- ವಿರೋಧಕ್ಕೆ ಮಣಿದ ಹಿಂದುಳಿದ ವರ್ಗ ಆಯೋಗ । ಗಣತಿ ತೊಡಕು ನಿವಾರಣೆ- ಎಸ್ಸಿ, ಎಸ್ಟಿ ಜತೆ ತಳಕು ಹಾಕಿಕೊಂಡಿದ್ದ 14 ಕ್ರೈಸ್ತ-ಹಿಂದು ಜಾತಿ ಗಣತಿಯಲ್ಲಿಲ್ಲ
---14 ಜಾತಿ ಯಾವುವು?
ಮಾದಿಗ ಕ್ರಿಶ್ಚಿಯನ್, ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲಾ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ವಡ್ಡ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್.==
ಜಾತಿಗಣತೀಲಿ ಭಾಗಿಆಗುವುದು ಕಡ್ಡಾಯ
ಅಲ್ಲ: ರಾಜ್ಯ ಸರ್ಕಾರ!ಗಣತಿಗೆ ತಡೆಯೋ? ನಿಶಾನೆಯೋ?
ಇಂದು ಹೈಕೋರ್ಟಲ್ಲಿ ವಿಚಾರಣೆಬೆಂಗಳೂರು: ಕಲ್ಯಾಣ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನ ಸದುದ್ದೇಶದಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯಲ್ಲಿ ಜನರ ಭಾಗಿ ಸ್ವಯಂಪ್ರೇರಿತ. ಮಾಹಿತಿ ನೀಡಲು ಜನ ನಿರಾಕರಿಸಬಹುದು ಎಂದು ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗ ಹೈಕೋರ್ಟ್‌ಗೆ ಸ್ಪಷ್ಟಪಡಿಸಿವೆ. ಸಮೀಕ್ಷೆಗೆ ತಡೆ ಕೋರಿದ್ದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಚಾರಣೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ.==
2 ದಿನಕ್ಕೆ ಕೇವಲ 89491ಜನರ ಮಾಹಿತಿ ಸಂಗ್ರಹ- ಮುಂದುವರೆದ ಸಮಸ್ಯೆ, ಗೊಂದಲಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ಗೊಂದಲ ಮುಂದುವರೆದಿದ್ದು, ಎರಡನೇ ದಿನವಾದ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಕುಟುಂಬಗಳ 71,004 ಮಂದಿಯ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಆದರೆ ಮೊದಲ ದಿನಕ್ಕೆ ಹೋಲಿಸಿದರೆ 2ನೇ ದಿನ ಮಾಹಿತಿ ಸಂಗ್ರಹ ಏರಿಕೆಯಾಗಿದೆ. 2 ದಿನದಲ್ಲಿ 40 ಲಕ್ಷ ಜನರ ಮಾಹಿತಿ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿತ್ತು.==ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಕ್ರಿಶ್ಚಿಯನ್ ಜಾತಿಗಳು ಎಂದು ಪಟ್ಟಿ ಮಾಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 14 ಜಾತಿಗಳ ಹೆಸರನ್ನೂ ಸಮೀಕ್ಷಾ ಪಟ್ಟಿ ಹಾಗೂ ಆ್ಯಪ್‌ನ ಡ್ರಾಪ್‌ಡೌನ್‌ನಿಂದ ಕೈಬಿಟ್ಟಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ.ಕ್ರಿಶ್ಚಿಯನ್ ಜತೆಗೆ ತಳಕು ಹಾಕಿರುವ 14 ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಕೈಬಿಡುವಂತೆ ಬಿಜೆಪಿ ನಿಯೋಗ ಮಂಗಳವಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಆಯೋಗವು, ಈ ಮೊದಲೇ ಪಟ್ಟಿಯಿಂದ 14 ಜಾತಿಗಳನ್ನು ಕೈಬಿಟ್ಟಿದ್ದೆವು. ಆಕ್ಷೇಪ, ಗೊಂದಲದ ಹಿನ್ನೆಲೆಯಲ್ಲಿ ಮಂಗಳವಾರ ಆಯೋಗದ ಸಭೆ ನಡೆಸಿ ಮತ್ತೆ ಸುದೀರ್ಘವಾಗಿ ಪರಿಶೀಲಿಸಲಾಯಿತು. ಈ ವೇಳೆ 14 ಜಾತಿ ಕೈಬಿಟ್ಟಿದ್ದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು ಆಯೋಗವು ಜನರ ಆತಂಕ ಹಾಗೂ ಹಬ್ಬಿದ ತಪ್ಪು ಸಂದೇಶಗಳನ್ನು ಪರಿಗಣಿಸಿ ಸಮೀಕ್ಷಕರು ಬಳಸುವ ಡ್ರಾಪ್‌ಡೌನ್ ಆಯ್ಕೆ ವ್ಯವಸ್ಥೆಯಲ್ಲಿ 33 ಕ್ರಿಶ್ಚಿಯನ್ ಹಿಂದೂ ಜಾತಿಗಳ ಹೆಸರನ್ನು ನಿಷ್ಕ್ರಿಯಗೊಳಿಸಿತ್ತು. ಇದೀಗ ಮತ್ತೆ 14 ಜಾತಿಗಳನ್ನು ಕೈಬಿಟ್ಟಿರುವುದಾಗಿ ಹೇಳಿದೆ.ನಿನ್ನೆ ಸುದೀರ್ಘ ಸಭೆ:
ಸಮೀಕ್ಷಾ ಕೈಪಿಡಿಯ ಪುಟಸಂಖ್ಯೆ 57ರಿಂದ 89 ರವರೆಗಿನ 1,561 ಜಾತಿಗಳ ಪಟ್ಟಿಯಲ್ಲಿ ಹಾಗೂ ಇಡಿಸಿಎಸ್ ಸಂಸ್ಥೆ ಸಿದ್ಧಪಡಿಸಿರುವ ಸಮೀಕ್ಷಾ ಆ್ಯಪ್‌ನಲ್ಲಿ ಅಳವಡಿಸಿರುವ ಜಾತಿಪಟ್ಟಿಯ ಡ್ರಾಪ್‌ಡೌನ್ ಎರಡೂ ಕಡೆ ಮಾದಿಗ ಕ್ರಿಶ್ಚಿಯನ್, ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್ ಸೇರಿ 14 ಜಾತಿಗಳನ್ನು ಕೈಬಿಡಲಾಗಿತ್ತು. ಇಂದು ಅದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಿಜೆಪಿ ನಿಯೋಗದ ಆಗ್ರಹ:
ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಮಂಗಳವಾರ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಕ್ರಿಶ್ಚಿಯನ್‌ಗೆ ಮತಾಂತರಗೊಂಡ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 14 ಜಾತಿಗಳ ಹೆಸರನ್ನು ಜಾತಿಗಳ ಪಟ್ಟಿಯಿಂದ ಕೈಬಿಡುವಂತೆ ಮನವಿ ಮಾಡಿದ್ದರು.