ಹಿಂದೂಗಳೆಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಿ

KannadaprabhaNewsNetwork |  
Published : Dec 28, 2025, 02:45 AM IST
ಹನುಮ ಜಯಂತೋತ್ಸವ -ಭವ್ಯ ಮೆರವಣಿಗೆ | Kannada Prabha

ಸಾರಾಂಶ

ಹನುಮ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ಶನಿವಾರ ೪ನೇ ವರ್ಷದ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ವಿಗ್ರಹಗಳ ವಿಜೃಂಭಣೆಯ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಹನುಮ ಜಯಂತ್ಯುತ್ಸವ ಅಂಗವಾಗಿ ನಗರದಲ್ಲಿ ಶನಿವಾರ ೪ನೇ ವರ್ಷದ ಶ್ರೀರಾಮ ಹಾಗೂ ಆಂಜನೇಯಸ್ವಾಮಿ ವಿಗ್ರಹಗಳ ವಿಜೃಂಭಣೆಯ ಮೆರವಣಿಗೆ ನಡೆಯಿತು.

ನಗರದ ಮಾರಿಗುಡಿ ಮುಂಭಾಗದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಆಂಜನೇಯ ಮೂರ್ತಿಗೆ ಮಹಾಮಂಗಳಾರತಿ, ಪುಷ್ಪಾರ್ಚನೆ ಮಾಡಿದರು. ಮೆರವಣಿಗೆ ನಗರದ ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿವೃತ್ತ. ಗುಂಡ್ಲುಪೇಟೆ ವೃತ್ತ. ದೊಡ್ಡಂಗಡಿಬೀದಿಯ ಮೂಲಕ ಸಾಗಿದ ಮೆರವಣಿಗೆ ಮಾರಿಗುಡಿ ಮುಂಭಾಗಕ್ಕೆ ತಲುಪಿತು.

ಮೆರಬವಣಿಗೆಯಲ್ಲಿ ವೀರಗಾಸೆ. ನಾಸಿಕ್ ಡೋಲು, ಮಂಗಳವಾದ್ಯ. ಗೊರವರಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ನಂದಿಧ್ವಜ, ಅಲಂಕೃತ ಎತ್ತುಗಳು ಪಾಲ್ಗೊಂಡಿದ್ದವು. ನಗರದ ಪ್ರಮುಖಬೀದಿಗಳಲ್ಲಿ ಹನುಮಜಯಂತೋತ್ಸವದ ಅಂಗವಾಗಿ ಆಂಜನೇಯ ಭಾವಚಿತ್ರದ ಪ್ಲೆಕ್ಸ್ ಬಂಟಿಂಗ್ ರಾರಾಜಿಸಿದವು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಪಂಚದ ೧೦೬ ದೇಶಗಳಲ್ಲಿ ಕ್ರೈಸ್ತರು, ೫೭ ದೇಶದಲ್ಕಿ ಮುಸ್ಲಿಂ ಧರ್ಮವಿದ್ದು. ಭಾರತ ಮಾತ್ರ ಅತಿಹೆಚ್ಚು ಹಿಂದೂಗಳನ್ನು ಹೊಂದಿದೆ. ಆ ಜಾತಿ, ಈ ಜಾತಿ ಎಂಬುದನ್ನು ಬಿಟ್ಟು, ನಾವೆಲ್ಲ ಹಿಂದೂ ಎಂದು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ರಾಮಭಕ್ತ ಆಂಜನೇಯ ಭಕ್ತಿ.ನಿಷ್ಠೆ ಪರಾಕಾಷ್ಠೆ ಸಂಕೇತವಾಗಿದ್ದಾನೆ. ಶ್ರಿರಾಮನ ಗುಡಿಗಳಿಗಿಂತ ಆಂಜನೇಯನ ದೇವಾಲಯಗಳಿರುವುದೇ ವಿಶೇಷ. ಮೈಸೂರು ಮಹಾರಾಜರು ಕುಸ್ತಿ ಪಂದ್ಯಾವಳಿಗೆ ಪ್ರೊತ್ಸಾಹ ನೀಡುತ್ತಿದ್ದರು. ಒಂದುಮನೆಯಲ್ಲಿಪೈಲ್ವಾನ್ ಇದ್ದಾನೆ ಎಂದರೆ ಅಲ್ಲೊಬ್ಬ ಹನುಮ ಇದ್ದಾನೆ ಎಂದರ್ಥ. ಜಾತಿಯನ್ನು ಬದಿಗಿಟ್ಟು. ಮೆರವಣಿಗೆಯಲ್ಲಿ ಪ್ರದರ್ಶಿಸಿದ ಒಗ್ಗಟ್ಟು ಪ್ರತಿ ಮನೆಮನೆಗಳಲ್ಲೂ ಆಗಬೇಕು. ಹಾಗಾದಾಗ ಭಾರತದಲ್ಲಿ ಹಿಂದೂಧರ್ಮ ಉಳಿಯುತ್ತದೆ. ಹಿಂದೂಗಳು ಉಳಿಯುತ್ತಾರೆ. ನಿರ್ಲಕ್ಷ್ಯ ವಹಿಸಿದರೆ ಬಾಂಗಾ ಹಾಗು ಪಾಕಿಸ್ತಾನದಲ್ಲಿ ಹಿಂದೂಗಳು ನಾಶವಾದಂತೆ ಭಾರತದಲ್ಲೂ ನಾಶವಾದರೂ ಆಶ್ಚರ್ಯವಿಲ್ಲ ಎಂಬ ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್ ನಿರಂಜನ್ ಕುಮಾರ್, ಪುನೀತ್ ಕೆರೆಹಳ್ಳಿ ಮುಖಂಡರಾದ ಎಂ. ರಾಮಚಂದ್ರ, ಜಯಸುಂದರ. ನೂರೊಂದುಶೆಟ್ಟಿ, ಬಾಲಸುಬ್ರಹ್ಮಣ್ಯ. ಸೂರ್ಯ. ಹಿಂದೂಸಂಘಟನೆಗಳು, ಎಲ್ಲ ಸಮುದಾಯಗಳ ಯಜಮಾನರು, ಹನುಮಜಯಂತೋತ್ಸವ ಸಮಿತಿ ಜಿಲ್ಲಾಧ್ಯಕ್ಷ ರಾಜೇಂದ್ರ, ಪ್ರದಾನಕಾರ್ಯದರ್ಶಿ ಪುಟ್ಟರಾಜು, ಸದಸ್ಯರಾದ ಮನು, ಮಧು. ಶಿವು ಸಂಚಾಲಕ ಪ್ರವೀಣ್ ಭಾಗವಹಿಸಿದ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ