಮಗಳಿಗೆ ಆ ಭಾಗದ ಜನಜಾಗೃತಿ ಸಮಿತಿ ಸದಸ್ಯರನ್ನು ಬಳಸಿಕೊಳ್ಳಬೇಕು, ಜತೆಗೆ ನವಜೀವನೋತ್ಸವ ಕಾರ್‍ಯಕ್ರಮಗಳನ್ನು ಸಹ ನಡೆಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮದ್ಯವರ್ಜನ ಶಿಬಿರಗಳ ಮೂಲಕ ಕುಡಿತ ಚಟ ಬಿಡಿಸಲು ಶ್ರಮಿಸುತ್ತಿದೆ ಎಂದು ಸಂಸ್ಥೆ ಜಿಲ್ಲಾ ನಿರ್ದೇಶಕ ಮುರಳೀಧರ್ ತಿಳಿಸಿದರು.

ಪಟ್ಟಣದ ಹಾರೋಹಳ್ಳಿ ಶ್ರೀಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಕೆ.ಆರ್.ನಗರ ಜಿಲ್ಲಾಮಟ್ಟದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.

ಕಳೆದ ಸಾಲಿನಲ್ಲಿ ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಜಾಗೃತಿ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರೇ ಭಾಗವಹಿಸಿ ಸಂಸ್ಥೆ ವತಿಯಿಂದ ತಂಬಾಕು ವಿರೋಧಿ, ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಡೆಸುವಂತೆ ಸೂಚಿಸಿದ್ದರು ಎಂದರು.

ಶಾಲೆಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್‍ಯಕ್ರಮ, ಮಧ್ಯವರ್ಜನ ಶಿಬಿರಗಳು, ಸ್ವ ಉದ್ಯೋಗ ತರಬೇತಿ ಶಿಬಿರಗಳ ನಡೆಯುವ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ಎಲ್ಲಾ ಯೋಜನಾಧಿಕಾರಿಗಳ ಕಚೇರಿ ವತಿಯಿಂದ ಯಶಸ್ಸು ಸಾಧಿಸಲಾಗಿದೆ ಎಂದರು.

ಈ ಸಾಲಿನಲ್ಲೂ ಸಹ ಪ್ರತಿ ತಾಲೂಕಿನಲ್ಲೂ ಕನಿಷ್ಠ 3 ಮದ್ಯವರ್ಜನ ಶಿಬಿರಗಳನ್ನು ನಡೆಸಿ ಶಿಬಿರದ ಮೂಲಕ ಕನಿಷ್ಠ 150 ಮಂದಿ ಜನರನ್ನು ವ್ಯಸನ ಮುಕ್ತ ಮಾಡುವ ಕೆಲಸವನ್ನು ಮಾಡಬೇಕು. ಪ್ರತಿ ತಾಲೂಕಿನಲ್ಲೂ ಕನಿಷ್ಠ 15 ಸ್ವಾಸ್ತ್ಯ ಸಂಕಲ್ಪ ಕಾರ್‍ಯಕ್ರಮಗಳನ್ನು ನಡೆಸಬೇಕು, ಸ್ವಾಸ್ತ್ಯ ಸಂಕಲ್ಪ ಕಾರ್‍ಯಕ್ರಮಗಳಿಗೆ ಆ ಭಾಗದ ಜನಜಾಗೃತಿ ಸಮಿತಿ ಸದಸ್ಯರನ್ನು ಬಳಸಿಕೊಳ್ಳಬೇಕು, ಜತೆಗೆ ನವಜೀವನೋತ್ಸವ ಕಾರ್‍ಯಕ್ರಮಗಳನ್ನು ಸಹ ನಡೆಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜನಜಾಗೃತಿ ಸಮಿತಿ ಅಧ್ಯಕ್ಷ ಅರದನಹಳ್ಳಿ ಸೋಮಶೇಖರ್, ಉಪಾಧ್ಯಕ್ಷ ಅಶ್ವಥ್‌ ಕುಮಾರೇಗೌಡ, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಜನಜಾಗೃತಿ ಸಮಿತಿ ಸದಸ್ಯರಾದ ಹಳೇಬೀಡು ಗ್ರಾಪಂ ಅಧ್ಯಕ್ಷ ಧನಂಜಯ್, ಬನ್ನಂಗಾಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ್, ಜಿಪಂ ಮಾಜಿ ಸದಸ್ಯೆ ಶಾಂತಲ ರಾಮಕೃಷ್ಣೇಗೌಡ, ಸಿ.ಡಿ.ಮಹದೇವು, ಕೋ.ಪು.ಗುಣಶೇಖರ್ ಸೇರಿ ವಿವಿಧ ತಾಲೂಕಿನ ಜನಜಾಗೃತಿ ಸಮಿತಿ ಸದಸ್ಯರು, ಯೋಜನಾಧಿಕಾರಿ ಯಶವಂತ್ ಸೇರಿ ವಿವಿಧ ತಾಲೂಕಿನ ಯೋಜನಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ