ಉತ್ತರ ಕರ್ನಾಟಕದಲ್ಲಿ ಅಖಿಲ ಭಾರತ ರಡ್ಡಿ ಸಮಾವೇಶ

KannadaprabhaNewsNetwork |  
Published : May 24, 2024, 12:52 AM IST
23ಆರ್‌ಎಂಡಿ1, | Kannada Prabha

ಸಾರಾಂಶ

ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ 602ನೇ ಜಯಂತ್ಯುತ್ಸವದಲ್ಲಿ ಸಚಿವ ರಾಮಲಿಂಗಾರಡ್ಡಿ ಭರವಸೆ

ಕನ್ನಡಪ್ರಭ ವಾರ್ತೆ ರಾಮದುರ್ಗರಡ್ಡಿ ಸಮಾಜದ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದ ಜನರನ್ನು ಒಂದಡೇ ಸೇರಿಸಲು ಶೀಘ್ರದಲ್ಲಿ ಉತ್ತರ ಕರ್ನಾಟಕದಲ್ಲಿ ಅಖಿಲ ಭಾರತ ರಡ್ಡಿ ಸಮಾವೇಶ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಹೇಳಿದರು.

ತಾಲೂಕಿನ ಚಿಪ್ಪಲಕಟ್ಟಿಯಲ್ಲಿ ಹೇಮವೇಮ ಸಮಿತಿ ಮತ್ತು ವೇಮನ ವಿದ್ಯಾವರ್ದಕ ಸಮಿತಿಯ ಸಹಯೋಗದಲ್ಲಿ ಗುರುವಾರ ನಡೆದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ 602ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದೆಲ್ಲಡೆ ಇರುವ ರಡ್ಡಿ ಸಮಾಜದ ಜನರನ್ನು ಸೇರಿಸಿ ಅಖಿಲ ಭಾರತ ಮಟ್ಟದ ಸಮಾವೇಶ ನಡೆಸಲು ಈ ಭಾಗದ ಜನರು ಸಹಕಾರ ನೀಡಬೇಕು ಎಂದು ಕೋರಿದರು.

ರಡ್ಡಿ ಸಮಾಜವನ್ನು ಮತ್ತೊಂದು ಸಮಾಜದ ಜೊತೆ ಸಂಘರ್ಷ ಮಾಡುವುದಕ್ಕೆ ಸಂಘಟಿಸುತ್ತಿಲ್ಲ. ಸಮಾಜದ ಇತಿಹಾಸವನ್ನು ಸಮಾಜದ ಮುಂದಿನ ಪೀಳಿಗೆಗೆ ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮರ ಜೀವನ ಚರಿತ್ರೆಯ ಜೊತೆಗೆ ಮತ್ತೊಂದು ಸಮಾಜದ ಜೊತೆ ಸಹಬಾಳ್ವೆ ನಡೆಸುವ ಕುರಿತು ತಿಳಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಮಾತನಾಡಿ, ಪ್ರತಿಯೊಬ್ಬ ಹೆಣ್ಣುಮಕ್ಕಳು ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ರಡ್ಡಿ ಸಮಾಜದ ಜನರು ವೇಮನರ ಮತ್ತು ಮಲ್ಲಮ್ಮರ ಜಯಂತಿಗಳನ್ನು ಅದ್ಧೂರಿಯಾಗಿ ಆಚರಿಸಿದರೇ ಸಾಲದ ಅವರ ಜೀವನ ಚರಿತ್ರೆಯನನು ಅಧ್ಯಯನ ಮಾಡಿ ಭವಿಷ್ಯದ ಜನರಿಗೆ ತಿಳಿಸುವ ಕೆಲಸವಾಗಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಆಚರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಯರೇಹೊಸಳ್ಳಿ ರಡ್ಡಿ ಗುರು ಪೀಠದ ವೇಮನಾನಂದ ಮಹಾಸ್ವಾಮೀಜಿ, ಚಿಪ್ಪಲಕಟ್ಟಿಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಡ್ಡಿ ಸಮಾಜದ ತಾಲೂಕಾಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ವಹಿಸಿದ್ದರು. ವೇದಿಕೆಯಲ್ಲಿ ರಡ್ಡಿ ಜನಸಂಘದ ನಿರ್ದೇಶಕರಾದ ಕೃಷ್ಣಾರೆಡ್ಡಿ ಖಜ್ಜಿಡೋಣಿಯ ಕೃಷ್ಣಾನಂದ ಶರಣರು, ಮಾಜಿ ಶಾಸಕ ಆರ್.ವಿ.ಪಾಟೀಲ, ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳೂರ, ಸಮಾಜದ ಮುಖಂಡರಾದ ಚನ್ನಬಸವರಾಜ ಹಿರೇರಡ್ಡಿ, ರಾಜೇಂದ್ರ ಪಾಟೀಲ, ಡಾ.ಕೆ.ವಿ.ಪಾಟೀಲ, ರಮೇಶ ಅಣ್ಣಿಗೇರಿ, ಮಂಜುಳಾ ದೇವರಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಸಂತ ಕುಲಗೋಡ ಸ್ವಾಗತಿಸಿದರು. ಆರ್.ಎಸ್.ಪಾಟೀಲ ನಿರೂಪಿಸಿದರು. ಅಶೋಕ ಬೂದಿ ವಂದಿಸಿದರು.

----------

ಬೆಂಗಳೂರಿನಲ್ಲಿ ಮತ್ತು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಸಮುದಾಯ ಭವನಗಳ ನಿರ್ಮಾಣ ಮಾಡುವ ಮೂಲಕ ರಡ್ಡಿ ಸಮಾಜದ ಮತ್ತು ಉಳಿದ ಸಮಾಜದ ಜನರಿಗೆ ಅನುಕೂಲ ಕಲ್ಪಿಸಲಾಗುವುದು. ಸಿಎಂ ಸಿದ್ದರಾಮಯ್ಯನವರು ರಡ್ಡಿ ಸಮಾಜದ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಿದ್ದು ಅವರ ಅವಧಿಯಲ್ಲಿಯೇ ಮಹಾಯೋಗಿ ವೇಮನರ ಮತ್ತು ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ನಿರ್ಧರಿಸಲಾಗಿದೆ.

-ರಾಮಲಿಂಗಾರಡ್ಡಿ, ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ