ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಮಾನಸ ಕಾಲೇಜಿನಲ್ಲಿ ನಡೆದ ಗರುವಂದನೆ, ಸಾಧಕರಿಗೆ ಸನ್ಮಾನ ಹಿನ್ನೆಲೆ ಹಮ್ಮಿಕೊಂಡ ಮಾನಸೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಬರೀ ಶಿಕ್ಷಣ ಮಾತ್ರವಲ್ಲ ಸಾಂಸ್ಕೃತಿಕವಾಗಿಯು ವಿದ್ಯಾರ್ಥಿಗಳನ್ನು ತೊಡಗಿಸಬೇಕು. ಬದುಕಿನಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣದಿಂದ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯ. ಶಿಕ್ಷಣದ ಮೂಲ ಉದ್ದೇಶ ಉತ್ತಮ ನಾಗರಿಕರಾಗಬೇಕೆಂಬುದು ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ ಎಂದು ತಿಳಿಸಿದರು.
ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಪರಿಮಳ ನಾಗಪ್ಪ, ಕೊಳ್ಳೇಗಾಲದಲ್ಲಿ ನಡೆಯುವ ಮಾನಸೋತ್ಸವ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಶಿಕ್ಷಣ ಸಂಸ್ಥೆಯ ಶಿಸ್ತಿನಂತೆಯೇ ವಿದ್ಯಾರ್ಥಿಗಳ ಶಿಸ್ತು ಇದೆ. ಈ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಡಾ.ಎಸ್ ದತ್ತೇಶ್ ಕುಮಾರ್ ಮತ್ತು ನಾಗರಾಜು ಪರಿಶ್ರಮ ಅಗಾಧವಾಗಿದೆ ತಮ್ಮ ಸ್ವಂತ ಮಕ್ಕಳಂತೆ ವಿದ್ಯಾರ್ಥಿಗಳನ್ನು ಬೆಳೆಸುತ್ತಿದ್ದಾರೆ ಎಂದರು .ಮೈಸೂರಿನ ಅಖಿಲ ಭಾರತದ ಮಿಲಿ ಕೌನ್ಸಿಲ್‌ನ ಹಜರತ್ ಮೌಲಾನ ಜಕಾವುಲ್ಲ ಮಾತನಾಡಿ, ವಿದ್ಯಾರ್ಥಿಗಳು ದೇಶಕ್ಕಾಗಿ ಸೇವೆ ಸಲ್ಲಿಸಬೇಕು. ಗುರುಗಳನ್ನು ವಂದಿಸುವ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಮಾನಸೋತ್ಸವ ಕಾರ್ಯಕ್ರಮ ವಿಶಿಷ್ಟವಾದುದು. ಇಂತಹ ಉದಾರತೆಯನ್ನು ಹೊಂದಿರುವ ಈ ಸಂಸ್ಥೆ ಯಶಸ್ವಿಯಾಗಿ ಮುಂದೆ ಸಾಗಲಿ ಎಂದು ಆಶೀರ್ವದಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮಾಹಿತಿ ಹಕ್ಕು ಆಯುಕ್ತ ರಾಮನ್ ಕೆ., ಮಾನಸೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರುವುದು ನನಗೆ ಬಹಳ ಸಂತೋಷವಾಗಿದೆ. ಮಾಹಿತಿ ಹಕ್ಕು ಕಾಯಿದೆ ಇದೆ ಎಂಬುದು ನಿಮ್ಮ ಅರಿವಿಗೆ ಬರಬೇಕು. ಮೂಲಭೂತ ಕೌಶಲ್ಯಗಳ ಕೊರತೆ ಆಗುತ್ತದೆ. ನಾವು ಎಲ್ಲಿಯವರಗೆ ನ್ಯಾಯಯುತವಾಗಿ ಪ್ರಶ್ನೆ ಮಾಡುವುದಿಲ್ಲವೋ ಅಲ್ಲಿಯ ತನಕ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಮಾನಸ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಉಪನ್ಯಾಸಕರಾದ ಶ್ರೀಕಂಠಪ್ಪ, ದಾಕ್ಷಾಯಿಣಿ, ಶಾಂತಕುಮಾರಿ, ಪ್ರಸಾದ್ ಸ್ವಾಮಿ, ಮೊಹಮ್ಮದ್ ಅಂಜುoಪಾಷ, ಕುಮಾರಸ್ವಾಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಮ್ಮ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರದೀಪ್ ಕುಮಾರ್, ಅರುಳಮೇರಿ, ಮಹದೇವ, ಸ್ಟೀವನ್, ಶಂಕರ ಕೃಷ್ಣನ್, ವಿನೋದ್ ಕುಮಾರ್, ಸುಧಾಕರ್, ಜಯಮ್ಮ, ಸೇವೆ ಸಲ್ಲಿಸಿ ಮಾನಸ ಶಿಕ್ಷಣ ಸಂಸ್ಥೆಯಿಂದ ನಿರ್ಗಮಿಸಿರುವ ಹಿರಿಯ ಉಪನ್ಯಾಸಕ ದೊರೆಸ್ವಾಮಿ, ಸಹಾಯಕ ಮುಖ್ಯ ಶಿಕ್ಷಕಿ ಗಿರಿಜಾ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.